ಯಾವ ರಾಜಕೀಯ ಪಕ್ಷಕ್ಕೆ ನೀವು ಸೇರ್ಪಡೆಯಾಗುತ್ತೀರಿ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್‌ ಕೊಟ್ಟ ಉತ್ತರ ಹೀಗಿದೆ!

Bengaluru : ನೀವು ಯಾವ ರಾಜಕೀಯ ಪಕ್ಷಕ್ಕೆ ಸೇರುತ್ತೀರಿ ಎಂಬ ಪ್ರಶ್ನೆಗೆ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್‌(Kiccha Sudeepa) ಅವರು ಕೊಟ್ಟಿರುವ ಉತ್ತರ ಹೀಗಿದೆ. ನನಗೆ ಆ ಎರಡು ಪಕ್ಷಕ್ಕಿಂತ (sudeepa vs politics) ಮೂರನೇ ಪಕ್ಷ ಮುಖ್ಯ ಎಂದು ಹೇಳಿರುವುದು ಇದೀಗ ತೀವ್ರ ಕುತೂಹಲವನ್ನು ಕೆರಳಿಸಿದೆ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಪ್ರತಿಪಕ್ಷಗಳಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ತೀವ್ರ ಚರ್ಚೆಯಾಗುತ್ತಿದೆ.

ಕಿಚ್ಚ ಸುದೀಪ್‌ ಅವರು ಅಧಿಕೃತವಾಗಿ ಎಲ್ಲಿಯೂ ಹೇಳದೆ ಇದ್ದರೂ ಕೂಡ ಅವರ ಅಭಿಮಾನಿಗಳು ಮತ್ತು ಜನಸಾಮಾನ್ಯರು ಸುದೀಪ್‌ ಅವರು ರಾಜಕೀಯ ಅಖಾಡಕ್ಕೆ ಕಾಲಿಡಲಿದ್ದಾರೆ ಎಂದು ತಮ್ಮಲ್ಲೇ ತಾವು ಮಾತನಾಡಿಕೊಂಡಿದ್ದಾರೆ.

ಇದು ವದಂತಿಯಾಗಿ ಪರಿವರ್ತನೆಗೊಂಡು ಸಾಮಾಜಿಕ ಜಾಲತಾಣದಲ್ಲಿ(Social Media) ಪ್ರಶ್ನಿಸುವಂತೆ ಮಾಡಿತು.

ನಟ ಕಿಚ್ಚ ಸುದೀಪ್‌ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ? ಯಾವ ಪಕ್ಷ? ಅದು ಕಾಂಗ್ರೆಸ್? ಅಥವಾ ಬಿಜೆಪಿ? ಎಂಬ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದ್ದಾರೆ.

ಸದ್ಯ ಈ ಮಹತ್ವದ ಬೆಳವಣಿಗೆಗಳ ಮಧ್ಯೆ ಇದೀಗ ಸ್ವತಃ ನಟ ಕಿಚ್ಚ ಸುದೀಪ್ ಅವರು ತಾವು ರಾಜಕೀಯಕ್ಕೆ (sudeepa vs politics) ಬರುತ್ತೀರಿ ಎಂಬ ಹಲವು ಚರ್ಚೆಗೆ ಪರೋಕ್ಷವಾಗಿ ತೆರೆ ಎಳೆದಿದ್ದಾರೆ!

ಹೌದು, ನೀವು ಯಾವ ಪಕ್ಷಕ್ಕೆ ಸೇರುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಪಕ್ಷಕ್ಕಿಂತ ನನಗೆ ಮೂರನೇ ಪಕ್ಷ (ಜನರ ಪಕ್ಷ) ಮುಖ್ಯ! ನನಗೆ ರಾಜಕೀಯಕ್ಕಿಂತ ಜನರೇ ಮುಖ್ಯ ಎಂದು ನಟ ಸುದೀಪ್ ಹೇಳಿದ್ದಾರೆ.

ಈ ಹೇಳಿಕೆಯ ಮುಖೇನ ತಾವು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದೇನೆ ಎಂಬ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಕಿಚ್ಚ ಸುದೀಪ್‌ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲ್ಲ ಎಂಬುದು ಸದ್ಯ ಖಚಿತವಾಗಿದೆ!

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣ ಸೇರಿದಂತೆ ನಟ ಕಿಚ್ಚ ಸುದೀಪ್ ಅವರಿಗೆ ಅನೇಕರು ನೀವು ಡಿ.ಕೆ ಶಿವಕುಮಾರ್‌(DK Shiva Kumar) ಅವರೊಟ್ಟಿಗೆ ಕಾಣಿಸಿಕೊಂಡಿದ್ದೀರಿ,

ಇದೇನು ಕಾಂಗ್ರೆಸ್‌ಗೆ ಸೇರುವ ಮುನ್ಸೂಚನೆಯೇ? ಎಂದು ಪ್ರಶ್ನಿಸಿದ್ದರು! ಅದರಂತೆ ಇನ್ನು ಕೆಲವರು ನೀವು ಬಿಜೆಪಿ ಪಕ್ಷದ ನಾಯಕರೊಡನೆ ಉತ್ತಮ ಸಂಬಂಧ ಹೊಂದಿದ್ದೀರಿ? ಬಿಜೆಪಿ ಪಕ್ಷವನ್ನು ಸೇರುತ್ತೀರಾ?

ಎಂದು ಎರಡು ಪಕ್ಷವನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು. ಈ ವದಂತಿಗಳ ಬಗ್ಗೆ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳು ನೀವು ರಾಜಕೀಯಕ್ಕೆ ಹೋಗಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ನೀವು ರಾಜಕೀಯಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Exit mobile version