ಟ್ರಂಪ್‌ ಆಪ್ತ ಟಾಮ್‌ ಬರಾಕ್‌ ಬಂಧನ

ಲಾಸ್‌ ಏಂಜಲೀಸ್‌ (ಎಪಿ), ಜು. 21: ಡೊನಾಲ್ಡ್‌ ಟ್ರಂಪ್‌ 2017ರಲ್ಲಿ ನೂತನ ಅಧಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಆಯೋಜನೆ ಹೊಣೆ ಹೊತ್ತಿದ್ದ ಸಮಿತಿಯ ಮುಖ್ಯಸ್ಥರಾಗಿದ್ದ ಟಾಮ್ ಬರಾಕ್ ಅವರು ಯುಎಇ ಏಜೆಂಟರಾಗಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

74 ವರ್ಷದ ಟಾಮ್ ಅವರಲ್ಲದೇ, ಅವರ ಕಂಪನಿಯ ಉದ್ಯೋಗಿಯಾಗಿದ್ದ ಮ್ಯಾಥ್ಯೂ ಗ್ರಿಮ್ಸ್‌, ಯುಎಇಯ ಉದ್ಯಮಿ ರಶೀದ್‌ ಅಲ್‌ ಮಲಿಕ್‌ ಅವರ ವಿರುದ್ಧ ಇದೇ ಆರೋಪಗಳಡಿ ಬ್ರೂಕ್ಲಿನ್‌ನ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

ಗ್ರಿಮ್ಸ್ ಅವರನ್ನು ಸಹ ಬಂಧಿಸಲಾಗಿದೆ. ಮಲಿಕ್‌ 2018ರಲ್ಲಿ ಅಮೆರಿಕ ತೊರೆದಿದ್ದು, ಸದ್ಯ ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ನೆಲೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸಂಯುಕ್ತ ಅರಬ್‌ ಸಂಸ್ಥಾನಗಳಿಗೆ (ಯುಎಇ) ಅನುಕೂಲವಾಗುವ ರೀತಿಯಲ್ಲಿ ಅಮೆರಿಕದ ನೀತಿಗಳ ನಿರೂಪಣೆ ಮೇಲೆ ಪ್ರಭಾವ ಬೀರಲು ಸಂಚು ರೂಪಿಸಿದ್ದರು ಎಂಬ ಆರೋಪ ಟಾಮ್‌ ವಿರುದ್ಧ ಇದೆ.

Exit mobile version