ಶಾಲೆಗಳನ್ನು ತೆರೆಯುವ ಸರ್ಕಾರದ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ – ಸುಪ್ರೀಂ ಕೋರ್ಟ್

ನವದೆಹಲಿ ಸೆ 21 : ಕೋವಿಡ್ ಕಾರಣದಿಂದ ಮುಚ್ಚಿರುವ ಶಾಲೆಗಳನ್ನು ಪ್ರಾರಂಭಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಸ್ಪಷ್ಟಪಡಿಸಿದೆ

 ಶಾಲಾ ವಿದ್ಯಾರ್ಥಿಯೊಬ್ಬ ಶಾಲೆಗಳನ್ನು ಪ್ರಾರಂಭಿಸುವಲ್ಲಿ ರಾಜ್ಯ ಸರ್ಕಾರದ ನಿರ್ಧಾರಗಳ ಬಗ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್  ನ್ಯಾಯಮೂರ್ತಿಗಳಾದ  ಡಿ ವೈ ಚಂದ್ರಚೂಢ ಮಾತನಾಡಿ, ವಿದ್ಯಾರ್ಥಿಯು ಹೀಗೆ ತನ್ನ ವಾದದ ಪರವಾಗಿ ಇರುವ ಯಾವುದೇ ಡೇಟಾ ಹೊಂದಿಲ್ಲದೆ, ಈ ರೀತಿಯಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕುವ ಬದಲಾಗಿ ತನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕು ಯಾವ ಪ್ರದೇಶದಲ್ಲಿ ಎಷ್ಟು ಇದೆ ಎಂಬುವುದನ್ನು ಸರಿಯಾಗಿ ಅವಲೋಕನ ಮಾಡಿ, ಶಾಲೆಯನ್ನು ತೆರಯುವುದು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಟ್ಟಿದ್ದು. ಈ ಶಾಲೆಗಳನ್ನು ತೆರಯುವ ವಿಚಾರವು ರಾಜ್ಯ ಸರ್ಕಾರಗಳಿಗೆಯೇ ಬಿಟ್ಟು ಬಿಡುವುದು ಉತ್ತಮ. ನಾವು ರಾಜ್ಯದ ಆಡಳಿತವನ್ನು ನಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ,ಎಂದು ಕೂಡಾ ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಡಿ ವೈ ಚಂದ್ರಚೂಢ ಉಲ್ಲೇಖಿಸಿದ್ದಾರೆ. ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವಾಗ ರಾಜ್ಯ ಸರ್ಕಾರಗಳು ಬಹಳ ಎಚ್ಚರದಿಂದ ಇರಬೇಕು. ಹೀಗಿರುವಾಗ ಕೋರ್ಟ್ ಕೂಡಾ ಈ ವಿಚಾರದಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಜಾಗರೂಕರಾಗಿರುವುದು ಮುಖ್ಯ, ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ

Exit mobile version