Aryan Khan Drugs case

ಡ್ರಗ್ಸ್‌ ನಂಟು ಹಿನ್ನಲೆ ಅನನ್ಯಾ ಪಾಂಡೆ ಮನೆ ಮೇಲೆ ದಾಳಿ

ಮೂಲಗಳ ಪ್ರಕಾರ, ನ್ಯಾಯಾಲಯದಲ್ಲಿ ಸಲ್ಲಿಸಿದ ಚಾಟ್‌ನಲ್ಲಿ, ಆರ್ಯನ್ ಖಾನ್ (Aryan Khan) ಒಬ್ಬ ನಟಿಯೊಂದಿಗೆ ಮಾತುಕತೆ ನಡೆಸುತ್ತಿದ್ದು, ಇಬ್ಬರೂ ಡ್ರಗ್ಸ್ (Drugs) ಬಗ್ಗೆಯೇ  ಚರ್ಚಿಸುತ್ತಿದ್ದರು ಎನ್ನಲಾಗಿದೆ. ಆರ್ಯನ್ ಖಾನ್ ಜಾಮೀನಿನ ವಿಚಾರಣೆಗೆ ಮುನ್ನ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜೊತೆ ಮುಂಬೈ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಚರ್ಚಿಸಿರುವ ವಾಟ್ಸಾಪ್ ಚಾಟ್  ಅನ್ನು ಸಲ್ಲಿಸಿದೆ.

ಶಾರುಖ್ ಮಗ ಇನ್ನೂ ಮಗು – ಸುನೀಲ್ ಶೆಟ್ಟಿ

ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುನಿಲ್ ಶೆಟ್ಟಿ.ತಮ್ಮ ಅಭಿಪ್ರಾಯವನ್ನು ವ್ಯೆಕ್ತಪಡಿಸಿದ್ದಾರೆ.