1ಕೆಜೆ ಚಹಾಪುಡಿ ಬೆಲೆ 99,999 ಎಲ್ಲಿದು ? ನೀವೆ ನೋಡಿ

 ಅಸ್ಸಾಂ ಡಿ 15 : ಚಹಾ ಪುಡಿಗೆ ಅಬ್ಬಾಬ್ಬಾ ಅಂದ್ರೆ ಎಷ್ಟು ಬೆಲೆ ಇರಬಹುದು ಹೆಚ್ಚು ಅಂದ್ರೆ 500 ಇರಬಹುದು ಆದರೆ ಇಲ್ಲೊಂದು ವಿಶಿಷ್ಟವಾದ ಚಹಾಪುಡಿ ಇದೆ ಇದರ ಬೆಲೆ ಕೇಳಿದ್ರೆ ನೀವು ತಲೆ ತಿರುಗೋದು ಗ್ಯಾರಂಟಿ. ಟೀ ತೋಟಗಳ ಸಾಲು ಇರುವ ಅಸ್ಸಾಂನಲ್ಲಿ ಬೆಳೆಯುವ ಪ್ರತಿಯೊಂದು ಚಹಾವು ದುಬಾರಿ ಬೆಲೆ ಇದೆ.. ಅದ್ರಲ್ಲೂ ಅಸ್ಸಾಂನಲ್ಲಿ ಬೆಳೆಯುವ ಮನೋಹರಿ ಗೋಲ್ಡ್ ಟೀ ಬಲು ಟೇಸ್ಟಿ ಟೇಸ್ಟಿ ಎನಿಸಿದ್ದು ಇದು ಸಾಮಾನ್ಯ ಜನರಿಗೆ ಎಟುಕದ ಚಹವಾಗಿದೆ. ಇದುವರೆಗೂ ಎಪ್ಪತ್ತು-ಎಂಬತ್ತು ಸಾವಿರ ರೂಪಾಯಿಗಳವರೆಗೂ ಮಾರಾಟವಾಗುತ್ತಿದ್ದ ಅಸ್ಸಾಂನ ಮನೋಹರಿ ಗೋಲ್ಡ್ ಟೀ ಈಗ ಮಾರಾಟವಾಗಿರುವ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು.. ಒಂದು ಲಕ್ಷ ರೂಪಾಯಿಗೆ ಕೇವಲ ಒಂದು ರೂಪಾಯಿ ಕಡಿಮೆ ಬೆಲೆಯಲ್ಲಿ ಮನೋಹರಿ ಗೋಲ್ಡ್ ಟೀ ಮಾರಾಟವಾಗಿದೆ.

 ಮನೋಹರಿ ಗೋಲ್ಡ್ ಟೀ ಅಸ್ಸಾಂನ ದಿಬ್ರುಗಡ್ ಜಿಲ್ಲೆಯಲ್ಲಿ ಮಾರಾಟವಾಗುವ ಅತ್ಯಂತ ಅಪರೂಪದ ಟೀ. ಔಷಧೀಯ ಗುಣಗಳಿಂದ ಹೆಚ್ಚು ಸಮೃದ್ಧವಾಗಿರುವ ಈ ಚಹಾದ ಮೊಗ್ಗುಗಳನ್ನು ಬೆಳಗ್ಗೆ ತರಿದುಹಾಕುವುದರಿಂದ ಅವುಗಳ ಗುಣಮಟ್ಟ ಮತ್ತು ಸುವಾಸನೆಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಹೀಗಾಗಿ ಮನೋಹರಿ ಗೋಲ್ಡ್ ಟೀ ಖರೀದಿಗೆ ಭಾರಿ ಡಿಮ್ಯಾಂಡ್ ಇದೆ.. ಇಂತಹ ಚಹಾಪುಡಿಯನ್ನು 75 ಸಾವಿರ ರೂಪಾಯಿಗೆ ಈ ಮೊದಲು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿತ್ತು. ಇದೀಗ ಸೌರವ್​ ಟೀ ಟ್ರೇಡರ್ಸ್​ ಎಂಬ ಕಂಪನಿ 99,999ರೂ ಗೆ ಬಿಡ್‌ ಮಾಡಿ ಇದನ್ನು ಖರೀದಿಸಿದೆ.​ ಈ ಮೂಲಕ ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್‌ ಎಂದು ಪ್ರಸಿದ್ಧಿ ಗಳಿಸಿದೆ.

ಚಹಾಪುಡಿ ಬಹಳ ವಿಶೇಷವಾಗಿದ್ದು, ಇದನ್ನು ಅತ್ಯುತ್ತಮವಾದ ಮತ್ತು ಎಳೆಯ ಪಕಳೆಗಳಿಂದ ತಯಾರು ಮಾಡಲಾಗುತ್ತದೆ. ಮನೋಹರಿ ಗೋಲ್ಡ್​ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಹೀಗಾಗಿ ಅಸ್ಸಾಂನ ಮನೋಹರಿ ಗೋಲ್ಡ್​ ಚಹಾಪುಡಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಬೇಡಿಕೆಯಿದೆ. ಜೊತೆಗೆ ಪ್ರಕಾಶಮಾನವಾದ ಹಳದಿ ಬಣ್ಣ ಹೊಂದಿರುವ ಮನೋಹರಿ ಗೋಲ್ಡ್ ಚಹಾಪುಡಿ ಆಹ್ಲಾದಕರ ರುಚಿಯನ್ನ ನೀಡುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ

Exit mobile version