ಸಿನಿಮಾದ ಹೆಸರು “ಶುಗರ್ ಲೆಸ್” ; ಕಥೆ ಮಾತ್ರ ಬಹಳ ‘ಸ್ವೀಟ್’

SUGARLESS

ಕನ್ನಡ ಚಿತ್ರರಂಗದಲ್ಲಿ(Kannada Film Industry) ಒಂದೊಂದು ವಾರ ಕಳೆದಂತೆ, ಒಂದೊಂದು ವಿಭಿನ್ನ ಕಥಾಹಂದರದ ಸಿನಿಮಾಗಳು ಸಿನಿಪ್ರೇಕ್ಷಕರ ಎದುರು ಹಾಜರಾಗುತ್ತಿವೆ. ಅದೇ ಸಾಲಿನಲ್ಲಿ ಈ ವಾರ, ಎಂ. ಶಶಿಧರ್ ಅವರ ನಿರ್ಮಾಣ ಹಾಗೂ ನಿರ್ದೇಶನದ, ನಟ ಪೃಥ್ವಿ ಅಂಬರ್(Prithvi Ambar) ಹಾಗೂ ನಟಿ ಪ್ರಿಯಾಂಕಾ ತಿಮ್ಮೇಶ್(Priyanaka Thimmesh) ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಶುಗರ್ ಲೆಸ್”(Sugar Less) ಚಿತ್ರ ಜುಲೈ ೮ ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.


“ದಿಯಾ”(Diya) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತಮ್ಮದೇ ಆದ ಐಡೆಂಟಿಟಿ ಪಡೆದುಕೊಂಡ ನಟ‌ ಪೃಥ್ವಿ ಅಂಬರ್ ಸದ್ಯ ಬೈರಾಗಿ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇದರ ಜೊತೆಗೆ “ಶುಗರ್ ಲೆಸ್” ಸಿನಿಮಾದ ಬಗ್ಗೆ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಈ ಸಿನಿಮಾದ ಕಥೆಯಾಗಿದೆ, ಹಿರಿಯ ನಿರ್ದೇಶಕರಾದ ಎಸ್.ನಾರಾಯಣ್ ಅವರು ವೈದ್ಯರ ಪಾತ್ರದಲ್ಲಿ ನಟಿಸಿದ್ದಾರೆ.

ಹಿರಿಯ ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ನವರ ತೊಂದರೆಗಳ ಬಗ್ಗೆ, ಅಂದ್ರೆ ಮಕ್ಕಳು, ಯುವಕರು ಹಾಗೂ ವಯಸ್ಸಾದವರ ತೊಂದರೆಗಳ ಬಗ್ಗೆ ಹೇಳಲಾಗಿದೆ. ಕಥೆ ಗಂಭೀರವಾಗಿದೆ ಎನಿಸಿದ್ರೂ, ಇಡೀ ಚಿತ್ರವನ್ನು ಹಾಸ್ಯ ರೂಪದಲ್ಲೇ ಹೇಳಲಾಗಿದೆ. ಇದು ಪ್ರತಿಯೊಂದು ಕುಟುಂಬಗಳಿಗೂ ಸಂಬಂಧಿಸಿದ ಸಿನಿಮಾವಾಗಿದೆ ಎಂದೇ ಹೇಳಬಹುದು. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು, ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್, ಬಿಪಿ,‌ ಹಾರ್ಟ್ ಅಟ್ಯಾಕ್ ನಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.

ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎನ್ನುವುದನ್ನ ಮನೋರಂಜನೆಯ ಮೂಲಕ ಹೇಳುವ ಪ್ರಯತ್ನ ಈ ಚಿತ್ರದ್ದಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದ್ದು, ಅನೂಪ್ ಸೀಳಿನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇನ್ನು, ಶುಗರ್ ಲೆಸ್ ಸಿನಿಮಾದ ರಿಮೇಕ್ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಸಿನಿಮಾದ ಹಿಂದಿ ರಿಮೇಕ್ ಹಕ್ಕುಗಳನ್ನು ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್‌ನ ಶಿವ ಆರ್ಯನ್ ಅವರು ಖರೀದಿ ಮಾಡಿದ್ದಾರೆ. ಸಿನಿಮಾದ ಮೇಕಿಂಗ್ ನ ಜೊತೆಗೆ ಕಂಟೆಂಟ್ ಕೂಡಾ ಇಷ್ಟವಾದ ಕಾರಣ ಶಿವ ಆರ್ಯನ್ ಅವರು ಉತ್ತಮ ಬೆಲೆಗೆ ರಿಮೇಕ್ ಹಕ್ಕನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Exit mobile version