ನಿಮ್ಮ ರಾಜಕೀಯ ಲಾಭಕ್ಕಾಗಿ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಬಳಸಬೇಡಿ : ಟಿಪ್ಪು ಸುಲ್ತಾನ್ ವಂಶಸ್ಥರು!

Karnataka : ಟಿಪ್ಪು ಸುಲ್ತಾನ್‌(Tippu sultan) ಅವರ ವಂಶಸ್ಥರೊಬ್ಬರು ನಿಮ್ಮ ರಾಜಕೀಯ ಪಕ್ಷಗಳು ಟಿಪ್ಪು ಸುಲ್ತಾನ್‌ ಅವರ ಹೆಸರನ್ನು ನಿರಂತರವಾಗಿ ಬಳಸುವುದನ್ನು (Tipu Sultan Descendants warned) ನಿಲ್ಲಿಸುವುದು ಒಳಿತು ಇಲ್ಲದಿದದ್ದರೇ ಕಾನೂನು ಕ್ರಮದ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಚುನಾವಣೆಗು ಮುನ್ನ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ಪರಸ್ಪರ ವಾಗ್ದಾಳಿ ನಡೆಸಲು ಟಿಪ್ಪು ಸುಲ್ತಾನ್‌ ಅವರ ಹೆಸರನ್ನು ಬಳಸಿಕೊಂಡಿವೆ!

ಟಿಪ್ಪು ಸುಲ್ತಾನ್ ಅವರ 7ನೇ ತಲೆಮಾರಿನ ವಂಶಸ್ಥರಾದ ಸಹಬಜಾದ ಮನ್ಸೂರ್ ಅಲಿ ಅವರು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಟಿಪ್ಪು ಸುಲ್ತಾನ್ ಹೆಸರನ್ನು ಬಳಸದಂತೆ ತಡೆಯಾಜ್ಞೆ ಸಲ್ಲಿಸಲು ನಿರ್ಧರಿಸಿದ್ದೇವೆ,

ಏಕೆಂದರೆ ಅದು ಬಿಜೆಪಿಯಾಗಿರಲಿ ಅಥವಾ ಕಾಂಗ್ರೆಸ್ ಆಗಿರಲಿ. ಇವರ ನಡೆ ಟಿಪ್ಪು ಸುಲ್ತಾನ್‌ ಅವರ ಕುಟುಂಬ ಮತ್ತು ಅವರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ತಂದಿದೆ.

ನಾವು ಟಿಪ್ಪು ವಂಶಸ್ಥರು ಮತ್ತು ನಮ್ಮ ವಕೀಲರಾದ ಮೈಸೂರಿನ ಫಾತಿಮ್ ಆಸಿಫ್ ಅವರೊಂದಿಗೆ ಮಾತನಾಡಿದ್ದೇವೆ.

ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ ಮತ್ತು ರಾಜಕೀಯ ಲಾಭಕ್ಕಾಗಿ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಬಳಸದಂತೆ ತಡೆಯಾಜ್ಞೆ ಸಲ್ಲಿಸಿದ್ದೇವೆ.

ಇದು ಬಿಜೆಪಿ ಅಥವಾ ಕಾಂಗ್ರೆಸ್ ಯಾರಿಗೆಯಾದರೂ ಅನ್ವಯಿಸುತ್ತದೆ! ಯಾವುದೇ ಪಕ್ಷಗಳು ಟಿಪ್ಪು ಸುಲ್ತಾನ್‌ಗಾಗಿ ಏನನ್ನೂ ಮಾಡಿಲ್ಲ,

ಅವರು ಅವರ ಹೆಸರನ್ನು ಮತಕ್ಕಾಗಿ ಧ್ರುವೀಕರಣಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು : ಹೊನ್ನಾವರ ಗಲಭೆಯಲ್ಲಿ ದಾಖಲಾಗಿದ್ದ 122 ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರ!

