ಬಿಜೆಪಿಯ ಸ್ಟಾರ್ ಪ್ರಚಾರಕರಾಗಲಿದ್ದಾರೆ ಸೂಪರ್‌ಸ್ಟಾರ್‌ ಕಿಚ್ಚ ಸುದೀಪ್‌

Bangalore : ರಾಜ್ಯ ವಿಧಾನಸಭಾ ಚುನಾವಣೆಗೆ (Assembly election) ದಿನಗಣನೆ ಶುರುವಾಗಿದೆ. ಮೂರು ಪಕ್ಷಗಳು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಪ್ರಚಾರ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು, ಸ್ಟಾರ್‌ ಪ್ರಚಾರಕರನ್ನು (Sudeep entry into politics) ಬಳಸಿಕೊಳ್ಳಲು ಮೂರು ಪಕ್ಷಗಳು ರಣತಂತ್ರ ರೂಪಿಸುತ್ತಿವೆ.

ಕೇವಲ ರಾಜಕೀಯ ನಾಯಕರನ್ನು ಪ್ರಚಾರದಲ್ಲಿ ನಿಯೋಜಿಸುವುದಲ್ಲದೆ, ಸ್ಟಾರ್‌ ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆತರಲು ಬಿಜೆಪಿ (bjp) ಸಿದ್ದತೆ ನಡೆಸಿದೆ.

ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಸ್ಟಾರ್ ಪ್ರಚಾರಕರಾಗಿ ಹಲವಾರು ಕನ್ನಡ ನಟರನ್ನು ಕರೆತರಲು ಸಂಪರ್ಕಿಸಿದೆ.

ಇವರಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್ (Actor Sudeep) ಪ್ರಚಾರಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಈ ಕುರಿತು ನಟ ಸುದೀಪ್‌ಅವರು ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮೂಲಗಳ ಪ್ರಕಾರ, ಕಿಚ್ಚ ಸುದೀಪ್‌ಅವರು ಬಿಜೆಪಿ ಪರ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/declaration-of-asaduddin-owaisi/

ಇನ್ನು ಇದು ಕಿಚ್ಚ ಸುದೀಪ್ ಅವರ ಮೊದಲ ರಾಜಕೀಯ ಪ್ರವೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಿ ಕಿಚ್ಚ ಸುದೀಪ್‌ ಬಿಜೆಪಿ (Sudeep entry into politics) ಪರ ಪ್ರಚಾರ ನಡೆಸಲಿದ್ದಾರೆ.

ಕಿಚ್ಚ ಸುದೀಪ್ ಅವರು ಪರಿಶಿಷ್ಟ ವರ್ಗದ ನಾಯಕ ಜಾತಿಗೆ ಸೇರಿದವರಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾಯಕ ಸಮುದಾಯದ ಹಿಡಿತವಿದೆ.

ಹೀಗಾಗಿ ನಾಯಕ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಕಿಚ್ಚ ಸುದೀಪ್‌ ಅವರ ಮೋರೆಹೋಗಿದೆ. ಕಳೆದ ತಿಂಗಳ ಫೆಬ್ರವರಿಯಲ್ಲಿ,

ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದರು.

ಕಾಂಗ್ರೆಸ್‌ ಸೇರುವಂತೆ ಡಿಕೆ ಶಿವಕುಮಾರ್‌ (DK Sivakumar) ಅವರು ಸುದೀಪ್‌ ಅವರನ್ನು ಒತ್ತಾಯಿಸಿದ್ದರು ಎನ್ನಲಾಗಿತ್ತು.

ಆದರೆ ಇದೆಲ್ಲದರ ಮಧ್ಯೆ ಕಿಚ್ಚ ಸುದೀಪ್‌ಅವರು ಬಿಜೆಪಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ 124 ಮತ್ತು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ.

ಪಕ್ಷದ ಕೇಂದ್ರ ನಾಯಕತ್ವವು ಏಪ್ರಿಲ್ 8 ರಂದು ಅಂತಿಮಗೊಳಿಸಿದ ನಂತರ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

Exit mobile version