ಮಂಗಳವಾರ 19 ಮಕ್ಕಳು ಸೇರಿದಂತೆ 22 ಜನರನ್ನು ಗುಂಡಿಕ್ಕಿ ಕೊಂದ 18 ವರ್ಷದ ಟೆಕ್ಸಾಸ್(Texas) ಯುವಕ, ತನ್ನ 18ನೇ ಹುಟ್ಟುಹಬ್ಬದಂದು ಎರಡು ಅರೆ ಸ್ವಯಂಚಾಲಿತ ರೈಫಲ್ಗಳನ್ನು(Semi-Automatic Rifles) ಖರೀದಿಸುವ ಮೊದಲು ಅಪರಿಚಿತರ ಮೇಲೆ ಉದ್ಧಟತನ ಮೆರೆದಿದ್ದ ಎನ್ನಲಾಗಿದೆ.
ಸಾಲ್ವಡಾರ್ ರಾಮೋಸ್(Salvador Ramos), 18 ವರ್ಷದ ಈ ಯುವಕ, ಬಾಲ್ಯದಲ್ಲಿ ಅನೇಕರು ತಮ್ಮ ಮಾತಿನಿಂದ ಈತನನ್ನು ಬೆದರಿಸುತ್ತಿದ್ದರು ಮತ್ತು ಕುಟುಂಬದಲ್ಲಿ ಕಲಹಗಳಿಂದ ಬಹಳ ತೊಂದರೆ ಅನುಭವಿಸುತ್ತಿದ್ದ ಎಂದು ಆತನ ಸ್ನೇಹಿತರು ಮತ್ತು ಸಂಬಂಧಿಕರು ಹೇಳಿಕೆ ನೀಡಿದ್ದಾರೆ. ಇಂಥ ಬೆದರಿಕೆಗಳಿಗೆ ಹೆದರಿಕೊಂಡು ಅನೇಕ ಸಂದರ್ಭಗಳಲ್ಲಿ ಆತ ಶಾಲೆಯನ್ನು ತೊರೆದಿದ್ದ ಎನ್ನಲಾಗಿದೆ. ರಾಮೋಸ್ನನ್ನು ತಿಳಿದಿರುವ ಪ್ರಾಥಮಿಕ ಶಾಲೆಯ ಇಬ್ಬರು ಪೋಷಕರು, ಅವನು ಕೋಪಕ್ಕೆ ತುತ್ತಾದ ಏಕಾಂತ ವ್ಯಕ್ತಿ ಎಂದು ಹೇಳಿದ್ದಾರೆ.
ಅವನೊಬ್ಬ ಗಂಭೀರ ವ್ಯಕ್ತಿ, ತನ್ನ ಕಿರಿಯ ವಯಸ್ಸಿನಲ್ಲಿ ಆಗಾಗ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎಂದು ನ್ಯೂಯಾರ್ಕ್ ಟೈಮ್ಸ್(New York Times) ತನ್ನ ವರದಿಯಲ್ಲಿ ತಿಳಿಸಿದೆ. ಆದ್ರೆ, ಆ ಪೋಷಕರು ಹೇಳಿದಂತೆ, ಸಾಲ್ವಡೋರ್ ರಾಮೋಸ್ ಇಂಥ ದಾಳಿಯನ್ನು ನಡೆಸುತ್ತಾನೆ ಎಂದು ಅಂದುಕೊಂಡಿರಲಿಲ್ಲ, ಈ ಘಟನೆಯಿಂದ ನಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಆತನ ತರಗತಿಯ ಸಹಪಾಠಿ ನಾಡಿಯಾ ರೆಯೆಸ್ ಹೇಳಿಕೆಯ ಅನುಸಾರ, ಒಂದು ಇನ್ಸ್ಟಾಗ್ರಾಮ್(Instagram) ಸ್ಟೋರಿಯಲ್ಲಿ ಆತ ತನ್ನ ತಾಯಿಯ ಮೇಲೆ ಕಿರಿಚಾಡಯವ ತುಣುಕನ್ನು ಹಾಕಿದ್ದನು,
ಅವರ ತಾಯಿ ಅವನನ್ನು ತಮ್ಮ ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ. ವಾಷಿಂಗ್ಟನ್ ಪೋಸ್ಟ್(Washington Post) ಪ್ರಕಾರ, ತನ್ನ ಇನ್ಸ್ಟಾಗ್ರಾಮ್ನಲ್ಲಿ ಅಪಲೋಡ್ ಮಾಡಿದ ವೀಡಿಯೊನಲ್ಲಿ, ಅವರ ತಾಯಿಗೆ ಅಶ್ಲೀಲ ಪದದಲ್ಲಿ ನಿಂದಿಸಿದನು. ಇದಕ್ಕಾಗಿ ಅವರ ತಾಯಿ ಅವನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು.
ಅವನು ತನ್ನ ತಾಯಿಯೊಡನೆ ಬಹಳ ಅಸಮಾಧಾನದಿಂದ, ಕೋಪಗೊಂಡು ಮಾತನಾಡುತ್ತಿದ್ದ ಎಂಬುದು ವರದಿಯಲ್ಲಿ ತಿಳಿದುಬಂದಿದೆ.