ಈ ರೀತಿಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಬ್ಲಡ್ ಕ್ಯಾನ್ಸರ್ ಇರಬಹುದು ಹುಷಾರ್!

ಬ್ಲಡ್ ಕ್ಯಾನ್ಸರ್ (Blood Cancer) ಅಥವಾ ರಕ್ತದ ಕ್ಯಾನ್ಸರನ್ನು ವೈಜ್ಞಾನಿಕವಾಗಿ ಹೆಮಟೊಲಾಜಿಕ್ ಕ್ಯಾನ್ಸರ್ (Hematologic Cancer) ಎಂದೂ ಕರೆಯುತ್ತಾರೆ. ಹೆಚ್ಚು ರಕ್ತ ಕ್ಯಾನ್ಸರ್​ಗಳು ಮಜ್ಜೆಯಲ್ಲಿ ಪ್ರಾರಂಭವಾಗುವುದರ ಜೊತೆಗೆ ಅಲ್ಲಿ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇದು ಸಾಮಾನ್ಯ ರಕ್ತ ಕಣಗಳ ಕಾರ್ಯವನ್ನು ಅಡ್ಡಿಪಡಿಸುದರೊಂದಿಗೆ ಇದು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಹಾಗಾಗಿ ರಕ್ತದ ಕ್ಯಾನ್ಸರ್ ಉಂಟಾಗಿದೆ ಎಂಬುದರ ಕೆಲವು ಲಕ್ಷಣಗಳು ಈ ರೀತಿ ಇದೆ.

ಬ್ಲಡ್ ಕ್ಯಾನ್ಸರ್​ನ ಲಕ್ಷಣಗಳು:
1] ಹೆಚ್ಚು ರಕ್ತಹೀನತೆ, ಕೆಂಪು ರಕ್ತ ಕಣಗಳ (Red Blood Cells) ಗುಣಲಕ್ಷಣಗಳನ್ನು ಹೊಂದಿರುವ ಸ್ಥಿತಿ, ಹಾಗೆಯೇ ಮೂರ್ಛೆ, ತಲೆನೋವು, ನಿರಂತರ ಆಯಾಸ ಮತ್ತು ಉಸಿರಾಟ ತೊoದರೆಯಿಂದ ಬಳಲುವಂತಾಗಬಹುದು.

2]ಈ ಕ್ಯಾನ್ಸರ್ (Cancer) ಗಾಢವಾಗಿ ಅಥವಾ ವಿಭಿನ್ನ ಬಣ್ಣದಲ್ಲಿ ಕಂಡುಬರುತ್ತವೆ ಮತ್ತು ಸ್ಪರ್ಶದ ಸೆನ್ಸಿಟಿವಿಟಿಯನ್ನು ಅನುಭವಿಸಬಹುದು. ಜ್ವರ, ಶೀತ, ನಡುಕ, ಕೆಮ್ಮುವಿಕೆ, (Fever, Chills, Cough) ಅಥವಾ ಗಂಟಲು ನೋವು ಲಕ್ಷಣಗಳು ಕಾಣಿಸಿಕೊಳ್ಳಬಹುದು.

3] ಕುತ್ತಿಗೆ ಆರ್ಮ್ಪಿಟ್ ಅಥವಾ ತೊಡೆಸಂದಿಗಳಲ್ಲಿ ಉಂಡೆಗಳನ್ನೂ, ಊತವನ್ನೂ ಉಂಟುಮಾಡುತ್ತವೆ. ಇವು ನೋವುರಹಿತವಾಗಿದ್ದು, ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದು.

4] ಈ ರೋಗಿಗಳು ರಾತ್ರಿ ಬೆವರುವ ಸಾಧ್ಯತೆ ಇದ್ದು, ಇದು ಕೂಡ ರಕ್ತ ಕ್ಯಾನ್ಸರ್​ನ ಒಂದು ಲಕ್ಷಣವಾಗಿದೆ ಹಾಗೂ ಲಿಂಫೋಮಾ ರೋಗಿಗಳು (Lymphoma Patients) ಅನುಭವಿಸುವ ತೀವ್ರವಾದ ರೋಗವಾಗಿದೆ.

5] ಬ್ಲಡ್ ಕ್ಯಾನ್ಸರ್ ರೋಗಿಗಳ ದೇಹದಲ್ಲಿ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.

6] ದೇಹದ ಪ್ರತಿಕ್ರಿಯೆಯಲ್ಲಿ ಬದಲಾವಣೆ ಉoಟಾದಾಗ ದೇಹವು ಅದರ ಚಯಾಪಚಯವನ್ನು ಬದಲಾಯಿಸಲು, ಕೊಬ್ಬು ಮತ್ತು ಸ್ನಾಯುಗಳು ಸವೆಯಲು ಕಾರಣವಾಗಬಹುದು.

Exit mobile version