ಹುಬ್ಬಳ್ಳಿಯಲ್ಲಿ ಮೂವರು ಉಗ್ರರ ಬಂಧನ, ಕರ್ನಾಟಕವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಲು ದೊಡ್ಡ ಪ್ಲಾನ್

Hubli: ಸೋಮವಾರ ಮೂವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ದೆಹಲಿಯ ವಿಶೇಷ ಸೆಲ್‌ ಪೊಲೀಸರು ಬಂಧಿಸಿದ್ದು, (Terrorists arrested in Hubli) ಅತ್ಯಂತ ದೊಡ್ಡ ಭಯೋತ್ಪಾದನಾ

ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೋಸ್ಟ್‌ ವಾಂಟೆಡ್‌ (Most Wanted) ಪಟ್ಟಿಯಲ್ಲಿದ್ದ ಬಂಧಿತರು ಕರ್ನಾಟಕದ ಹುಬ್ಬಳ್ಳಿ – ಧಾರವಾಡ ಹಾಗೂ ಪಶ್ಚಿಮ

ಘಟ್ಟದಲ್ಲಿ ಉಗ್ರರ ಕ್ಯಾಂಪ್‌ ಸ್ಥಾಪಿಸುವ ಉದ್ದೇಶ ಹೊಂದಿದ್ದರು (Terrorists arrested in Hubli) ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಬಂಧನಕ್ಕೊಳಗಾದವರನ್ನು ಮೊಹಮ್ಮದ್ ರಿಜ್ವಾನ್ (Mohammed Rizwan), ಶಹನವಾಜ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಎಂದು ಗುರುತಿಸಲಾಗಿದ್ದು, ಈ ಪೈಕಿ ಶಹನವಾಜ್‌ ನನ್ನು 2

ದಿನದ ಹಿಂದೆಯೇ ಬಂಧಿಸಲಾಗಿದ್ದರು ಅಧಿಕೃತವಾಗಿ ಬಂಧನವನ್ನು ಘೋಷಣೆ ಮಾಡಿರಲಿಲ್ಲ. ಸೋಮವಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಹುಬ್ಬಳ್ಳಿ (Hubli) ಧಾರವಾಡ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ (Renuka Sukumar) ಪ್ರತಿಕ್ರಿಯೆ ನೀಡಿದ್ದು, ‘ಸ್ಥಳೀಯರು ಇದರಲ್ಲಿ ಶಾಮೀಲಾದ ಮಾಹಿತಿ ಈವರೆಗೂ ಸಿಕ್ಕಿಲ್ಲ. ಬಂಧಿತರ

ಬಗ್ಗೆ ದೆಹಲಿ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ ನಮ್ಮ ವ್ಯಾಪ್ತಿಯಲ್ಲಿ ಅಂತಹ ಕೃತ್ಯಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಕರ್ನಾಟಕದ (Karnataka) ಹುಬ್ಬಳ್ಳಿ-ಧಾರವಾಡ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇವರೆಲ್ಲರು ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್‌ ಉಗ್ರರ ನೆಲೆ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ

ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದರು. ಈ ಸಂಬಂಧ ದೇಶದ ಪಶ್ಚಿಮ ಮತ್ತು ದಕ್ಷಿಣದ ಭಾಗಗಳನ್ನು ಪರಿಶೀಲನೆ ಮಾಡಿದ್ದರು ಎಂದು ದಿಲ್ಲಿ (Delhi) ಪೊಲೀಸ್‌ ವಿಶೇಷ ಸೆಲ್‌ ಅಧಿಕಾರಿ ಧಾಲಿವಾಲ್‌

ತಿಳಿಸಿದ್ದಾರೆ.

ಪುಣೆ (Pune) ಉಗ್ರ ಪ್ರಕರಣದಲ್ಲಿ ಈತನ ಸ್ನೇಹಿತರು ಕೆಲ ತಿಂಗಳ ಹಿಂದೆ ಬಂಧಿಯಾಗಿದ್ದರು. ಅವರು ಬೆಳಗಾವಿ (Belgaum) ಸಮೀಪದ ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಉಗ್ರ ತರಬೇತಿ

ಶಿಬಿರ ನಡೆಸುತ್ತಿದ್ದರು ಎಂದು ಬೆಳಕಿಗೆ ಬಂದಿದೆ‌. ವಿಶೇಷವೆಂದರೆ ಎಲ್ಲ ಶಂಕಿತ ಉಗ್ರರೂ ಎಂಜಿನಿಯರ್‌ಗಳಾಗಿದ್ದು, ಈ ಪೈಕಿ ವಾರ್ಸಿ ಎಂಬಾತ ಪಿಎಚ್‌ಡಿ (PhD) ಕೂಡ ಮಾಡುತ್ತಿದ್ದ. ಅಲ್ಲದೆ ಇವರೆಲ್ಲರು

