ಸಂತ್ರಸ್ತೆ ಅಪ್ರಾಪ್ತೆ ಎಂಬ ಕಾರಣಕ್ಕೆ ಆರೋಪಿಗೆ ಗಲ್ಲು ಶಿಕ್ಷೆ ನೀಡಲಾಗುವುದಿಲ್ಲ – ಸುಪ್ರೀಂ ಕೋರ್ಟ್

supreme-court

ನವದೆಹಲಿ .10 : ‘ಮೃತಳು ಅಪ್ರಾಪ್ತೆಯಾಗಿದ್ದಳು(Minor) ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ(Death Sentence) ನೀಡಲು ಆಗದು’ ಎಂದು ಸುಪ್ರೀಂ ಕೋರ್ಟ್‌(Supreme Court) ಮಹತ್ವದ ತೀರ್ಪು(Verdict) ಪ್ರಕಟಿಸಿದೆ.
2010ರಲ್ಲಿ ಗದಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ 5 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ(Murder) ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಸಜೆಯನ್ನು ಸುಪ್ರೀಂ ಕೋರ್ಟು ಸೋಮವಾರ 30 ವರ್ಷದ ಜೀವಾವಧಿ(Life Sentence) ಸಜೆಯಾಗಿ ಪರಿವರ್ತಿಸಿದೆ. ಈ ಸಂದರ್ಭದಲ್ಲಿ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. 

ಮೃತಳು ಅಪ್ರಾಪ್ತೆಯಾಗಿದ್ದಳು ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ ನೀಡಲು ಆಗದು. ಕಳೆದ 40 ವರ್ಷದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದ 67 ಪ್ರಕರಣಗಳ ವಿಚಾರಣೆ ವೇಳೆ ಇಂಥದ್ದೇ ಅಭಿಪ್ರಾಯವನ್ನು ಕೋರ್ಟ್‌ ವ್ಯಕ್ತಪಡಿಸಿತ್ತು. ಈ 67 ಪ್ರಕರಣಗಳಲ್ಲಿ 15  ಪ್ರಕರಣಗಳಲ್ಲಿ(Cases) ಮಾತ್ರ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಗಳಲ್ಲಿ ಗಲ್ಲು ಶಿಕ್ಷೆಯನನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು ಎಂದು ನ್ಯಾ. ನಾಗೇಶ್ವರರಾವ್‌ ಅವರ ಪೀಠ ಹೇಳಿದೆ.

ಈರಪ್ಪ ಸಿದ್ದಪ್ಪ ಮುರುಗಣ್ಣವರ ಎಂಬಾತನೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ. ಈತ 2019ರಲ್ಲಿ ನರಗುಂದ(Nargund) ತಾಲೂಕಿನ ಖಾನಾಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ಶವವನ್ನು(Deadbody) ಕತ್ತರಿಸಿ ಚೀಲದಲ್ಲಿ ಕಟ್ಟಿ ಸಮೀಪದ ಬೆಣ್ಣಿಹಳ್ಳಕ್ಕೆ ಎಸೆದಿದ್ದ.

ಬಳಿಕ ಈತನಿಗೆ ಗದಗ ಜಿಲ್ಲಾ ನ್ಯಾಯಾಲಯ(District Court of Gadag) ಗಲ್ಲು ಶಿಕ್ಷೆ ವಿಧಿಸಿತ್ತು. ಗದಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾದ ನಂತರ ಆ ಕೋರ್ಟು ನೀಡಿದ್ದ ಮೊದಲ ನೇಣು ಶಿಕ್ಷೆ ನೀಡಿದ ತೀರ್ಪು ಅದಾಗಿತ್ತು. ಈ ಆದೇಶವನ್ನು 2017ರ ಮಾ.6ರಂದು ಕರ್ನಾಟಕ ಹೈಕೋರ್ಟ್‌(Karnataka High Court) ಎತ್ತಿ ಹಿಡಿದಿತ್ತು. ಇದನ್ನು ಈರಪ್ಪನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ

Exit mobile version