ಟೋಕಿಯೋದಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ

ಟೋಕಿಯೋ ನ 02 : ಜಪಾನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯವಾದ ಬೆನ್ನಲೆ ಭಾನುವಾರ ರೈಲಿನಲ್ಲಿ ಚಾಕು ಮತ್ತು ಗುಂಡಿನ ದಾಳಿ ನಡೆದ ಪರಿಣಾಮ 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾದ  ಘಟನೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದಿದೆ.

ಟೋಕಿಯೋದಲ್ಲಿ ವ್ಯಕ್ತಿಯೊಬ್ಬನು ಕೀಯೋ ಲೈನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದು, ಈ ವೇಳೆ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅದು ಅಲ್ಲದೇ ಆರೋಪಿಯು ರೈಲಿನ ಸುತ್ತ ಲಿಕ್ವಿಡ್ ಅನ್ನು ಹಾಕಿದ್ದನು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ವೀಡಿಯೋವೊಂದರಲ್ಲಿ ಜನರು ಕೀಯೋ ಲೈನ್ ರೈಲಿನಿಂದ ತಪ್ಪಿಸಿಕೊಳ್ಳಲು ಕಿಟಕಿಗಳನ್ನು ಏರುತ್ತಿರುವ ದೃಶ್ಯ ಸೇರೆಯಾಗಿದೆ

ಆರೋಪಿಯು ಚಾಕು ಮತ್ತು ಬಂದೂಕಿನಿಂದ ಜನರ ಮೇಲೆ ದಾಳಿ ಮಾಡಿದ್ದು, 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಕ್ರಮಣ ಮಾಡಿದವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Exit mobile version