Bengaluru : 6 ವರ್ಷಗಳ ಹಿಂದೆ ಹೊನ್ನಾವರದ ಪರೇಶ್ ಮೇಸ್ತಾ(Paresh Mesta) ಸಾವಿನ ನಂತರ ನಡೆದ ಗಲಭೆಯಲ್ಲಿ 122 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಇದೀಗ ರಾಜ್ಯ ಸರ್ಕಾರ ಹಿಂಪಡೆದಿದೆ. ಇತ್ತೀಚಿಗೆ ನಡೆದ (Honnavar riots cases withdrawn) ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕದ ಹೊನ್ನಾವರ ಜಿಲ್ಲೆಯಲ್ಲಿ ಪರೇಶ್ ಮೇಸ್ತಾ ಅವರ ಸಾವಿನ ಬೆನ್ನಲ್ಲೇ ಭುಗಿಲೆದ್ದಿದ್ದ ಕೋಮು ಗಲಭೆಯಲ್ಲಿ 122 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು
ಭಾರತೀಯ ಜನತಾ ಪಕ್ಷದ(BJP) ಸರ್ಕಾರವು ಹಿಂಪಡೆದಿದೆ ಎಂಬುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋಮು ಗಲಭೆಗೆ ಸಂಬಂಧಿಸಿದಂತೆ 122 ಜನರ ವಿರುದ್ಧದ ಮೂರು ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆದೇಶಿಸಿದ್ದಾರೆ.
2017 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪರೇಶ್ ಮೇಸ್ತಾ (19) ಡಿಸೆಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಡಿಸೆಂಬರ್ 8 ರಂದು ಹೊನ್ನಾವರದ ಶೆಟ್ಟಿಕೆರೆ ಕೆರೆಯಿಂದ ಅವರ ಮೃತದೇಹ ಪತ್ತೆಯಾಗಿದ್ದು, ಇದಾದ ಕೆಲವೇ ದಿನಗಳಲ್ಲಿ ಆ ಪ್ರದೇಶದಲ್ಲಿ ಕೋಮುಗಲಭೆ (Honnavar riots cases withdrawn) ನಡೆದಿತ್ತು.
ಇದನ್ನೂ ಓದಿ: ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು : ಸಿದ್ದರಾಮಯ್ಯ
ಇದೊಂದು ಕೊಲೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಬಜರಂಗದಳ, ಸ್ಥಳೀಯ ಶಾಸಕರು ಸೇರಿದಂತೆ ಬಲಪಂಥೀಯ ಸಂಘಟನೆಗಳು ಮೇಸ್ತಾ ಅವರ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದ್ದವು.
ಶಾಸಕ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwara Hegde Kageri), ಬಿಜೆಪಿ ಕಾರ್ಯಕರ್ತರು,
ಬಜರಂಗದಳ(Bajarangadala) ಕಾರ್ಯಕರ್ತರು ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಆದ್ರೆ, ಇದೀಗ, ಗಲಭೆಗೆ ಸಂಬಂಧಿಸಿದ ಎಲ್ಲಾ 122 ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆದೇಶಿಸಿದೆ.
ಮೆಸ್ತಾ ಸಾವಿನ ಪ್ರಕರಣ : ಕಳೆದ ವರ್ಷ, ಕೇಂದ್ರೀಯ ತನಿಖಾ ದಳ (ಸಿಬಿಐ) ಮೆಸ್ತಾ ಸಾವಿನ ಪ್ರಕರಣದ ಕುರಿತು ‘ಬಿ’ ವರದಿಯನ್ನು ಸಲ್ಲಿಸಿ ಅದನ್ನು ಆಕಸ್ಮಿಕ ಸಾವು ಎಂದು ಘೋಷಿಸಿತು. ವರದಿಯಲ್ಲಿ,
ಮೆಸ್ತಾ ಅವರ ದೇಹದಲ್ಲಿ ಯಾವುದೇ ಬಾಹ್ಯ ಗಾಯಗಳು ಅಥವಾ ಹಲ್ಲೆಯ ಗುರುತುಗಳಿಲ್ಲ ಎಂದು ಸಿಬಿಐ ಉಲ್ಲೇಖಿಸಿತು.
ಪ್ರಕರಣದಲ್ಲಿ ಜಮಾಲ್ ಆಜಾದ್, ಆಶಿಫ್ ರಫೀಕ್, ಫೈಝಲ್, ಸಲೀಂ ಮತ್ತು ಇಮ್ತಿಯಾಜ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿತ್ತು.