ಹೃದಯ ವಿದ್ರಾವಕ ಘಟನೆ ; ಸಹೋದರನ ಶವದೊಂದಿಗೆ ರಸ್ತೆಯ ಪಕ್ಕದಲ್ಲಿ ಕುಳಿತ 8 ವರ್ಷದ ಬಾಲಕ!

ಮಧ್ಯಪ್ರದೇಶ : ಭಾರತದ(India) ಮಧ್ಯಪ್ರದೇಶದಲ್ಲಿ(Madhyapradesh) ಎಂಟು ವರ್ಷದ ಬಾಲಕ ತನ್ನ ಪುಟ್ಟ ಸಹೋದರನ ಶವದೊಂದಿಗೆ ರಸ್ತೆಯಲ್ಲಿ ಕುಳಿತಿರುವ ಹೃದಯ ವಿದ್ರಾವಕ(Heart Wrenching) ದೃಶ್ಯ ಕಂಡುಬಂದಿದೆ.

ತನ್ನ ಸಹೋದರನ ಮೃತದೇಹವನ್ನು ತೊಡೆಯ ಮೇಲೆ ಮಲಗಿಸಿಕೊಂಡು ರಸ್ತೆಬದಿ ತಂದೆಯ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದಾನೆ.

ತಂದೆ ಮನೆಗೆ ಹೋಗಲು ರಸ್ತೆಯ ಅಕ್ಕಪಕ್ಕದಲ್ಲಿ ಯಾವುದಾದರೂ ವಾಹನ ಸಿಗುತ್ತದೆಯೋ ಎಂದು ಹುಡುಕಾಡುವಾಗ, ಬಾಲಕ ಸಹೋದರನ ಮೃತದೇಹವನ್ನು(Dead Body) ನೋಡಿಕೊಂಡು ಕುಳಿತ್ತಿದ್ದಾನೆ.

ಮಧ್ಯಪ್ರದೇಶದ, ಮೊರೆನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ, ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಜಾತವ್ ಅವರು ತಮ್ಮ ಎರಡು ವರ್ಷದ ಮಗ ರಾಜನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು.

ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ತದನಂತರ, ಶವಸಂಸ್ಕಾರದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ತನ್ನ ಮಗುವಿನ ದೇಹವನ್ನು ತನ್ನ ಗ್ರಾಮಕ್ಕೆ ಕೊಂಡೊಯ್ಯಲು ಸಹಾಯಕ್ಕಾಗಿ ಜಾತವ್ ಆಸ್ಪತ್ರೆಯ ಆಡಳಿತವನ್ನು ಕೇಳಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು ಸಹಾಯವನ್ನು ನೀಡಲು ವಿಫಲರಾಗಿದ್ದಾರೆ ಮತ್ತು ಖಾಸಗಿ ಆಂಬ್ಯುಲೆನ್ಸ್‌ಗಳ ಸಹಾಯ ಕೇಳಿದರೆ, ಒಬ್ಬ ಬಡ ತಂದೆಗೆ ಆಂಬ್ಯುಲೆನ್ಸ್ ನೀಡಲು ಚಾಲಕರು ಸಹ ಮುಂದಾಗಿಲ್ಲ! “ಖಾಸಗಿ ಆಂಬ್ಯುಲೆನ್ಸ್ ಬಾಡಿಗೆಗೆ ಪಡೆಯಲು ನನ್ನ ಬಳಿ ಹಣವಿಲ್ಲದ ಕಾರಣ, ನಾನು ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದೆ.

ವಾಹನದ ವ್ಯವಸ್ಥೆ ಮಾಡುವಾಗ, ನನ್ನ ಹಿರಿಯ ಮಗನನ್ನು ರಸ್ತೆಯ ಮೇಲೆ ತಮ್ಮನ ಶವದೊಂದಿಗೆ ಕುಳಿತುಕೊಳ್ಳಲು ಹೇಳಿದೆ” ಎಂದು ಜಾತವ್ ದುಃಖದಿಂದ ಹೇಳಿಕೊಂಡಿದ್ದಾರೆ.

https://vijayatimes.com/actress-sai-pallavi-statement/

ಬಾಲಕ ತನ್ನ ತಮ್ಮನ ಮೃತದೇಹದೊಂದಿಗೆ ರಸ್ತೆಬದಿಯಲ್ಲಿ ಕುಳಿತಿದ್ದನ್ನು ಕೆಲವರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಆಗಮನದ ನಂತರ, ತಂದೆ ತನ್ನ ಮಗುವಿನ ಶವವನ್ನು ಮನೆಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ

ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಹಿರಿಯ ರಾಜಕಾರಣಿಗಳು ಸೇರಿದಂತೆ ನೆಟ್ಟಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.

Latest News

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