ಟಾಟಾ ಐಪಿಎಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭ ; ಇಲ್ಲಿದೆ ಪಂದ್ಯದ ವೇಳಾಪಟ್ಟಿ!

ipl

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ವೇಳಾಪಟ್ಟಿಯನ್ನು(Schedule) ಬಹಿರಂಗಪಡಿಸಿದೆ. ಒಟ್ಟು ಈ ಬಾರಿಯ ಟಾಟಾ ಐಪಿಎಲ್ ನಲ್ಲಿ 70 ಲೀಗ್ ಪಂದ್ಯಗಳು(Matches) ಮತ್ತು 4 ಪ್ಲೇಆಫ್(PlayOffs) ಪಂದ್ಯಗಳನ್ನು 65 ದಿನಗಳ ಅವಧಿಯಲ್ಲಿ ನಡೆಸಲಾಗುತ್ತದೆ.

15 ನೇ ಆವೃತ್ತಿಯಲ್ಲಿ ಇದೇ ಮಾರ್ಚ್(March) 26 ರಂದು ವಾಂಖೆಡೆ(Wankhade) ಸ್ಟೇಡಿಯಂನಲ್ಲಿ ಕ್ಯಾಪ್ಟನ್ ಕೂಲ್(Captain Cool) ಧೋನಿ(Dhoni) ನಾಯಕತ್ವದಲ್ಲಿ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಪ್ರತಿಬಾರಿ ಉತ್ತಮ ಪೈಪೋಟಿ ನೀಡುವ ಕೋಲ್ಕತ್ತಾ ನೈಟ್ ರೈಡರ್ಸ್(Kolkata Night Riders) ನಡುವೆ ಈ ಬಾರಿ ಒಂದೊಳ್ಳೆ ರೋಚಕ ಪಂದ್ಯದ ಮುಖೇನ 15ನೇ ಆವೃತ್ತಿ ಆರಂಭವಾಗಲಿದೆ.

ಪುಣೆಯ MCA ಸ್ಟೇಡಿಯಂ ನಲ್ಲಿ ನಡೆಯಲಿರುವ ಮೊದಲ ಪಂದ್ಯವನ್ನು ಮಾರ್ಚ್ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಎದುರಿಸಲಿದೆ. ಒಟ್ಟಾರೆಯಾಗಿ, ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಲಾ 20 ಪಂದ್ಯಗಳು, ಬ್ರೆಬೋರ್ನ್ ಮತ್ತು ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ವರದಿಯಲ್ಲಿ ತಿಳಿಸಿದೆ.

Exit mobile version