ಮೊದಲ ಪಂದ್ಯ KKR Vs CSK ; ಎಂದಿನಂತೆ ಗೆದ್ದು ಶುಭಾರಂಭಿಸಲಿದೆಯಾ ಧೋನಿ ಪಡೆ?

csk

ಕಳೆದ ಸೀಸನ್ ಹಾಲಿ ಚಾಂಪಿಯನ್ಸ್(Champions) ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK), ಇದೇ ಶನಿವಾರ ಮಾರ್ಚ್ 26 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ(Wankhade Stadium) ಟಾಟಾ(Tata IPL 2022)ರ ಆವೃತ್ತಿಯ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್(KKR) ವಿರುದ್ಧ ಕಣಕ್ಕಿಳಿದು ಸೆಣಸಾಡಲಿದೆ.

ಮಾರ್ಚ್ 28ರ ಬಳಿಕ ಐಪಿಎಲ್ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮತ್ತು ಕರ್ನಾಟಕದ ಹೈದ ಕೆ.ಎಲ್ ರಾಹುಲ್ ನೇತೃತ್ವದಲ್ಲಿ ಪರಸ್ಪರ ಸೆಣಸಾಡಲಿವೆ. ಈ ಬಾರಿಯ ಟಾಟಾ ಐಪಿಎಲ್ ಆವೃತ್ತಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು 65 ದಿನಗಳ ಅವಧಿಯಲ್ಲಿ ಆಡಲಾಗುತ್ತದೆ. 15ನೇ ಸೀಸನ್ ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮೂಲಕ ಶುಭಾರಂಭವಾಗಲಿದೆ.

ಮಾರ್ಚ್ 27 ರಂದು, ಲೀಗ್ ತನ್ನ ಮೊದಲ ಡಬಲ್-ಹೆಡರ್ ಅನ್ನು ಬ್ರಬೋರ್ನ್‌ನಲ್ಲಿ ದಿನದ ಆಟದೊಂದಿಗೆ ಪ್ರಾರಂಭಿಸುತ್ತದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸಂಜೆ ಸಮಯದಲ್ಲಿ ಬೆಂಗಳೂರಿನ ನೆಚ್ಚಿನ ತಂಡವಾದ ಆರ್.ಸಿ.ಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ಹಣಾಹಣಿ ನಡೆಯಲಿದೆ. ಪುಣೆಯ MCA ಸ್ಟೇಡಿಯಂ ತನ್ನ ಮೊದಲ ಪಂದ್ಯವನ್ನು ಮಾರ್ಚ್ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಎದುರಿಸಲಿದೆ.

ಒಟ್ಟಾರೆಯಾಗಿ, ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಲಾ 20 ಪಂದ್ಯಗಳು, ಬ್ರೆಬೋರ್ನ್ ಮತ್ತು ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಮಧ್ಯಾಹ್ನ 3:30 PM IST ಸಮಯಕ್ಕೆ ಪ್ರಾರಂಭವಾಗುವುದರೊಂದಿಗೆ ಒಟ್ಟು 12 ಡಬಲ್ ಹೆಡರ್‌ಗಳು ಇರುತ್ತವೆ. ಎಲ್ಲಾ ಸಂಜೆ ಪಂದ್ಯಗಳು 7:30PM IST ಕ್ಕೆ ಪ್ರಾರಂಭವಾಗಲಿವೆ. ಲೀಗ್ ಹಂತದ ಅಂತಿಮ ಪಂದ್ಯವು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮೇ 22 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೇ 29 ರಂದು ನಡೆಯಲಿರುವ ಪ್ಲೇಆಫ್‌ಗಳು ಮತ್ತು ಟಾಟಾ ಐಪಿಐಲ್ 2022ರ ಫೈನಲ್‌ ವೇಳಾಪಟ್ಟಿಯನ್ನು ಮೇ 18ರ ನಂತರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮಾಹಿತಿ ಪ್ರಕಟಿಸಿದೆ. ಒಟ್ಟಾರೆ ಕ್ರಿಕೆಟ್ ಅಭಿಮಾನಿಗಳಿಗೆ ಏಪ್ರಿಲ್‌- ಮೇ ತಿಂಗಳು ಮನರಂಜನೆಯ ಮಹಾಪೂರವೇ ಹರಿದುಬರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

Exit mobile version