ಸಾರ್ವಜನಿಕರ ಆಕ್ರೋಶ: ಬಡವರಿಗೆ ಒಂದು ನ್ಯಾಯ? ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ?

Bengaluru: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ರವರು ಹುಲಿ (Tiger Claw Locket case) ಉಗುರಿನ ಲಾಕೆಟ್ ಧರಿಸಿದ್ದಾರೆಂಬ ಪ್ರಕರಣದಲ್ಲಿ

ಬಿಗ್ ಬಾಸ್ ಮನೆಯಲ್ಲಿದ್ದ ಅವರನ್ನು ಅರಣ್ಯ ಸಂರಕ್ಷಣಾ ಇಲಾಖೆಯವರು ಏಕಾಏಕಿ ಬಂಧಿಸಿದ್ದರು.ಇವರನ್ನು ಬಂಧಿಸುತ್ತಿದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹುಲಿ ಉಗುರು

ಧರಿಸಿರುವ ಸೆಲೆಬ್ರಿಟಿಗಳ ಫೋಟೋಗಳು, ವಿಡಿಯೋಗಳು, ವೈರಲ್ (Viral) ಆಗಿದ್ದು ಅವರನ್ನು ಏಕೆ ಬಂಧಿಸಿಲ್ಲ ಬಡವರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯನಾ ಎಂದು

ಸಾರ್ವಜನಿಕರು (Tiger Claw Locket case) ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಸೆಲೆಬ್ರಿಟಿಗಳಾದ (Celebrity) ನಿಖಿಲ್ ಕುಮಾರಸ್ವಾಮಿ, ಚಾಲೆಂಜಿಂಗ್ ಸ್ಟಾರ್‌ ದರ್ಶನ್ (Challenging Star Darshan), ರಾಕ್ಲೈನ್ ವೆಂಕಟೇಶ್,ಇವರ ಕೊರಳಿನಳ್ಳಿ ಹುಲಿ ಉಗುರಿನ ಲಾಕೆಟ್

ಇದ್ದ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಸೆಲೆಬ್ರಿಟಿ ಮನೆಗಳ ಮೇಲೆ ದಾಳಿ ಮಾಡಿ ಕೆಲವರ ಹುಲಿ ಉಗುರಿನ

ಲಾಕೆಟ್ (Locket) ಗಳನ್ನು ವಶಪಡಿಸಿಕೊಂಡಿದ್ದಾರೆ.ಆದ್ರೆ ವರ್ತೂರ್ ಸಂತೋಷ್ ರಂತೆ ಇವರ ಬಂಧನ ಯಾವಾಗ ಎಂದು ಸಾರ್ವಜನಿಕರಿಂದ ಕೂಗು ಕೇಳಿ ಬರುತ್ತಿದೆ.

ಸಂತೋಷ್ ಬಂಧನದಂತೆ ಇನ್ನುಳಿದ ಸೆಲೆಬ್ರಿಟಿಗಳ ಬಂಧನ ಯಾವಾಗ ಎಂದು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಕಾಟಾಚಾರಕ್ಕೆ ಸೆಲೆಬ್ರಿಟಿಗಳ ಮನೆಮೇಲೆ

ಅರಣ್ಯ ಇಲಾಖೆ ಅnoticeಧಿಕಾರಿಗಳು ದಾಳಿಮಾಡಿದ್ದಾರೆ ಹಾಗೂ ಹೆಸರಿಗಷ್ಟೆ ನೋಟಿಸ್ (Notice) ನೀಡಿದ್ದಾರೆಂದು ಸಾರ್ವಜನಿಕರು ಬಡವರಿಗೊಂದು ನ್ಯಾಯ ಸೆಲೆಬ್ರಿಟಿಗಳಿಗೆ ಇನ್ನೊಂದು

ನ್ಯಾಯನಾ ಎಂದು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಸಚಿವರು ಎಲ್ಲರಿಗೂ ಒಂದೇ ನ್ಯಾಯ ಒಂದೇ ಕಾನೂನು ಯಾರು ತಪ್ಪು ಮಾಡಿದರು ಅವರ ಮೇಲೆ ಕ್ರಮಕೈಕೊಳ್ಳಾಗುವುದು ಎಂದು ಮಾಧ್ಯಮಗಳ ಮುಂದೆ

ಹೇಳಿಕೆಯನ್ನು ನೀಡುತ್ತಾರೆ. ಆದ್ರೆ ಈಗ ಮಾಡಿದ್ದು ಏನು? ನಟ ಜಗ್ಗೇಶ್ (Jaggesh), ದರ್ಶನ್,ನಿಖಿಲ್, ಹಾಗೂ ಬಿದಿನಿಗೆರೆ ಶನಿಮಹಾತ್ಮ ದೇವಾಲಯ ಅರ್ಚಕ ಧನಂಜಯ ಗೂರುಜಿಗೆ ಇನ್ನೊಂದು

ನ್ಯಾಯನಾ ಎನ್ನುವ ಪ್ರಶ್ನೆಗಳು ಸೃಷ್ಟಿಯಾಗುತ್ತಿವೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅರಣ್ಯಾ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಇದನ್ನು ಓದಿ: ಬೆಂಗಳೂರಿಗೆ ರಾಮನಗರ ಸೇರ್ಪಡೆ: ಡಿಕೆಶಿ v/s ಎಚ್‌ಡಿಕೆ ನಡುವೆ ಸವಾಲು ಪ್ರತಿಸವಾಲು

Exit mobile version