ದೇಶವನ್ನು ಒಡೆದು ಆಳುವ ನೀತಿ ಬಿಜೆಪಿ ಡಿಎನ್ಎ ಯಲ್ಲಿದೆ: ಸುರ್ಜೇವಾಲಾ

Hubballi: ಅಂದು ಬ್ರಿಟಷರು ಹೊಸ ಕಾನೂನು ರೂಪಿಸಿ ಭಾರತೀಯರಿಗೆ ಏನೂ ಇಲ್ಲದಂತೆ ಮಾಡಿದ್ದರು. ಇಂದು ಈಸ್ಟ್ ಇಂಡಿಯಾ ಕಂಪನಿ (East India Company) ಅಂದರೆ ಅದು ಬಿಜೆಪಿ. ದ್ವಂದ್ವ ನೀತಿ ಪಾಲಿಸುವುದು ಬಿಜೆಪಿ ಡಿ.ಎನ್.ಎ ದಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಮೋದಿ ಅವರೇ ಖುದ್ದು ಖಾಲಿ ಚೊಂಬು. ಮೋದಿ ಪ್ರಧಾನಮಂತ್ರಿ ಅಲ್ಲ ಅವರು ಪರಿಧಾನ್ ಮಂತ್ರಿ. ಪ್ರತಿ ವರ್ಷ ಮೋದಿ ಅವರಿಂದ ಖಾಲಿ ಚೊಂಬು ಗ್ಯಾರಂಟಿ ಕೊಡಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ಸೇರಿ ಎಲ್ಲ ಗ್ಯಾರಂಟಿಗಳಲ್ಲಿ (Guarantee) ಚೊಂಬು ಕೊಟ್ಟಿದ್ದಾರೆ.

ಕಳೆದ 10 ವರ್ಷದಲ್ಲಿ ಮೋದಿ ಏನು ಮಾಡಿಲ್ಲ. ಜನರಿಗೆ ವಂಚನೆ ಮಾಡುವ ಕೆಲಸ ಮಾಡಿದ್ದಾರೆ. ಇದು ನಾಚಿಕೆಗೇಡಿನ ವರ್ತನೆ.10 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಅವರಿಗೆ ಹೇಳಲು ಏನೂ ಇಲ್ಲದ ಕಾರಣ, ಈಗ ಹಿಂದೂ-ಮುಸ್ಲಿಂ (Hindu-Muslim) ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಮೋದಿ ಅವರು ಭರವಸೆ ಮತ್ತು ದೂರದೃಷ್ಟಿಯ ಮೇಲೆ 2014 ರಲ್ಲಿ ಅಧಿಕಾರಕ್ಕೆ ಬಂದರು, ನೂರಾರು ಭರವಸೆ ನೀಡಿದರು ಭರವಸೆಗಳನ್ನು ಈಡೇರಿಸದೆ, ಇದೀಗ ದ್ವೇಷವನ್ನು ಹರಡುತ್ತಿದ್ದಾರೆ.

2014ರಲ್ಲಿ ನೀಡಿದ್ದ ಯಾವುದಾದರು ಭರವಸೆಯನ್ನು ಬಿಜೆಪಿ (BJP) ಈಡೇರಿಸಿದೆಯೇ. ಅದು ಸ್ವಾಮಿನಾಥನ್ ವರದಿ ಅನುಷ್ಠಾನವಿರಲಿ, ವಿದೇಶಗಳಿಂದ ಕಪ್ಪು ಹಣ ತಂದು ಜನರಿಗೆ ಹಂಚುವುದಿರಲಿ ಯಾವುದು ಮಾಡಿಲ್ಲ.ಬಿಜೆಪಿ ಪಕ್ಷ ಮಾಡಿದ್ದು ಒಂದೇ, ಭಾವನೆಗಳನ್ನು‌ ಕೆರಳಿಸುವುದು, ಬ್ರಿಟಿಷ ರಂತೆ ಒಡೆದಾಳುವ ನೀತಿ ಅನುಸರಿಸುವುದು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಮಾಡೆಲ್ ನಲ್ಲಿ ನಡೆಯುತ್ತಿದೆ ಒಂದು ಕಾಂಗ್ರೆಸ್ ನ (Congress) ಗ್ಯಾರಂಟಿ ಇನ್ನೊಂದು ಬಿಜೆಪಿಯ ಖಾಲಿ ಚೊಂಬು.

ಪ್ರಧಾನಿಯವರು ಸುಮಾರು 73 ಸಾರ್ವಜನಿಕ ಉದ್ಯಮ ಗಳನ್ನು ಖಾಸಗಿ ತೆಕ್ಕೆಗೆ ನೀಡಿದ್ದಾರೆ. 100ಕ್ಕೂ ಹೆಚ್ಚು ವಿಮಾನ ನಿಲ್ದಾಣ, ಬಂದರುಗಳು ಕೆಲವರ ಕೈಗೆ ನೀಡಿದ್ದಾರೆ, ಹಲವು ಸೈನಿಕ ಶಾಲೆ ಖಾಸಗಿಯವರ ಪಾಲಾಗಿದೆ.ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ದರಾಗಿದ್ದೇವೆ. ಬೇಕಾದರೆ ಪತ್ರಕರ್ತರೆ ಜಡ್ಜ್ ಆಗಲಿ. ಸ್ಥಳವನ್ನು ಅವರೇ ನಿಗದಿ ಮಾಡಲಿ. ಸಿಎಂ, ಡಿಸಿಎಂ (CM, DCM) ಸೇರಿ ನಮ್ಮ ಸಚಿವರು, ಮುಖಂಡರು ಚರ್ಚೆಗೆ ಸಿದ್ಧರಾಗಿದ್ದಾರೆ ಎಂದು ಸುರ್ಜೇವಾಲಾ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Exit mobile version