vijaya times advertisements
Visit Channel

ಶಾರುಖ್ ಮಗ ಇನ್ನೂ ಮಗು – ಸುನೀಲ್ ಶೆಟ್ಟಿ

ಮುಂಬೈ ಅ 4 : ಶಾರುಖ್ ಮಗ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ಬೆನ್ನಲ್ಲೇ ಹಲವು ಜನ ಸೆಲಬ್ರಿಟಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಬಾಲಿವುಡ್‌ ನಟ ಸುನೀಲ್ ಶೆಟ್ಟಿಕೂಡ ಅವನಿನ್ನು ಮಗು ಅವನಿಗೆ ಉಸಿರಾಡಲು ಅವಕಾಶ ಕೊಡಿ ಎಂದು ಹೇಳಿ ಶಾರುಖ್ ಕುಟುಂಬಕ್ಕೆ ಬೆಂಬಲ ಸೂಚಿಸಿದ್ದಾರೆ.  

ಆರ್ಯನ್ ಬೆಂಬಲಕ್ಕೆ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ, ನಿಂತಿದ್ದು ಆರ್ಯನ್ ಇನ್ನೂ ಮಗು ಅವನಿಗೆ ತುಸು ಉಸಿರಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುನಿಲ್ ಶೆಟ್ಟಿ.ತಮ್ಮ ಅಭಿಪ್ರಾಯವನ್ನು ವ್ಯೆಕ್ತಪಡಿಸಿದ್ದಾರೆ.

ಬಾಲಿವುಡ್ ಉದ್ಯಮದಲ್ಲಿ ಸಣ್ಣದಾಗಿ ಏನಾದರೂ ಆದರೂ ಮಾಧ್ಯಮದಲ್ಲಿ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತದೆ. ಇದರಿಂದ ಸಾಮಾನ್ಯ ಜನ ಇದು ನಿಜವೇನೋ? ಎಂದುಕೊಳ್ಳುತ್ತಾರೆ. ಈಗ ನಡೆದಿರುವ ಘಟನೆಯಲ್ಲಿ ನಿಜವಾದ ವರದಿಗಳು ಹೊರಗೆ ಬರಲಿ. ಅಲ್ಲಿಯವರೆಗೆ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ ಸುನಿಲ್ ಶೆಟ್ಟಿ

 ಒಟ್ಟಾರೆಯಾಗಿ  ಶಾರುಖ್‌ ಪುತ್ರನಪರ, ಪರ ವಿರೋಧ ಹೇಳಿಕೆಗಳು ಕೇಳಿ ಬರುತ್ತಿದ್ದು ಸಮಗ್ರ ತನಿಖೆಯಾದರೆ ಸತ್ಯ ಹೋರಬೀಳಲಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.