Bengaluru: ಬೆಂಗಳೂರಿನಲ್ಲಿ ನ.29 ರಿಂದ ಡಿ.1 ರವರೆಗೆ ಟೆಕ್ ಶೃಂಗಸಭೆ (Tech Summit 2023) ನಡೆಯಲಿದ್ದು, ಈ ಶೃಂಗಸಭೆಯಲ್ಲಿ 30 ದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು
ಭಾಗಿಯಾಗಲಿದ್ದಾರೆ. ಏಷ್ಯಾದ (Asia) ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಿದ್ದು, ಕಳೆದ 25 ಸಮ್ಮಿಟ್ಗಳಲ್ಲಿ ತೆಗೆದುಕೊಂಡ ನಿರ್ಣಯ ಸಕ್ಸಸ್ ಆಗಿದೆ ಎಂದು ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್
ಖರ್ಗೆ (Priyank Kharge) ಹೇಳಿದರು.ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ (Palace Ground) ಟೆಕ್ ಸಮ್ಮಿಟ್ ನಡೆಯಲಿದೆ.
‘ಬ್ರೇಕಿಂಗ್ ಬೌಂಡರಿ’ (Breaking boundary) ಘೋಷ ವಾಕ್ಯದೊಂದಿಗೆ ಸಮ್ಮಿಟ್ ನಡೆಯುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 26ನೇ ಟೆಕ್ ಸಮ್ಮಿಟ್ ಉದ್ಘಾಟಿಸಲಿದ್ದಾರೆ.
ಚಂದ್ರಯಾನ-3 ಪಯಣದ ಕುರಿತು ವಿಶೇಷ ಪ್ರದರ್ಶನ ಇರಲಿದ್ದು, ಚಂದ್ರಯಾನದಲ್ಲಿ (Chandrayana) ಭಾಗಿಯಾದ ಸಣ್ಣ ಸಣ್ಣ ಕಂಪನಿಗಳಿಗೆ ಸಹ ಸಮ್ಮಿಟ್ನಲ್ಲಿ ಪ್ರದರ್ಶನಕ್ಕೆ ಅವಕಾಶ
ನೀಡಲಾಗುತ್ತದೆ ಎಂದು ತಿಳಿಸಿದರು.
ಐಟಿ, ಡೀಪ್ಟೆಕ್, ಮೆಟಾವರ್ಸ್, WEB 3.0, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಟೆಲಿಕಾಂ ಮತ್ತು 6G ನಂತಹ (IT, DeepTech, Metaverse,
WEB 3.0, Electronics, Semiconductors, Animation, Visual Effects, Gaming, Telecom and 6G) ತಂತ್ರಜ್ಞಾನ-ಸಂಬಂಧಿತ ಕ್ಷೇತ್ರಗಳಲ್ಲಿ ಭಾರತದ ಕ್ಷಿಪ್ರ ಪ್ರಗತಿಯನ್ನು
ಪ್ರದರ್ಶಿಸುವ ಇದು (Tech Summit 2023) ವೇದಿಕೆಯಾಗಲಿದೆ.
ಈ ಟೆಕ್ ಸಮ್ಮಿಟ್ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿಯಾಗಲಿದ್ದು, ಈ ಟೆಕ್ ಸಮ್ಮಿಟ್ನಲ್ಲಿ ಇಸ್ರೋದ (Isro) ಗಮನಾರ್ಹ ಸಾಧನೆಗಳು ಮತ್ತು ಬಾಹ್ಯಾಕಾಶ
ಪರಿಶೋಧನೆಗೆ ನೀಡಿದ ಕೊಡುಗೆಗಳ ಪ್ರದರ್ಶನವಾಗಲಿದೆ. ಟೆಕ್ ಸಮ್ಮಿಟ್ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ಸರ್ಕಾರದ ಮುಂದುವರೆದ ಭಾಗವಾಗಿದೆ.
ಇದನ್ನು ಓದಿ: ನನ್ನ ಪುತ್ರನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ : ಸಚಿವ ಮಹದೇವಪ್ಪ
- ಭವ್ಯಶ್ರೀ ಆರ್ ಜೆ