21 ಕೋಟಿ ಮೌಲ್ಯದ ಜನಪ್ರಿಯ ಕೋಣ ಸಾವು

ಚಂಡೀಗಢ ಅ 1 : ಬರೋಬ್ಬರಿ 21 ಕೋಟಿ  ಮೌಲ್ಯದ ಸುಲ್ತಾನ್ ಎಂಬ ಹೆಸರಿನ ಕೋಣ ಅನಿರೀಕ್ಷಿತವಾಗಿ ಹೃದಯಾಘಾತದಿಂದ ಮೃತಪಟ್ಟಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಅಜಾನುಬಾಹು ಈ ಸುಲ್ತಾನನ ಮೌಲ್ಯ ಬರೋಬ್ಬರಿ 21 ಕೋಟಿ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅದರ ಪೂರ್ಣ ಹೆಸರು ಸುಲ್ತಾನ್ ಜೋಟೆ, ಇದು ಹೃದಯಾಘಾತದಿಂದ ಸುಲ್ತಾನ್ ಅನಿರೀಕ್ಷಿತವಾಗಿ ಮೃತಪಟ್ಟಿದೆ ಎಂದು ವೈದರು ದೃಢಪಡಿಸಿದ್ದಾರೆ

ಈ ಕೋಣವು  2013 ರಲ್ಲಿ ನಡೆದ ಅಖಿಲ ಭಾರತ ಎನಿಮಲ್ ಬ್ಯೂಟಿ ಸ್ಪರ್ಧೆಯಲ್ಲಿ ಹರಿಯಾಣ ಸೂಪರ್ ಬುಲ್, ಜಜ್ಜಾರ್, ಕರ್ನಾಲ್ ಮತ್ತು ಹಿಸಾರ್ ಪ್ರಶಸ್ತಿಗಳನ್ನು ಗೆದ್ದಿದೆ.ಸುಲ್ತಾನ್ 6 ಅಡಿ ಉದ್ದ ಮತ್ತು ಒಂದು ಟನ್ ತೂಕ ಹೊಂದಿತ್ತು ಎಂದು ಮಾಲೀಕ ನರೇಶ್ ತಿಳಿಸಿದ್ದಾರೆ. ಅವನು ಪ್ರತಿದಿನ 10 ಲೀಟರ್ ಹಾಲು, 20 ಕೆಜಿ ಕ್ಯಾರೆಟ್, 10 ಕೆಜಿ ಸೊಪ್ಪು ಮತ್ತು 12 ಕೆಜಿ ಒಣಹುಲ್ಲನ್ನು ಸೇವಿಸುತ್ತಿದ್ದನು. ಎಂದು ಮಾಲೀಕ ತಿಳಿಸಿದ್ದಾರೆ.  ಜೊತೆಗೆ ಸಂಜೆಯ ವೇಳೆ ಆಲ್ನೋಹಾಲ್ ಪ್ರಮಾಣ ಕಡಿಮೆ ಇರುವ ಮದ್ಯ ಮತ್ತು ವೈನ್ ಕುಡಿಯುವುದು ಸುಲ್ತಾನನ ವಿಶೇಷತೆಯಾಗಿತ್ತು. ಸುಲ್ತಾನ್ ಬೆಲೆ 21 ಕೋಟಿ ರೂ.ಗೆ ಬಂದಿದ್ದರೂ ಸಹ ರಾಜಸ್ಥಾನದ ಪುಸ್ಕರ್ ಪಶು ಮೇಳದಲ್ಲಿ ಮಾಲೀಕ ನರೇಶ್ ಮಾರಾಟ ಮಾಡಲು ಸಿದ್ಧರಿರಲಿಲ್ಲ. ಎಷ್ಟು ಕೋಟಿ ಲಭಿಸಿದರೂ ತನ್ನ ಸ್ವಂತ ಮಗುವಿನಂತೆಯೇ ಇರುವ ಸುಲ್ತಾನನನ್ನು ಮಾರಾಟ ಮಾಡುವುದಿಲ್ಲ ಎಂದು ನರೇಶ್  ಹೇಳಿದ್ದರು.

Exit mobile version