ಕರ್ನಾಟಕದ ರಾಜಕೀಯ ನಾಯಕರು ಮೈಸೂರು ದೊರೆ ಟಿಪ್ಪು ಸುಲ್ತಾನ್ ಹೆಸರನ್ನು ವಿಶೇಷವಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಪರಸ್ಪರ ದಾಳಿ ಮಾಡಲು ಬಳಸಿಕೊಳ್ಳತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಕರ್ನಾಟಕ ಬಿಜೆಪಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್ ಅವರು ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಟಿಪ್ಪು ವರ್ಸಸ್ ಸಾವರ್ಕರ್ ಎಂದು ಹೇಳಿ ರಾಜ್ಯ ರಾಜಕೀಯದಲ್ಲಿ ಗದ್ದಲ ಎಬ್ಬಿಸಿದ್ದರು.

ಶಿವಮೊಗ್ಗದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಅವರು, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುವುದಿಲ್ಲ,

ಬದಲಿಗೆ ಸಾವರ್ಕರ್ ಮತ್ತು ಟಿಪ್ಪು ಸಿದ್ಧಾಂತಗಳ ನಡುವೆ ನಡೆಯಲಿದೆ ಎಂದು ನೇರವಾಗಿ ಹೇಳಿಕೆ ನೀಡಿದ್ದರು.

ನಳಿನ್‌ ಕುಮಾರ್‌ ಕಟೀಲ್‌ ಅವರ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಟಿಪ್ಪು ಸುಲ್ತಾನ್‌ ಅವರ ಹೆಸರು ತೀವ್ರ ಚರ್ಚೆಗೆ ಗ್ರಾಸವಾಯಿತು.

ಟಿಪ್ಪು ಸುಲ್ತಾನ್‌ ಅವರ ಹೆಸರನ್ನು ಉಲ್ಲೇಖಿಸಿ ವಾದ-ಪ್ರತಿವಾದಗಳನ್ನು ಮಂಡಿಸಿದರು.

ಇದರ ಹಿಂದೆಯೂ ಕೂಡ ಬೆಂಗಳೂರು ಮತ್ತು ಮೈಸೂರು ಸಂಪರ್ಕಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಎಂದು ಇದ್ದ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು.

ಇದರ ಬೆನ್ನಲ್ಲೇ ಮಾತನಾಡಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಟಿಪ್ಪು ಸುಲ್ತಾನ್ ಪರಂಪರೆಯನ್ನು ಬಿಜೆಪಿ ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕಾಂತಾರ ಪಾರ್ಟ್ 2 ನಲ್ಲಿ ತಲೈವಾ ರಜನಿಕಾಂತ್ ಎಂಟ್ರಿ? ; ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ!

ಇದೇ ಸಾಲಿನಲ್ಲಿ ಇತ್ತೀಚಿಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಕೂಡ, ಟಿಪ್ಪು ಸುಲ್ತಾನ್ ಅನ್ನು ಮುಗಿಸಿದ ರೀತಿಯಲ್ಲೇ ಸಿದ್ದರಾಮಯ್ಯ ಅವರನ್ನು ಕೂಡ ಮುಗಿಸಬೇಕು ಎಂದು ಹೇಳಿದ್ದರು!

ಈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತೀವ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸದ್ಯ ಈ ಎಲ್ಲಾ ರಾಜಕೀಯಗಳ ಕಚ್ಚಾಟಗಳಲ್ಲಿ ಟಿಪ್ಪು ಸುಲ್ತಾನ್‌ ಅವರ ಹೆಸರು ಅನಗತ್ಯವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜಕೀಯ ನಾಯಕರ ಈ ನಡೆಯನ್ನು ಖಂಡಿಸಿ ಅವರ ವಂಶಸ್ಥರಾದ ಅಲಿ ಅವರು ಆರೋಪಿಸಿದ್ದಾರೆ.

Exit mobile version