ಭಾರತದಲ್ಲಿ 2019 ರಿಂದ 2021ರ ಮಧ್ಯೆ ಕೇವಲ ಮೂರು ವರ್ಷದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ : ಸಂಸತ್ತಿಗೆ ಕೇಂದ್ರ ಸರ್ಕಾರದ ಮಾಹಿತಿ

New Delhi : ಕೇಂದ್ರ ಸರ್ಕಾರವು (Thirteen lakh womens missing) ಇದೀಗ ದೇಶದಲ್ಲಿನ ಹೆಣ್ಣು ಮಕ್ಕಳ ನಾಪತ್ತೆ ಬಗ್ಗೆ ಆಘಾತಕಾರಿ ಅಂಕಿ-ಅಂಶವನ್ನು ನೀಡಿದೆ. ಭಾರತದಲ್ಲಿ 13.13 ಲಕ್ಷ ಮಂದಿ

ಬಾಲಕಿಯರು ಮತ್ತು ಮಹಿಳೆಯರು 2019ರಿಂದ 2021ರ ಅವಧಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಪೈಕಿ ಮಧ್ಯಪ್ರದೇಶದಲ್ಲಿ (Madhya Pradesh) ಅತಿ ಹೆಚ್ಚು ಎಂದರೆ ಸುಮಾರು ಎರಡು ಲಕ್ಷದಷ್ಟು ಹೆಣ್ಣು ಮಕ್ಕಳು

ಕಾಣೆಯಾಗಿದ್ದಾರೆ.ಇನ್ನು ಪಶ್ಚಿಮ ಬಂಗಾಳ (West Bengal) ಬಾಲಕಿಯರು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ.

ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿ (ಎನ್‌ಸಿಆರ್‌ಬಿ) (National Crime Record Bureau) ಈ ಮಾಹಿತಿಯನ್ನು ಸಿದ್ಧಪಡಿಸಿದೆ.ಸಂಸತ್ತಿಗೆ ಕಳೆದ ವಾರ ನೀಡಿದ ಮಾಹಿತಿಯಲ್ಲಿ, 10,61,648 ಮಹಿಳೆಯರು

18 ವರ್ಷ ಮೇಲ್ಪಟ್ಟವರಾಗಿದ್ದಾರೆ ಹಾಗೂ 2,51,430 ಅದಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ 38,234 ಯುವತಿಯರು ಹಾಗೂ 1,60,180 ಮಹಿಳೆಯರು

ಮಧ್ಯಪ್ರದೇಶವೊಂದರಲ್ಲೇ ತಪ್ಪಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಪ.ಬಂಗಾಳ (1,56,905 ಮಹಿಳೆಯರು, 36,606 ಯುವತಿಯರು), ಹಾಗೂ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1,78,400 ಮಹಿಳೆಯರು,

13,033 ಯುವತಿಯರು) (Thirteen lakh womens missing) ಪಡೆದಿವೆ.

ಮಹಾರಾಷ್ಟ್ರದಲ್ಲಿ(Maharashtra) 13,033 ಯುವತಿಯರು ಮತ್ತು 1,78,400 ಮಹಿಳೆಯರು ನಾಪತ್ತೆಗೊಂಡಿದ್ದಾರೆ. ಅದೇ ರೀತಿಯಾಗಿ 70,222 ಮಹಿಳೆಯರು ಮತ್ತು 16,649 ಬಾಲಕಿಯರು ಒಡಿಶಾದಲ್ಲಿ

(Odissa) ಮೂರು ವರ್ಷಗಳ ಅವಧಿಯಲ್ಲಿ ಮತ್ತು ಛತ್ತೀಸ್‌ಗಢದಲ್ಲಿ (Chhattisgarh) 49,116 ಮಹಿಳೆಯರು ಮತ್ತು 10,817 ಹುಡುಗಿಯರು ಕಾಣೆಯಾಗಿದ್ದಾರೆ.

ಇದನ್ನೂ ಓದಿ : ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌, 2ನೇ ಬಾರಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ

ಕರ್ನಾಟಕವೇನು(Karnataka) ಈ ಪಟ್ಟಿಯಲ್ಲಿ ಹಿಂದೆ ಬಿದ್ದಿಲ್ಲ ಕರ್ನಾಟಕದಲ್ಲಿ 40,000 ಹೆಣ್ಣು ಮಕ್ಕಳು ಕಳೆದ ಮೂರು ವರ್ಷಗಳಲ್ಲಿ ಕಾಣೆಯಾಗಿದ್ದಾರೆ. 2019ರಲ್ಲಿ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟ 12,000ಕ್ಕೂ ಹೆಚ್ಚು

ಹುಡುಗಿಯರು ಹಾಗೂ 18 ವಯಸ್ಸಿನ ಒಳಗಿನ ಸುಮಾರು 70೦ಕ್ಕೂ ಹೆಚ್ಚು ಬಾಲಕಿಯರು ಸೇರಿದ್ದಾರೆ. 2021 ರಲ್ಲಿ ಒಟ್ಟು 14,000 ಮಹಿಳೆಯರು ಮತ್ತು 2020ರಲ್ಲಿ ಒಟ್ಟು 13000 ಮಹಿಳೆಯರು ನಾಪತ್ತೆಯಾಗಿದ್ದಾರೆ.

