ಬಜೆಟ್ ಅಧಿವೇಶನವನ್ನು 10 ದಿನಗಳಿಗೆ ಕಡಿತಗೊಳೀಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ, ಫೆ. 26: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಾಗುತ್ತಿರುವ ಪರಿಗಣಿಸಿ ರಾಜ್ಯದ ಶಾಸಕಾಂಗ ಬಜೆಟ್ ಅಧಿವೇಶನದ ಅವಧಿಯನ್ನು ನಾಲ್ಕು ವಾರಗಳಿಂದ ೧೦ ದಿನಕ್ಕೆ ಕಡಿತಗೊಳಾಸಲಾಗಿದೆ.

ಅಧಿವೇಶನ ಮಾರ್ಚ್‌ ೧ರಿಂದ ೧೦ರವರೆಗೆ ನಡೆಯಲಿದ್ದು, ಮಾರ್ಚ ೮ ರಂದು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಬಜೆಟ್ ಮಂಡಿಸಲಾಗುವುದು. ಬಜೆಟ್ ಅಧಿವೇಶನಕ್ಕೆ  ಹಾಜರಾಗುವ ಎಲ್ಲಾ ಸದಸ್ಯರು ಮೊದಲು ಮತ್ತ ಎರಡನೇಯ ವಾರಗಳಲ್ಲಿ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

ಇತ್ತಿಚಿನ ಬೆಳವಣಿಗೆಯಲ್ಲಿ, ಅಸೆಂಬ್ಲಿ ಸ್ಪೀಕರ್  ಹುದ್ದೆಯ ಚುನಾವಣೆಯನ್ನು ಜುಲೈನಲ್ಲಿ ಮಾನ್ಸೂನ್ ಅಧಿವೇಶನಕ್ಕೆ ಮೂಂದೂಡಬಹುದು. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ವಹಿಸಿಕೊಂಡಿರುವ ನಾನಾ ಪಟೋಲೆ ಅವರು ರಾಜೀನಾಮೆಯಿಂದ ಈ ಹುದ್ದೆ ಖಾಲಿ ಉಳಿದಿದೆ. ಎಂವಿಎ ಪಕ್ಷ ತನ್ನ ಟೀಕೆಗಳನ್ನು ತಪ್ಪಿಸಲು ಕೋವಿಡ್ ಪರಸ್ಥಿತಿ ನೆಪವನ್ನು ಇಟ್ಟಕೊಂಡು ಉದ್ದೇಶಪೂರ್ವಕವಾಗಿ ಅಧಿವೇಶನದ ದಿನಗಳನ್ನು ಕಡಿತಗೊಳಿಸಿದೆ ಎಂದು ಆರೋಪಿಸಿ, ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನ ಭವನ ಭವನದಲ್ಲಿ ಗುರುವಾರ ನಡೆದ ವ್ಯವಹಾರ ಸಲಹಾ ಸಮಿತಿ (ಬಿಸಿ) ಸಭೆಯಿಂದ ಹೊರನಡೆದರು.

ವಿಧಾನ ಪರಿಷತ್ತಿನ ಅಧ್ಯಕ್ಷ ರಾಮರಾಜೆ ನಿಂಬಲ್ಕರ, ವಿಧಾನಸಭೆಯಲ್ಲಿ ಉಪಸ್ಪೀಕರ್ ನರ್ಹಾರಿ ಜಿರ್ವಾಲ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮತ್ತು ವಿರೋಧ ಪಕ್ಷದ ನಾಯಕರಾದ ದೇವೇಂದ್ರ ಫಡ್ನವೀಸ್ ಮತ್ತು ಪ್ರವೀಣ್ ದಾರೇಕರ್ ಸಭೆಯಲ್ಲಿ ಭಾಗವಹಿಸಿದ್ದರು.

Exit mobile version