ಕೊರೊನಾ ಮರೆತ ಜನತೆ, ವಿನಯ್ ಕುಲಕರ್ಣಿಗೆ ಅದ್ದೂರಿ ಸ್ವಾಗತ

ಧಾರವಾಡ ಆ 21 :  ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಾಗ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಕೊಲೆ ಪ್ರಕರಣದಡಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ 9 ತಿಂಗಳ ಬಳಿಕ ಜಾಮೀನು ದೊರೆತಿದ್ದ ಹಿನ್ನಲೆಯಲ್ಲಿ  ಕುಟುಂಬಸ್ಥರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ

ಈ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ ನನಗೆ ಇಂದು ಜಾಮೀನು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನಾನು ಹೇಗಿರಬೇಕೆಂದು ಎಂದು ಪಾಠ ಕಲಿತಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಜೊತೆಗೆ ನನಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟಗೆ ಧನ್ಯವಾದ ಹೇಳುತ್ತೇನೆ.ಎಂದ ಅವರು  ನಾನು ಇಂದು   ನಿನ್ನೆಯಿಂದ ರಾಜಕೀಯ ಮಾಡಿದವಲ್ಲ. ರೈತ ಕುಟುಂಬದಿಂದ, ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದವನು. ಇದು ನನ್ನ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯ ಎಂದು ವಿನಯ್ ಕುಲಕರ್ಣಿ ಹೇಳಿದರು.

ಕೊರೊನಾ ಮರೆತ ಜನ : ವಿನಯ್ ಕುಲಕರ್ಣಿಗೆ ಜಾಮೀನು ದೊರೆತ ಹಿನ್ನಲೆಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ  ಅವರನ್ನು ಸ್ವಾಗತಿಸಲು ಹಿಂಡಲಾಗ ಜೈಲಿನ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ ಪರಿಣಾಮ ನೂಕುನುಗ್ಗಲು ಉಂಟಾಯಿತು. ಕಾರ್ಯಕರ್ತರು ಆಭಿಮಾನಿಗಳು ಹಾಗೂ ವಿನಯ್ ಕುಲಕರ್ಣಿ ಕೂಡ ಮಾಸ್ಕ್ ಧರಿಸದೆ ಕೋವಿಡ್ ನಿಯಮವನ್ನು ಪಾಲಿಸದೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

Exit mobile version