ಶಾಲಾ ಮಕ್ಕಳಿಗೆ ಗಂಧದಗುಡಿ ತೋರಿಸಿ ; ಪುನೀತ್ ನೆನಪು, ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ : ಚಕ್ರವರ್ತಿ ಸೂಲಿಬೆಲೆ

Bengaluru : ಶಾಲಾ ಮಕ್ಕಳಿಗೆ ಗಂಧದಗುಡಿ(Sulibele likes Gandadgudi) ತೋರಿಸಿ, ಪುನೀತ್ ಅವರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ ಎಂದು ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarthy Sulibele) ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್‌(Sulibele likes Gandadgudi) ಮಾಡಿರುವ ಅವರು,

ನಾಗೇಶ್ ಜಿ, ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯ ಜೀವಿಗಳ ಕುರಿತಂತೆ ಆಸಕ್ತಿ ಮತ್ತು ಪ್ರೀತಿ ಹುಟ್ಟಿಸುವಂಥದ್ದಾಗಿದೆ.

ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರ ಅವರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು “ಗಂಧದಗುಡಿ” ಚಿತ್ರ ವೀಕ್ಷಿಸಿ,

“ರಾಜ್ಯದ ರಮಣೀಯ ಪ್ರಕೃತಿ ಸೌಂದರ್ಯ, ವನ್ಯ ಮೃಗಗಳು, ನದಿ, ಸಮುದ್ರ, ಜಲಚರಗಳನ್ನು ಕಣ್ಮನ ತುಂಬುವಂತೆ ಚಿತ್ರಿಸಿ, ಮಹತ್ವದ ಸಂದೇಶವನ್ನು ನೀಡುವ ‘ಕರ್ನಾಟಕ ರತ್ನ’, ಯುವ ಜನತೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಪರಿಸರ ಪ್ರೀತಿಯ ‘ಗಂಧದಗುಡಿ’ ಇಂದು ಬಿಡುಗಡೆಯಾಗಿದೆ.

ಇದನ್ನೂ ಓದಿ : https://vijayatimes.com/siddaramaiah-about-bridge-collapse/

ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್‌ ಮಾಡಿದ್ದರು. ಶಿಕ್ಷಣ ಸಚಿವರ ಈ ಟ್ವೀಟ್‌ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ  ನಟ ಪುನೀತ್‌ರಾಜಕುಮಾರ್‌ ಅವರ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

https://youtu.be/kY6kuAgq0Cg ಸಾಲು-ಸಾಲು ಸಮಸ್ಯೆಗಳ ಊರು!

“ನಟ ಪುನೀತ್‌ ಅವರನ್ನು ಇಷ್ಟೊಂದು ಆರಾಧಿಸುವ ಅಗತ್ಯವೇನಿದೆ? ಅವರೇನು ಸೈನಿಕರೇ?” ಎಂದು ಚಕ್ರವರ್ತಿ ಪ್ರಶ್ನಿಸಿದ್ದಾರೆ ಎನ್ನಲಾದ ನಕಲಿ ಟ್ವೀಟ್‌ ಎಲ್ಲೆಡೆ ವೈರಲ್‌ ಆಗಿತ್ತು.

ಸೂಲಿಬೆಲೆ ಅವರ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು,

“ಕಾಂಗ್ರೆಸ್ಸಿಗರೇ, ನಿಮಗೆ ಚಕ್ರವರ್ತಿ ಸೂಲಿಬೆಲೆ ಎಂಬ ಅಪ್ಪಟ ದೇಶಪ್ರೇಮಿ ಬಗ್ಗೆ ಮತ್ಸರ ಮತ್ತು ಭಯವಿದ್ದರೆ ನೇರ ಹೋರಾಟ ಮಾಡಿ, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ಎಚ್ಚರಿಕೆ ನೀಡಿದ್ದರು.

Exit mobile version