ಅಫ್ಘಾನಿಸ್ತಾನದ ಸೇನಾ ವಿಮಾನ ಉಜೇಕಿಸ್ತಾನದಲ್ಲಿ ಪತನ

ಉಜೇಕಿಸ್ತಾನ  ಆ 17 : ಅಕ್ರಮವಾಗಿ ಉಜೇಕಿಸ್ತಾನದ ಗಡಿ ಪ್ರದೇಶಿಸಿದ ಅಫ್ಘಾನಿಸ್ತಾನ ವಿಮಾನವು ಪತನಗೊಂಡಿದೆ. ಈ ದುರಂತದಲ್ಲಿ ಪೈಲೆಟ್ ಸೇರಿ 2-3 ಜನ ಗಾಯಗೊಂಡಿದ್ದಾರೆ.

ತಾಲಿಬಾನ್ ಗಳ ನರಮೇದಕ್ಕೆ ಬೆದರಿರುವ ಅಫ್ಘಾನ್ ಜನತೆ ದೇಶ ಬಿಟ್ಟು ವಿವಿಧ ದೇಶಗಳಿಗೆ ಪಲಾಯನ ಮಾಡಿತ್ತಿದ್ದಾರೆ. ಇ ನಡುವೆ ಕಾಬೂಲ್ ನಿಂದ ಕೆಲವು ಪ್ರಯಾಣಿಕರನ್ನು ಹೊತ್ತ ಅಫ್ಘಾನಿಸ್ತಾನದ ಸೇನಾ ವಿಮಾನ ಉಜೇಕಿಸ್ತಾನದ ಕಡೆ ಪ್ರಯಾಣಿಸುತ್ತಿದ್ದ ಸಂಧರ್ಭದಲ್ಲಿ ವಿಮಾನ ಉಜೇಕಿಸ್ತಾನಗಡಿಯಲ್ಲಿ ಪತನಗೊಂಡಿದೆ. ಈ ಬಗ್ಗೆ ಸೆಂಟ್ರಲ್ ಎಷ್ಯಿಯನ್ ರಕ್ಷಣಾ ಸಚಿವರು ಮಾಹಿತಿ ನೀಡಿದ ಅಕ್ರಮವಾಗಿ ಉಜೇಕಿಸ್ತಾನ ಗಡಿಯನ್ನು ದಾಟಿದ ವಿಮಾನ ಪತನಗೊಂಡಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಗಾಗಲೇ ತಾಲಿಬಾನ್ ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದು, 20 ವರ್ಷಗಳ ಬಳಿಕ ಅಫ್ಘಾನ್ ನಲ್ಲಿ ತಾಲಿಬಾನಿಗಳ ಆಡಳಿತ ಪ್ರಾರಂಭವಾಗಿವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

Exit mobile version