ಜೈ ಭೀಮ್ ಖ್ಯಾತಿಯ ನಟ ಸೂರ್ಯ ವಿರುದ್ಧ ಎಫ್ಐಆರ್ ದಾಖಲಿಸಿ : ತಮಿಳುನಾಡು ಕೋರ್ಟ್!

actor

ತಮಿಳಿನ(Tamil) ಸ್ಟಾರ್ ನಟ ಸೂರ್ಯ(Actor Suriya), ಅವರ ಪತ್ನಿ ಜ್ಯೋತಿಕಾ ಹಾಗೂ ಜೈ ಭೀಮ್(Jai Bhim) ಚಿತ್ರದ ನಿರ್ದೇಶಕ(Director) ಟಿ.ಜೆ.ಜ್ಞಾನವೇಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೈದಾಪೇಟ್ ಕೋರ್ಟ್(Saidapet Court) ಚೆನ್ನೈ(Chennai) ಪೊಲೀಸರಿಗೆ ನಿರ್ದೇಶನ ನೀಡಿದೆ.

ರುದ್ರ ವನ್ನಿಯಾರ್ ಸೇನೆ ಎಂಬ ವನ್ನಿಯಾರ್ ಗುಂಪು ಈ ದೂರನ್ನು ದಾಖಲಿಸಿದ್ದು, ಹಲವಾರು ದೃಶ್ಯಗಳು ವನ್ನಿಯಾರ್ ಸಮುದಾಯವನ್ನು ಕಳಪೆಯಾಗಿ ತೋರಿಸಿವೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಿನಿಮಾ ಬಿಡುಗಡೆ ವೇಳೆಯೂ ಕೂಡ ವನ್ನಿಯಾರ್ ಸಮುದಾಯ ಜೈ ಭೀಮ್ ಸಿನಿಮಾ ನಿಷೇಧಕ್ಕೆ ಆಗ್ರಹಿಸಿತ್ತು. ತಂಡವನ್ನು ಖಂಡಿಸುವುದರ ಜೊತೆಗೆ, ವನ್ನಿಯಾರ್ ಸಂಗಮ್ ಅವರು ಆಕ್ಷೇಪಾರ್ಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಬೇಕೆಂದು ಹೇಳಿದ್ದರು.

5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಜೈ ಭೀಮ್ ತಂಡದಿಂದ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಜೈ ಭೀಮ್ ಸಿನಿಮಾ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೂ ಸೂಚಿಸಲಾಗಿತ್ತು. ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ನವೆಂಬರ್ 2 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವು ಇರುಲರ್ ಸಮುದಾಯದ ಸದಸ್ಯರ ಮೇಲೆ ವಿಧಿಸಲಾದ ಕಸ್ಟಡಿಯಲ್ ಟಾರ್ಚರ್ ಅನ್ನು ಹೊಂದಿದೆ.

ಆರಂಭದಲ್ಲಿ, ಪ್ರಕಾಶ್ ರಾಜ್ ಹಿಂದಿಯಲ್ಲಿ ಮಾತನಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವ ದೃಶ್ಯದಿಂದ ಹಿಂದಿ ಮಾತನಾಡುವ ಜನರು ಸಮಸ್ಯೆ ಎದುರಿಸಿದರು. ವನ್ನಿಯಾರ್ ಸಮುದಾಯದ ಸದಸ್ಯರು ಈ ಚಿತ್ರವು ತಮ್ಮ ಪ್ರತಿಷ್ಟೆಯನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದ್ದಾರೆ. ವನ್ನಿಯಾರ್ ಸಂಗಮ್ ನಂತರ ಸೂರ್ಯ, ಜ್ಯೋತಿಕಾ, ನಿರ್ದೇಶಕ ಟಿ.ಜೆ ಜ್ಞಾನವೇಲ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಕಾನೂನು ವಿಭಾಗದ ಮುಖ್ಯಸ್ಥ ವಕೀಲ ಬಾಲು ಅವರು ಜೈ ಭೀಮ್‌ನಲ್ಲಿನ ಕೆಲವು ದೃಶ್ಯಗಳು ವನ್ನಿಯಾರ್ ಸಮುದಾಯಕ್ಕೆ ಮಾನಹಾನಿ ಮಾಡಿದೆ ಎಂದು ಕಾನೂನು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಿ 5 ಕೋಟಿ ಪರಿಹಾರ ನೀಡಬೇಕು ಎಂದು ವನ್ನಿಯಾರ್ ಸಂಗಮ ಆಗ್ರಹಿಸಿದ್ದಾರೆ. ನೋಟಿಸ್ ನಂತರ, ವನ್ನಿಯಾರ್ ಸಮುದಾಯದ ಸದಸ್ಯರು ಸೂರ್ಯ ಅವರಿಗೆ ಬಹಿರಂಗವಾಗಿ ಹಲವು ಬೆದರಿಕೆಗಳನ್ನು ಹಾಕಿದ್ದರು ಎನ್ನಲಾಗಿದೆ.

Exit mobile version