ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಜಗತ್ತಿನ ಅತ್ಯಂತ ಸಣ್ಣ ಸೊಂಟ ಹೊಂದಿರುವ ಮಹಿಳೆ!

Su Naing

ತಾನು ಸುಂದರವಾಗಿ ಕಾಣಬೇಕು ಎನ್ನುವ ಆಸೆ
ಪ್ರತಿಯೊಬ್ಬರಿಗೂ ಇರುತ್ತೆ. ಅದರಲ್ಲೂ ಮಹಿಳೆಯರಿಗೆ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚು. ಕೆಲವರು ಆಕರ್ಷಕವಾಗಿ ಕಾಣಲು ಅನೇಕ ಸಲಹೆಗಳನ್ನು ಪಾಲಿಸ್ತಾರೆ.

ಇನ್ನೂ ಕೆಲವರು ಇದಕ್ಕಾಗಿ ಶಸ್ತ್ರಚಿಕಿತ್ಸೆಗೆ ಮುಂದಾಗಲೂ ಹಿಂಜರಿಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಹಿಳೆಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಆಕೆಯ ಸೊಂಟ, ಕೇವಲ 13.7 ಇಂಚುಗಳಿರೋದಷ್ಟೆ. ಈ ಮಹಿಳೆ ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ಪರಿಗಣಿಸಲಾಗಿದೆ. ಆಗ್ನೇಯ ಏಷ್ಯಾದ ಮ್ಯಾನ್ಮಾರ್‌ನಲ್ಲಿ ವಾಸಿಸುವ ಸು ನಾಯಿಂಗ್, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ಈಕೆಯ ಸೊಂಟ ಎಲ್ಲರ ಗಮನ ಸೆಳೆಯುತ್ತಿದ್ದು, ಆನ್‌ಲೈನ್ ಸೆನ್ಸೆಷನ್‌ ಆಗಿದ್ದಾಳೆ.

ಅವಳ ಸೊಂಟ ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಹಾಗೂ ಇಷ್ಟು ಸಣ್ಣ ಸೊಂಟ ಪಡೆಯಲು ನೈಸರ್ಗಿಕ ವಿಧಾನವನ್ನು ಮಾತ್ರ ಅಳವಡಿಸಿಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ. ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ನಂಬಲಾಗಿದೆ.
23 ವರ್ಷದ ಸುಗೆ 13.7 ಸುತ್ತಳತೆ ಸೊಂಟವಿದೆ. ಕಾಲೇಜಿನಲ್ಲಿ ಓದುತ್ತಿರುವ ಈಕೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸು ಫೋಟೋಗಳನ್ನು ನೋಡಿದ ಅನೇಕ ಜನರು ಫೋಟೋಗಳನ್ನು ಎಡಿಟ್‌ ಮಾಡಿರುವುದು ಎಂದು ಭಾವಿಸುತ್ತಾರೆ.

ಅಲ್ಲದೆ, ತನ್ನ ಸೊಂಟದಿಂದ ಕೆಲವು ಪಕ್ಕೆಲುಬುಗಳನ್ನು ಸಹ ತೆಗೆದಿದ್ದಾಳೆ ಎಂದು ಬರೆದಿದ್ದಾರೆ. ಆದರೆ ಸು ಈ ಎಲ್ಲ ವಿಷಯಗಳನ್ನು ನಿರಾಕರಿಸುತ್ತಾಳೆ. ಆಹಾರ ಪದ್ಧತಿಮೂಲಕ ಇದನ್ನು ಸಾಧಿಸಿದ್ದೇನೆ ಹಾಗೂ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಹೇಳಿಕೊಂಡಿದ್ದಾಳೆ. ಆರೋಗ್ಯವಂತ ಮನುಷ್ಯ ಸೊಂಟದ ಗಾತ್ರ 31.5 ಇಂಚುಗಳಷ್ಟು ಇರಬೇಕು ಎಂದು ಎನ್‌ಎಚ್‌ಎಸ್ ಹೇಳುತ್ತದೆ. ಇದಕ್ಕೆ ಹೋಲಿಸಿದರೆ ಸು ಸಾಕಷ್ಟು ದುರ್ಬಲವಾಗಿದ್ದಾರೆ. ಆದರೆ ಈಕೆ ನಾನು ಸಂಪೂರ್ಣವಾಗಿ ಆರೋಗ್ಯವಾಗಿದೇನೆ ಎಂದು ಹೇಳುತ್ತಾರೆ. ಸು ತುಂಬಾ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುತ್ತಾರಂತೆ.

ಯಾವುದೇ ರೀತಿಯ ದೌರ್ಬಲ್ಯಗಳಿಲ್ಲ. ಶೇಪ್‌ನಿಂದ ಯಾವುದೇ ಅನಾನುಕೂಲವಿಲ್ಲವೆಂದು ಎಂದು ಸು ನಂಬಿದ್ದಾರೆ ಎನ್ನಲಾಗಿದೆ.
ನನ್ನ ಲುಕ್‌ನಲ್ಲಿ ಯಾವುದೇ ನ್ಯೂನತೆಯಿಲ್ಲ ಎಂದು ಸು ಹೇಳುತ್ತಾರೆ. ತನ್ನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಗೆ ಬೇಸರವಿಲ್ಲವಂತೆ ಹಾಗೂ ಜನರು ತನ್ನ ಫೋಟೋಗಳನ್ನು ನೋಡುವುದು ಆಕೆಗೆ ಖುಷಿ ತರುತ್ತಂತೆ. ಆದರೆ, ಕೆಲವು ಫೋಟೋಗಳನ್ನು ನೋಡಿದಾಗ, ಸು ತನ್ನ ಫೋಟೋಗಳನ್ನು ಎಡಿಟ್‌ ಮಾಡಿದ್ದಾರೆ ಎಂದು ಜನ ಭಾವಿಸುತ್ತಾರೆ. ಇದು ಸುಗೆ ಸ್ವಲ್ಪ ಮಟ್ಟಿಗೆ ಬೇಸರ ಉಂಟುಮಾಡುತ್ತಂತೆ. ಈ ಬಗ್ಗೆ ಸ್ವತಃ ಸು ಅವರೇ ಹೇಳಿಕೊಂಡಿದ್ದಾರೆ.

Exit mobile version