ಬಾಂಬ್ ತಯಾರಿಯಲ್ಲಿ ಪರಿಣತಿ ಹೊಂದಿದ್ದು, ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಮಾಹಿತಿ ನೀಡಿದೆ. ಹಲವಾರು ರಾಜ್ಯಗಳಲ್ಲಿನ ದೆಹಲಿ ಪೊಲೀಸ್ ವಿಶೇಷ ಸೆಲ್ ಭಯೋತ್ಪಾದಕ ಜಾಲಗಳನ್ನು ಭೇದಿಸಲು

ಎನ್‌.ಐ.ಎ (NIA) ನೊಂದಿಗೆ ಕೆಲಸ ಮಾಡುವ ಹಲವಾರು ಏಜೆನ್ಸಿಗಳಲ್ಲಿ ಒಂದಾಗಿದೆ.

ವೃತ್ತಿಯಲ್ಲಿ ಮೈನಿಂಗ್ ಇಂಜಿನಿಯರ್ (Mining Engineer) ಆಗಿರುವ ಶಹನವಾಜ್ ಐಸಿಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿದ್ದ. ವರದಿಗಳ ಪ್ರಕಾರ, ಶಹನವಾಜ್ ಮೂಲತಃ ದೆಹಲಿಯವನಾದರೂ

ಪುಣೆಗೆ ತೆರಳಿದ್ದ. ಪುಣೆಯಲ್ಲಿ ಜುಲೈನಲ್ಲಿ ನಡೆದ ದಾಳಿಯ ವೇಳೆ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ಶಹನವಾಜ್ (Shahnawaz) ಪರಾರಿಯಾಗಿ ದೆಹಲಿಗೆ ಮರಳಿದ್ದ.

ಐಸಿಸ್ ಸಂಬಂಧಿ ಟೆಲಿಗ್ರಾಮ್ ಅಪ್ಲಿಕೇಶನ್ (Telegram Application) ಮೂಲಕ ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಅವರು ಬ್ರೇನ್‌ವಾಶ್‌ ಆಗಿ ಭಯೋತ್ಪಾದಕರಾಗಿದ್ದರು. ಮಹಾರಾಷ್ಟ್ರದ

ಪುಣೆಯಲ್ಲಿರುವ ಐಸಿಸ್ ಮಾಡ್ಯೂಲ್‌ನೊಂದಿಗೆ ಇವರಿಬ್ಬರೂ ನಂಟು ಇಟ್ಟುಕೊಂಡಿದ್ದರು. ಅವರು ದೇಶಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚಾರಗೊಳಿಸಲು ಸಂಚು ರೂಪಿಸಿದ್ದರು

ಎಂದು ಪೊಲೀಸರು ಹೇಳಿದ್ದಾರೆ.

ವರದಿಗಳ ಪ್ರಕಾರ ಪುಣೆಯಲ್ಲಿ ಡಯಾಪರ್ ಅಂಗಡಿಯನ್ನು ಅಬ್ದುಲ್ಲಾ ಡಯಾಪರ್ವಾಲಾ (Abdullah Diaparwala) ನಡೆಸುತ್ತಿದ್ದ. ಅದನ್ನು ಸ್ಫೋಟಕ ಸಾಧನಗಳನ್ನು ಜೋಡಿಸಲು ಬಳಸಲಾಗುತ್ತಿತ್ತು.

ಬಂಧಿತರಿಂದ ಕಬ್ಬಿಣದ ಪೈಪ್‌, ಪ್ಲಾಸ್ಟಿಕ್‌ ಟ್ಯೂಬ್‌ (Plastic Tube),ವಿವಿಧ ರೀತಿಯ ರಾಸಾಯನಿಕ, ಟೈಮಿಂಗ್‌ ಉಪಕರಣ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲವೂ ಸುಧಾರಿತ

ಸ್ಫೋಟಕ ತಯಾರಿಸಲು ಬಳಸುವ ವಸ್ತುಗಳಾಗಿರುವ ಕಾರಣ, ಇವರೆಲ್ಲಾ ದೊಡ್ಡ ದುಷ್ಕೃತ್ಯಕ್ಕೆ ಸಜ್ಜಾಗಿದ್ದರು ಎನ್ನುವುದು ಖಚಿತವಾಗಿದೆ.

ಇದನ್ನು ಓದಿ: ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ

Exit mobile version