‘ಸತ್ಯ ಹೊರಬರಲೇಬೇಕು’: ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆ

ನವದೆಹಲಿ, ಆ. 05: ನ್ಯೂಸ್ ವರದಿಗಳಲ್ಲಿ ಉಲ್ಲೇಖಿಸಿರು ನಿಜವಾಗಿದ್ದರೆ, ಪತ್ರಕರ್ತರು, ರಾಜಕಾರಣಿಗಳು, ಜನಸಾಮಾನ್ಯರು, ಹೋರಾಟಗಾರರ ಮೇಲೆ ಭಾರತ ಸರಕಾರದಿಂದ ಇಸ್ರೇಲ್ ಸಾಫ್ಟ್ ವೇರ್ ಪೆಗಾಸಸ್ ಬಳಸಿ ನಡೆದಿದೆಯೆನ್ನಲಾದ ಬೇಹುಗಾರಿಕೆಯು ನಿಸ್ಸಂದೇಹವಾಗಿ ಬಹಳ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ, ಇದರ ಸತ್ಯ ಹೊರಬರಲೇಬೇಕೆಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಮತ್ತು ಸೂರ್ಯಕಾಂತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಆಗಸ್ಟ್ 10ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಸರಕಾರದ ಕಡೆಯಿಂದಲೂ ಒಬ್ಬರು ಉಪಸ್ಥಿತರಿರಬೇಕೆಂದು ಹೇಳಿದೆ. ಇದರ ಬಗ್ಗೆ ನೋಟಿಸ್ ಅನ್ನು ಕೋರ್ಟ್ ಇನ್ನೂ ಜಾರಿ ಮಾಡಿಲ್ಲ. ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಪೆಗಾಸಸ್ ವಿಚಾರದ ಪ್ರಸ್ತಾಪವಿರುವುದರಿಂದ, ಈ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿದೆ.

ಅರ್ಜಿದಾರರನ್ನು ಪ್ರಶ್ನಿಸಿದ ಕೋರ್ಟ್, ಫೋನ್ ಗಳು ಹ್ಯಾಕ್ ಆಗಿವೆ, ಯಾರು ಹ್ಯಾಕ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದಿದ್ದೇ ಆದರೆ ಇನ್ನೂ ಯಾಕೆ ನೀವು ಕ್ರಿಮಿನಲ್ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ? ಕೇವಲ ಮಾಧ್ಯಮ ವರದಿಗಳ ಸಹಾಯವನ್ನೇ ಯಾಕೆ ಪಡೆಯುತ್ತಿದ್ದೀರಿ? ಎಂದು ಅರ್ಜಿದಾರರಲ್ಲಿ ಕೇಳಿದೆ.

ಅರ್ಜಿದಾರರಲ್ಲಿ ಹಿರಿಯ ಪತ್ರಕರ್ತ ಎನ್. ರಾಮ್, ಭಾರತೀಯ ಎಡಿತರ್ಸ್ ಗಿಲ್ಡ್, ರಾಜ್ಯಸಬಭಾ ಸದಸ್ಯ ಜಾನ್ ಬ್ರಿಟ್ಟಾಸ್, ಮತ್ತು 5 ಇತರೆ ಪತ್ರಕರ್ತರು ಶಾಮೀಲಾಗಿದ್ದಾರೆ.

Exit mobile version