ಇವರು ಎಲ್ಲಿ ಹೋಗಿದ್ದಾರೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಖಚಿತ ಮಾಹಿತಿ ಇಲ್ಲ ಆದರೆ ಅಂತರಾಷ್ಟ್ರೀಯ ಮಾನವ ಕಲಸಾಗನೆಯ ಜಾಲಕ್ಕೆ ಬಲಿಯಾಗಿರಬಹುದು ಎಂದು ಬಹುತೇಕರು ತಿಳಿದುಕೊಂಡಿದ್ದಾರೆ.

ಅತಿ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ(Delhi) ನಾಪತ್ತೆಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮೂರು ವರ್ಷದಲ್ಲಿ ಒಟ್ಟು 22,919

ಹುಡುಗಿಯರುಮತ್ತು 61,054 ಮಹಿಳೆಯರು ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ 8,617 ಮಹಿಳೆಯರು ಮತ್ತು 1,148 ಬಾಲಕಿಯರು ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲೂ (Jamu and Kashmir)

ನಾಪತ್ತೆಯಾಗಿದ್ದಾರೆ ಎಂದು ಅಂಕಿ-ಅಂಶಗಳು ಬಹಿರಂಗ ಪಡಿಸಿವೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು: ಸರ್ಕಾರದ ಎಚ್ಚರಿಕೆ

ಇದೇ ವೇಳೆ ದೇಶಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಅಲ್ಲದೆ ಲೈಂಗಿಕ ಅಪರಾಧಗಳ ವಿರುದ್ಧ ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಕ್ರಿಮಿನಲ್ ಕಾನೂನು (ತಿದ್ದುಪಡಿ)

ಕಾಯ್ದೆ-2013 ಜಾರಿಗೊಳಿಸುವಿಕೆಯನ್ನು ಒಳಗೊಂಡಂತೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದಲ್ಲದೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ 2018ರ ಕ್ರಿಮಿನಲ್ ಕಾನೂನು

(ತಿದ್ದುಪಡಿ) ಕಾಯ್ದೆಯು ಮರಣದಂಡನೆ ಸೇರಿದಂತೆ ಇನ್ನಷ್ಟು ಕಠಿಣವಾದ ದಂಡದ ನಿಬಂಧನೆಗಳನ್ನು ಒಳಗೊಂಡಿದೆ.ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಕಾಯ್ದೆಯ ಪ್ರಕಾರ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ

ಚಾರ್ಜ್​ ಶೀಟ್ ಸಲ್ಲಿಸಬೇಕು ಹಾಗೂವಿಚಾರಣೆಯನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯಗೊಳಸಲಾಗಿದೆ.

ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯನ್ನು ಸರ್ಕಾರವು ಪ್ರಾರಂಭಿಸಿದೆ. ಪ್ಯಾನ್​ ಇಂಡಿಯಾ(Pan India) ವ್ಯವಸ್ಥೆಯ 112 ಹೆಲ್ಪ್​ ಲೈನ್​ (Help Line)ಶುರು ಮಾಡಲಾಗಿದೆ. ಅಹಮದಾಬಾದ್ (Ahmedabad),

ಬೆಂಗಳೂರು (Bengaluru), ಚೆನ್ನೈ (Chennai), ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ಸೇರಿ ಎಂಟು ನಗರಗಳಲ್ಲಿ ಸ್ಮಾರ್ಟ್ ಪೊಲೀಸಿಂಗ್(Smart Policing) ಮತ್ತು ಸುರಕ್ಷತಾ ನಿರ್ವಹಣೆಗೆ

ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು ಸೇಫ್ ಸಿಟಿ (Safe City) ಯೋಜನೆ ಜಾರಿ ಮಾಡಲಾಗಿದೆ. 2018ರಲ್ಲಿ ಗೃಹ ಸಚಿವಾಲಯವು ಸೈಬರ್ ಕ್ರೈಮ್​ ಪೋರ್ಟಲ್ (Cyber Crime Portal)​

ಅನ್ನು ಅಶ್ಲೀಲತೆ ಪ್ರಕರಣಗಳ ಬಗ್ಗೆ ವರದಿ ಮಾಡಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.

ರಶ್ಮಿತಾ ಅನೀಶ್

Exit mobile version