ಬ್ಲಡ್ ಕ್ಯಾನ್ಸರ್ (Blood Cancer) ಅಥವಾ ರಕ್ತದ ಕ್ಯಾನ್ಸರನ್ನು ವೈಜ್ಞಾನಿಕವಾಗಿ ಹೆಮಟೊಲಾಜಿಕ್ ಕ್ಯಾನ್ಸರ್ (Hematologic Cancer) ಎಂದೂ ಕರೆಯುತ್ತಾರೆ. ಹೆಚ್ಚು ರಕ್ತ ಕ್ಯಾನ್ಸರ್ಗಳು ಮಜ್ಜೆಯಲ್ಲಿ ಪ್ರಾರಂಭವಾಗುವುದರ ಜೊತೆಗೆ ಅಲ್ಲಿ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇದು ಸಾಮಾನ್ಯ ರಕ್ತ ಕಣಗಳ ಕಾರ್ಯವನ್ನು ಅಡ್ಡಿಪಡಿಸುದರೊಂದಿಗೆ ಇದು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಹಾಗಾಗಿ ರಕ್ತದ ಕ್ಯಾನ್ಸರ್ ಉಂಟಾಗಿದೆ ಎಂಬುದರ ಕೆಲವು ಲಕ್ಷಣಗಳು ಈ ರೀತಿ ಇದೆ.
ಬ್ಲಡ್ ಕ್ಯಾನ್ಸರ್ನ ಲಕ್ಷಣಗಳು:
1] ಹೆಚ್ಚು ರಕ್ತಹೀನತೆ, ಕೆಂಪು ರಕ್ತ ಕಣಗಳ (Red Blood Cells) ಗುಣಲಕ್ಷಣಗಳನ್ನು ಹೊಂದಿರುವ ಸ್ಥಿತಿ, ಹಾಗೆಯೇ ಮೂರ್ಛೆ, ತಲೆನೋವು, ನಿರಂತರ ಆಯಾಸ ಮತ್ತು ಉಸಿರಾಟ ತೊoದರೆಯಿಂದ ಬಳಲುವಂತಾಗಬಹುದು.
2]ಈ ಕ್ಯಾನ್ಸರ್ (Cancer) ಗಾಢವಾಗಿ ಅಥವಾ ವಿಭಿನ್ನ ಬಣ್ಣದಲ್ಲಿ ಕಂಡುಬರುತ್ತವೆ ಮತ್ತು ಸ್ಪರ್ಶದ ಸೆನ್ಸಿಟಿವಿಟಿಯನ್ನು ಅನುಭವಿಸಬಹುದು. ಜ್ವರ, ಶೀತ, ನಡುಕ, ಕೆಮ್ಮುವಿಕೆ, (Fever, Chills, Cough) ಅಥವಾ ಗಂಟಲು ನೋವು ಲಕ್ಷಣಗಳು ಕಾಣಿಸಿಕೊಳ್ಳಬಹುದು.
3] ಕುತ್ತಿಗೆ ಆರ್ಮ್ಪಿಟ್ ಅಥವಾ ತೊಡೆಸಂದಿಗಳಲ್ಲಿ ಉಂಡೆಗಳನ್ನೂ, ಊತವನ್ನೂ ಉಂಟುಮಾಡುತ್ತವೆ. ಇವು ನೋವುರಹಿತವಾಗಿದ್ದು, ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದು.
4] ಈ ರೋಗಿಗಳು ರಾತ್ರಿ ಬೆವರುವ ಸಾಧ್ಯತೆ ಇದ್ದು, ಇದು ಕೂಡ ರಕ್ತ ಕ್ಯಾನ್ಸರ್ನ ಒಂದು ಲಕ್ಷಣವಾಗಿದೆ ಹಾಗೂ ಲಿಂಫೋಮಾ ರೋಗಿಗಳು (Lymphoma Patients) ಅನುಭವಿಸುವ ತೀವ್ರವಾದ ರೋಗವಾಗಿದೆ.
5] ಬ್ಲಡ್ ಕ್ಯಾನ್ಸರ್ ರೋಗಿಗಳ ದೇಹದಲ್ಲಿ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.
6] ದೇಹದ ಪ್ರತಿಕ್ರಿಯೆಯಲ್ಲಿ ಬದಲಾವಣೆ ಉoಟಾದಾಗ ದೇಹವು ಅದರ ಚಯಾಪಚಯವನ್ನು ಬದಲಾಯಿಸಲು, ಕೊಬ್ಬು ಮತ್ತು ಸ್ನಾಯುಗಳು ಸವೆಯಲು ಕಾರಣವಾಗಬಹುದು.