ಗಡ್ಡ ಬಿಡಿ, ಟೋಪಿ ಹಾಕೋಳಿ : ತಾಲಿಬಾನ್ ಆದೇಶ!

afghanisthan

ಅಪ್ಘಾನಿಸ್ತಾನದಲ್ಲಿ(Afghanisthan) ತಾಲಿಬಾನ್(Taliban) ಸರ್ಕಾರ(Government) ಅನೇಕ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ. ಇಸ್ಲಾಮಿಕ್(Islamic) ಕಾನೂನುಗಳನ್ನು ಎಲ್ಲರೂ ಪಾಲಿಸುವಂತೆ ಆದೇಶ ಹೊರಡಿಸಿದೆ. ಅಪ್ಘಾನಿಸ್ತಾನದಲ್ಲಿ ಗಂಡಸರು ಕಡ್ಡಾಯವಾಗಿ ಗಡ್ಡ ಬಿಡಬೇಕು, ಅದೇ ರೀತಿ ಟೋಪಿ ಧರಿಸಬೇಕೆಂದು ತಾಲಿಬಾನ್ ಆದೇಶ ಹೊರಡಿಸಿದೆ ಎಂದು ಜಾಗತಿಕ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ತಾಲಿಬಾನ್ ಸರ್ಕಾರ ಜಾರಿಗೊಳಿಸಿರುವ ಕಾನೂನುಗಳ ಮೇಲ್ವಿಚಾರಣೆ ನಡೆಸಲು ‘ಸದ್ಗುಣಗಳ ಮತ್ತು ಕೆಟ್ಟ ನಡುವಳಿಕೆಗಳ ಸಚಿವಾಲಯ’ವನ್ನು ಸ್ಥಾಪಿಸಲಾಗಿದೆ. ಈ ಸಚಿವಾಲಯದ ಅಧಿಕಾರಿಗಳು ಎಲ್ಲೆಡೆ ಸಂಚಾರ ನಡೆಸಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲರ ಮೇಲ್ವಿಚಾರಣೆ ನಡೆಸಲಿದೆ. ಉದ್ದನೆ ಗಡ್ಡ ಬಿಡುವುದು, ಟೋಪಿ ಧರಿಸುವುದು, ನೀಳವಾದ ಮತ್ತು ಸಡಿಲ ಪೈಜಾಮಾ ಧರಿಸುವುದನ್ನು ತಾಲಿಬಾನ್ ಸರ್ಕಾರ ಕಡ್ಡಾಯಗೊಳಿಸಿದೆ.

ಇನ್ನು ಮಹಿಳೆಯರು ಪುರುಷರಿಲ್ಲದೆ ವಿಮಾನಯಾನ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಅದೇ ರೀತಿ ಪುರುಷರು ಜೊತೆಯಿಲ್ಲದೇ ಮಹಿಳೆಯರಿಗೆ ಪಾರ್ಕ್‍ನಲ್ಲಿ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಅದೇ ರೀತಿ ಎಲ್ಲ ನಾಗರಿಕರು ಕಡ್ಡಾಯವಾಗಿ ದಿನಕ್ಕೆ ಐದು ಬಾರಿ ನಮಾಜ್ ಮಾಡುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡದಿದ್ದರೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ.

ತಾಲಿಬಾನ್ ಸರ್ಕಾರ ಶಿಕ್ಷೆಗಳನ್ನು ಇಸ್ಲಾಮಿಕ್ ಷರಿಯತ್ ಕಾನೂನಿನ ಪ್ರಕಾರವೇ ವಿಧಿಸಲಾಗುತ್ತಿದ್ದು, ಸಾರ್ವಜನಿಕವಾಗಿ ಕಲ್ಲು ಹೊಡೆಯುವುದು, ನೇಣು ಹಾಕುವುದು, ಕಣ್ಣು ಕೀಳುವುದು ಸೇರಿದಂತೆ ಉಗ್ರ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಇನ್ನು ತಾಲಿಬಾನ್ ಸರ್ಕಾರ ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಅಲ್ಲಿ ಷರಿಯತ್ ಕಾನೂನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗಿದೆ.

ಆರನೇಯ ತರಗತಿವರೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತೇವೆಂದು ತಾಲಿಬಾನ್ ಸರ್ಕಾರ ಇತ್ತೀಚೆಗೆ ಹೇಳಿತ್ತು, ಆದರೆ ಕೊನೆ ಕ್ಷಣದಲ್ಲಿ ತನ್ನ ನಿರ್ಧಾರವನ್ನು ಬದಲಿಸಿತು. ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷಣವನ್ನು ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇನ್ನು ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಕ್ರಮಗಳಿಂದ ಆರ್ಥಿಕತೆ ನೆಲಕಚ್ಚಿದೆ. ತೀವ್ರ ಆಹಾರದ ಅಭಾವ ಸೃಷ್ಟಿಯಾಗಿದೆ.

Exit mobile version