ನೆಚ್ಚಿನ ನಟರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿರುವುದನ್ನು ಕೇಳಿದ್ದೇವೆ ; ಇಲ್ಲಿ ಸೊಳ್ಳೆ ಮತ್ತು ಕಪ್ಪೆಗೂ ಕೂಡ ದೇವಸ್ಥಾನವಿದೆ!

ಸೊಳ್ಳೆಗಳ ದೇವಸ್ಥಾನ(Mosquitos Temple) ಎನ್ನುವ ಹೆಸರನ್ನು ಕೇಳಿದಾಕ್ಷಣ ತಮಾಷೆ ಎನಿಸಬಹುದು, ಹಾಗೇ ಅಚ್ಚರಿಯು ಆಗಬಹುದು.

ಆದರೆ ಇದು ನಿಜ, ಈ ದೇವಸ್ಥಾನವನ್ನು ನಾವು ಆಂಧ್ರ ಪ್ರದೇಶದಲ್ಲಿ(Andrapradesh) ನೋಡಬಹುದು. ಒಬ್ಬ ವೈದ್ಯ ಈ ದೇವಸ್ಥಾನವನ್ನು 2008 ರಲ್ಲಿ ಕೇವಲ ಐದು ಸಾವಿರ ರೂಪಾಯಿಗಳಲ್ಲಿ ನಿರ್ಮಿಸಿದ್ದಾರೆ. ಆ ವೈದ್ಯರೇ ಹೈದರಾಬಾದ್‌ ನ ಡಾ.ಎಂ. ಸತೀಶ್‌ ಕುಮಾರ್‌. ವೈದ್ಯರು ಈ ದೇವಸ್ಥಾನವನ್ನು ಯಾಕೆ ನಿರ್ಮಿಸಿದ್ದರು ಎನ್ನುವುದನ್ನು ನೀವು ಕೇಳಿದ್ರೆ ನಿಜವಾಗಿಯೂ ಅಚ್ಚರಿಗೆ ಒಳಗಾಗುತ್ತೀರಿ. ವೈದ್ಯರು ಈ ದೇವಸ್ಥಾನವನ್ನು ಸೊಳ್ಳೆಗಳ ಪೂಜೆಗಾಗಿ ನಿರ್ಮಿಸಿಲ್ಲ, ಬದಲಾಗಿ ಸೊಳ್ಳೆಗಳಿಂದ ಉಂಟಾಗುವ ಮಾರಕ ರೋಗಗಳ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ನಿರ್ಮಿಸಿದ್ದಾರೆ.


ಅದೇ ರೀತಿ, ಉತ್ತರ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಕಪ್ಪೆಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಭಾರತದಲ್ಲಿ ಕಪ್ಪೆಗಳನ್ನು ಪೂಜಿಸುವ ದೇವಸ್ಥಾನ ಎಂದರೆ ಇದೊಂದೇ. ಉತ್ತರ ಪ್ರದೇಶದ ಈ ದೇವಾಲಯವು ಮಂಡೂಕ ತಂತ್ರಾಧಾರಿತ ದೇವಸ್ಥಾನವಾಗಿದ್ದು, ಕಪ್ಪೆಯ ಹಿಂಭಾಗದಲ್ಲಿ ಕುಳಿತ ಶಿವನನ್ನು ಕೂಡ ಇಲ್ಲಿ ನೋಡಬಹುದು. ಕಪ್ಪೆ ದೇವಾಲಯದಲ್ಲಿ ಶಿವಲಿಂಗವೂ ಇದ್ದು, ಈ ಶಿವಲಿಂಗ ಆಗಾಗ ತನ್ನ ಬಣ್ಣವನ್ನು ಬದಲಾಯಿಸುತ್ತಿರುತ್ತದೆ ಎನ್ನುವುದು ವಿಶೇಷ. ಇದರ ಇನ್ನೊಂದು ವಿಶೇಷತೆಯೆಂದರೆ ಸಾಮಾನ್ಯವಾಗಿ ನಾವೆಲ್ಲಾ ಕುಳಿತಿರುವ ನಂದಿಯನ್ನು ದೇವಸ್ಥಾನಗಳಲ್ಲಿ ನೋಡಿರುತ್ತೇವೆ.

ಆದರೆ, ಈ ದೇವಸ್ಥಾನದಲ್ಲಿ ನಿಂತಿರುವ ನಂದಿ ಪ್ರತಿಮೆಯನ್ನು ನೋಡಬಹುದು. ಈ ಕಪ್ಪೆ ದೇವಸ್ಥಾನವು ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇದನ್ನು ಬರ ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪದಿಂದ ಜನರನ್ನು ರಕ್ಷಿಸಲು ನಿರ್ಮಿಸಲಾಗಿದೆಯಂತೆ.

Exit mobile version