ಕಾವೇರಿ ಕಿಚ್ಚು: ತಮಿಳುನಾಡಿನಲ್ಲಿ ಕರ್ನಾಟಕದ ವಿರುದ್ಧ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳು ಬಂದ್

Tamilnadu: ಕರ್ನಾಟಕದ @Karnataka ವಿರುದ್ಧ ತಮಿಳುನಾಡು ರೈತರು ಪ್ರತಿಭಟನೆ ನಡೆಸುತ್ತಿದ್ದು, (TN Protest against KAR) ಕಾವೇರಿ ನೀರಿನ ಸಮರ್ಪಕ ಪೂರೈಕೆ ಇಲ್ಲದ ಕಾರಣ

ಬೆಳೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ಬುಧವಾರ 8 ಜಿಲ್ಲೆಗಳಲ್ಲಿ ತಮಿಳುನಾಡಿನ ರೈತರ ಗುಂಪುಗಳು ಬಂದ್‌ಗೆ (Bandh) ಕರೆ ನೀಡಿದ್ದು, ಪ್ರತಿಭಟನೆಯ ಮೂಲಕ ತಮಿಳುನಾಡಿಗೆ

ಸಾಕಷ್ಟು ಪ್ರಮಾಣದ ಕಾವೇರಿ ನೀರು ಬಿಡುವಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು (TN Protest against KAR) ರೈತರು ಒತ್ತಾಯಿಸಿದ್ದಾರೆ.

ಬುಧವಾರ ತಂಜಾವೂರು (Thanjavur), ತಿರುಚ್ಚಿ, ತಿರುವರೂರ್, ನಾಗಪಟ್ಟಣಂ, ಪುದುಕೊಟ್ಟೈ, ಮೈಲಾಡುತುರೈ, ಕಡಲೂರು ಮತ್ತು ಅರಿಯಲೂರು ಉಳಿದಂತೆ ಇನ್ನು 8 ಜಿಲ್ಲೆಗಳಲ್ಲಿ ಹಲವಾರು

ಅಂಗಡಿಗಳು ಮುಚ್ಚಲ್ಪಟ್ಟಿದೆ. ಡೆಲ್ಟಾ (Delta) ಜಿಲ್ಲೆಗಳ ರೈತರು ನೀರಾವರಿಗಾಗಿ ಕಾವೇರಿ ನೀರು ಬಿಡುಗಡೆಯನ್ನೇ ನೆಚ್ಚಿಕೊಂಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ #mkstalin ಅವರು ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಕನಿಷ್ಠ 40,000 ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು

ನೀರಿನ ಕೊರತೆಯಿಂದಾಗಿ ನಾಶವಾಗಿವೆ ಎಂದು ಹೇಳಿದ್ದಾರೆ.

ನೀರಿನ ಕೊರತೆಯಿಂದ ಕಾವೇರಿ (Kaveri) ಡೆಲ್ಟಾ ಭಾಗದ ರೈತರ ಬೆಳೆಗಳು ವ್ಯತಿರಿಕ್ತ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೆರವು ಘೋಷಿಸಿದ್ದು, ಕರ್ನಾಟಕ ಸರ್ಕಾರವು ಸಮರ್ಪಕವಾಗಿ

ನೀರು ಬಿಡುವಂತೆ ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯಿಸಿ, ನೆರೆಯ ತಮಿಳುನಾಡಿನ (Tamilnadu) ಹಲವಾರು ಕಾರ್ಮಿಕ ಸಂಘಟನೆಗಳು ಬುಧವಾರ ಡೆಲ್ಟಾ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿದೆ.

ನಾಗಪಟ್ಟಣಂನಲ್ಲಿ (Nagapattanam) ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯ ಸಂಕೇತವಾಗಿ 12,000 ಅಂಗಡಿಗಳನ್ನು ಮುಚ್ಚಲಾಗಿದ್ದು, ಈ ಜಿಲ್ಲೆಗಳಲ್ಲಿ ಜನರ ದೈನಂದಿನ

ಅಗತ್ಯಗಳನ್ನು ಪೂರೈಸಲು ಮಾತ್ರ ತೆರೆಯಲಾಗಿದೆ.

ಇದನ್ನು ಓದಿ: ಬಿಗ್ ಪ್ರೊಡ್ಯುಸರ್, ಏನೇನು ಸ್ಕ್ರಿಪ್ಟ್ ರೆಡಿ ಇದೀಯೋ ನೋಡೋಣ ಎಂದು ಮುನಿರತ್ನಗೆ ಡಿಕೆ ಸುರೇಶ್ ತಿರುಗೇಟು

Exit mobile version