ಚುನಾವಣೆಯ ನಂತರ ಜೆಡಿಎಸ್ ಕರ್ನಾಟಕದಿಂದ ನಿರ್ನಾಮವಾಗಲಿದೆ : ತೇಜಸ್ವಿ ಸೂರ್ಯ

Bengaluru : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕರಾದ ಹೆಚ್‌.ಡಿ ಕುಮಾರಸ್ವಾಮಿ(HD Kumaraswamy) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ(Tejaswisurya Controversial statement) ಅವರನ್ನು ನಾಜಿ ನಾಯಕ ಮತ್ತು ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್‌ಗೆ ಹೋಲಿಸಿ ಮಾತನಾಡಿದ್ದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲವಾಗಿದ್ದಾರೆ.

ರಾಜ್ಯ ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ, ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು,

ಜೆಡಿಎಸ್‌ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ ಅವರು ಬಳಸಿರುವ ‘ಅಸಂಸದೀಯ ಪದ’ ಅವರ ‘ರಾಜಕೀಯ ಹತಾಶೆ’ಯನ್ನು ಬಿಂಬಿಸುತ್ತದೆ ಎಂದು ಹೇಳುವ ಮುಖೇನ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಅವರು ಅಮಿತ್‌ ಶಾ ಅವರ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಮಾತನಾಡಿದ ತೇಜಸ್ವಿ ಸೂರ್ಯ(Tejaswisurya Controversial statement), ಜೆಡಿಎಸ್ ಪಕ್ಷವು ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷವಾಗಿದೆ.

ಇದನ್ನೂ ಓದಿ: https://vijayatimes.com/ridicule-about-siddu-dkshi/

ಚುನಾವಣೆಯ ನಂತರ ಜೆಡಿಎಸ್(JDS) ಕರ್ನಾಟಕದಿಂದ ನಿರ್ನಾಮವಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿರುವುದಾಗಿ ಎಎನ್‌ಐ(ANI) ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.

ಈ ವಿವಾದ ಹುಟ್ಟಿಕೊಳ್ಳಲು ಕಾರಣ ಇತ್ತೀಚಗಷ್ಟೇ ರಾಜ್ಯದ ಹಳೇ ಮೈಸೂರು ಭಾಗಕ್ಕೆ ಅಮಿತ್‌ ಶಾ ಅವರು ಭೇಟಿ ನೀಡಿ,

ಕೊಟ್ಟ ಹೇಳಿಕೆ! ಹೌದು, ಹಳೇ ಮೈಸೂರು ಭಾಗದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್ ಎಟಿಎಂ(ATM) ಪಕ್ಷಗಳು! ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ವಂಶ ರಾಜಕಾರಣದಲ್ಲಿ ಸಿಲುಕಿಕೊಂಡಿವೆ ಮತ್ತು ಭ್ರಷ್ಟ ದರೋಡೆಕೋರರು.

ದಕ್ಷಿಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಈ ಪ್ರದೇಶವು ಹಳೆಯ ಪಕ್ಷದ “ದೆಹಲಿಯಲ್ಲಿ(Delhi) ಎಟಿಎಂ” ಆಗಿತ್ತು ಮತ್ತು ಜೆಡಿಎಸ್ ಆಡಳಿತದಲ್ಲಿ ಕರ್ನಾಟಕವು ಕುಟುಂಬದ ಎಟಿಎಂ ಆಗಿತ್ತು ಎಂದು ಅಮಿತ್ ಶಾ ಅವರು ನೇರ ಆರೋಪ ಎಸಗಿದರು.

ಅಮಿತ್‌ ಶಾ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಕರ್ನಾಟಕದಲ್ಲಿ ಜೆಡಿಎಸ್ ಸರ್ಕಾರ ರಚಿಸಿದರೆ ಅದು ಕೋಟ್ಯಂತರ ಕನ್ನಡಿಗರ ಎಟಿಎಂ ಆಗಲಿದೆ.

ಇದು ರೈತರು, ಕಾರ್ಮಿಕರು, ದಮನಿತರು ಮತ್ತು ಅಂಗವಿಕಲರ ಎಟಿಎಂ ಆಗಲಿದೆ. ಜೆಡಿಎಸ್ ಜನರ ಎಟಿಎಂ ಆಗಿದೆ.

ಇದನ್ನೂ ಓದಿ: https://vijayatimes.com/landlord-kai-kudumba-awards/

ಎಟಿಎಂ ಎಂದರೆ ನಮಗೆ ಎನಿ ಟೈಮ್ ಮನುಷ್ಯತ್ವ (ಮಾನವೀಯತೆ)…ನಿಮಗೆ(ಬಿಜೆಪಿ)(BJP) ಎನಿ ಟೈಮ್ ಮೋಸ ಎಂದರ್ಥ. ನಿಮ್ಮ ಸುಳ್ಳಿನ ಮೂಲಕ ರಾಷ್ಟ್ರವನ್ನು ವಿನಾಶದ ಹಾದಿಗೆ ತಳ್ಳಿದ್ದೀರಿ.

ರಾಷ್ಟ್ರದ ವಿಷಯವನ್ನು ಬದಿಗಿಡೋಣ. ಕರ್ನಾಟಕದಲ್ಲಿ ನಿಮ್ಮ ಪಕ್ಷದ ಎಟಿಎಂ ಇಲ್ಲಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಜಕೀಯ ಗೋಸುಂಬೆ ಎಂದು ಕರೆದ ಮಾಜಿ ಸಿಎಂ ಹೆಚ್.ಡಿಕೆ, ಬಿಜೆಪಿಯನ್ನು ಬರಿ-ಬೂಟಾಟಿಕೆ ಪಕ್ಷ ಎಂದು ಕರೆದರು.

ಬಿಜೆಪಿ-ಬರಿ ಬೂಟಾಟಿಕೆ ಪಕ್ಷ, ಸುಳ್ಳುಗಾರರ ಪಕ್ಷ ಎಂಬುದು ನಿಮ್ಮ ಸುಳ್ಳು ಸುಳ್ಳಿನಿಂದ ಸ್ಪಷ್ಟವಾಯಿತು. ಅಮಿತ್ ಶಾ ನೀವೊಬ್ಬ ರಾಜಕೀಯ ಗೋಸುಂಬೆ! ಇದು ನಿಮ್ಮ ಪಕ್ಷದ ನಿಜವಾದ ಮುಖ.

ನೀವು ಜೋಸೆಫ್ ಗೋಬೆಲ್ಸ್ ಅವರ ಪುನರ್ಜನ್ಮ. ನೀವು ನಾಚಿಕೆಗೇಡು ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್.ಡಿ ಕುಮಾರಸ್ವಾಮಿ ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚಿಸಿದೆ!

Exit mobile version