ಅಸ್ಸಾಂ ಸಿಎಂಗೆ ಗಿಫ್ಟ್ ಕೊಡಲು ತನ್ನದೇ ರೀತಿಯಲ್ಲಿ ‘ಲಂಬೋರ್ಗಿನಿ’ ತಯಾರಿಸಿದ ವ್ಯಕ್ತಿ ; ವೀಡಿಯೋ ವೈರಲ್

Assam : ಅಸ್ಸಾಂನ ಕರೀಂಗಂಜ್(Assam’s Karimganj) ಜಿಲ್ಲೆಯಲ್ಲಿ ಮೆಕ್ಯಾನಿಕ್(Swift Modified to Lamborghini) ಕೆಲಸ ಮಾಡುವ ವ್ಯಕ್ತಿಯೊಬ್ಬರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಲು ತಯಾರಿ ನಡೆಸಿದ್ದಾರೆ.

ಹೌದು, ಅಸ್ಸಾಂನ ಈ ವ್ಯಕ್ತಿ, ಸುಮಾರು 10 ಲಕ್ಷ ರೂ.ಕ್ಕೂ ಹೆಚ್ಚು ಖರ್ಚು ಮಾಡಿ ತಮ್ಮದೇ ಶೈಲಿಯಲ್ಲಿ ‘ಲಂಬೋರ್ಗಿನಿ'(ಅಸಲಿಯಲ್ಲ) ತಯಾರಿಸಿದ್ದಾರೆ.

31 ವರ್ಷ ವಯಸ್ಸಿನ ಮೆಕ್ಯಾನಿಕ್ ನುರುಲ್ ಹೌಕ್(Nurul Hauqe) ಎಂಬ ವ್ಯಕ್ತಿ, ಮಾರುತಿ ಸ್ವಿಫ್ಟ್ ಕಾರನ್ನು ಖರೀದಿಸಿ, ಆ ಕಾರನ್ನು ವಿಭಿನ್ನವಾಗಿ ಮಾರ್ಪಡಿಸಲು ನಾಲ್ಕು ತಿಂಗಳುಗಳ ಅವಧಿಯನ್ನು ತೆಗೆದುಕೊಂಡಿದ್ದಾರೆ.

ಈ ಜೀವನದಲ್ಲಿ ಲಂಬೋರ್ಗಿನಿ(Lamborgini) ಕಾರು ಓಡಿಸಬೇಕು ಎಂದು ಬಯಸಿದ್ದರಿಂದ ಈ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಮೆಕ್ಯಾನಿಕ್ ನುರುಲ್ ಹೌಕ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ನಾನು ದಿಮಾಪುರ್‌ನಲ್ಲಿ (ನಾಗಾಲ್ಯಾಂಡ್‌ನಲ್ಲಿ) ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದೇನೆ,

ಒಂದಿಷ್ಟು ಅನುಭವ ಪಡೆದಿದ್ದೇನೆ ಮತ್ತು ಕಾರುಗಳನ್ನು ಮಾರ್ಪಡಿಸಲು ಕಲಿಕೆಯನ್ನು ಪ್ರಾರಂಭಿಸಿದ್ದೇನೆ.

https://fb.watch/haDlmUAJ_-/ ಮೈಸೂರು : ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತಬೇಕು

ಕಳೆದ ವರ್ಷವೂ ನಾನೊಂದು ಕಾರನ್ನು ಲಂಬೋರ್ಗಿನಿಯಂತೆ ಕಾಣುವ ಸ್ಪೋರ್ಟ್ಸ್ ಕಾರಾಗಿ ಮಾರ್ಪಡಿಸಿದೆ.

ನಂತರ ನಾನು ಮತ್ತೊಂದು ಕಾರನ್ನು ಪ್ರತಿಕೃತಿಗೆ ಮಾರ್ಪಡಿಸಲು ತಯಾರಿ ನಡೆಸುತ್ತಿದ್ದೆ.

ಈ ಮಧ್ಯೆ ನನ್ನದೇ ಶೈಲಿಯಲ್ಲಿ ಒಂದು ಲಂಬೋರ್ಗಿನಿ ವಿನ್ಯಾಸ ಮಾಡಬೇಕು ಹಾಗೂ ಅದನ್ನು ನಾನು ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ(Himant Biswa Sarma) ಅವರಿಗೆ ಉಡುಗೊರೆಯಾಗಿ ನೀಡಬೇಕು ಎಂದು ಯೋಜಿಸಿದ್ದೆ.

https://www.facebook.com/Vijayatimeskannada/videos/887831029259382/?flite=scwspnss&mibextid=wDgIVwZBy2PExSHI

ಇದೇ ಕಾರಣವನ್ನು ಮೂಲವಾಗಿಟ್ಟುಕೊಂಡ ನಾನು, ಹಳೆಯ ಸ್ವಿಫ್ಟ್ ಕಾರನ್ನು ಮಾರ್ಪಡಿಸಿದೆ. ಇದು ಸುಮಾರು ನಾಲ್ಕು ತಿಂಗಳುಗಳ ಸಮಯವನ್ನು ತೆಗೆದುಕೊಂಡಿತು.

ಸದ್ಯ ಅಸ್ಸಾಂ ಮುಖ್ಯಮಂತ್ರಿ ಹಕ್ ಅವರ ಪ್ರಯತ್ನದಿಂದ ತುಂಬಾ ಪ್ರಭಾವಿತರಾದಂತಿದೆ. ಅಸ್ಸಾಂ ಸಿಎಂ ಬಿಸ್ವ ಶರ್ಮಾ ಅವರು ಹಕ್ ಅವರ ಕೆಲಸ ಮೆಚ್ಚಿದ್ದು,

ನೂರುಲ್ ಹಕ್ ಅವರಿಂದ ಜೋಡಿಸಲಾದ ‘ಲಂಬೋರ್ಗಿನಿ’ ಚಕ್ರಗಳಿಂದಲೇ ಹೆಚ್ಚು ವಿನ್ಯಾಸಗೊಂಡಿದೆ ಮತ್ತು ನೋಡಲು ಥ್ರಿಲ್ ಆಗಿದೆ ಎಂದು ಈ ವಾರದ ಆರಂಭದಲ್ಲಿ ಟ್ವೀಟ್(Tweet) ಮಾಡಿದ್ದಾರೆ.

ಸಿಎಂಗೆ ಗಿಫ್ಟ್ ಕೊಡಲು ಹಕ್ ಲ್ಯಾಂಬೋರ್ಗಿನಿ ರೀತಿ ವಿನ್ಯಾಸ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/padmabhushan-to-google-ceo/

ಮತ್ತೊಂದು ವಾಹನವನ್ನು ಬಳಸಿ ಫೆರಾರಿಯಾಗಿ ಪರಿವರ್ತಿಸುವ ಉದ್ದೇಶವಿದೆ ಎಂದು ಹಕ್ ಹೇಳಿದ್ದಾರೆ. ಸರಕಾರ ನನ್ನೊಂದಿಗೆ ಕೈ ಜೋಡಿಸಿದರೆ ಇಂತಹ ಇನ್ನಷ್ಟು ಯೋಜನೆಗಳನ್ನು ಮಾಡುತ್ತೇನೆ ಎಂದು ಹಕ್ ಹೇಳಿದ್ದಾರೆ.

Exit mobile version