Visit Channel

ಉತ್ತಮ ಆರೋಗ್ಯಕ್ಕೆ ಟೊಮೊಟೋ ಎಂಬ ಸಂಜೀವಿನಿ

ನಾವು ಅಂದುಕೊಳ್ಳಬಹುದು, ಈ ಪುಟ್ಟ ಹಣ್ಣಿನಲ್ಲಿ ಅಂತಾದ್ದು ಏನಿರಬಹುದೆಂದು?,ಆದರೆ ನಾವು ನೀವು ಟೊಮೊಟೋ ಹಣ್ಣನ್ನು ಬರೀ ಅಡುಗೆಗಳನ್ನು ಮಾಡಲು ಮಾತ್ರ ಉಪಯೋಗಿಸುತ್ತೇವೆ.ಅದನ್ನು ಹೊರತುಪಡಿಸಿ ಈ ಟೊಮೊಟೋ ನಮ್ಮ ಆರೋಗ್ಯಕ್ಕೂ ಎಷ್ಟು ಸಹಕಾರಿಯಾಗಿದೆ ಎಂದು ತಿಳಿಯೋಣ. ಟೊಮೊಟೋದ ವೈಜ್ಙಾನಿಕ ಹೆಸರು ಸೋಲೋನಮ್ ಲೈಕೊಪಸಿ೯ಕಮ್.

ಇದರ ಗಿಡವು ಸ್ವಲ್ಪ ಮಟ್ಟಿಗೆ ಬಳ್ಳಿಯ ಆಕಾರದಲ್ಲಿರುತ್ತದೆ.ಹಾಗಯೇ ಇದು ತರಕಾರಿ ಅಲ್ಲ,ಇದೊಂದು ಬಗೆಯ ಹಣ್ಣಿನ ಜಾತಿಗೆ ಸೇರಿದ್ದು ಎಂದು ವಿಜ್ಙಾನ ಲೋಕ ಹೇಳುತ್ತದೆ.ಹಾಗೂ ಇ ಹಣ್ಣನ್ನು ಮೊದಲಿಗೆ ಮೆಕ್ಸಿಕ್ ದೇಶದಲ್ಲಿ ಬೆಳೆದಿದ್ದಾರೆ ಎನ್ನಲಾಗಿದೆ.

ಪೋಷಕಾಂಶಗಳು:-

ಟೊಮೊಟೋದಲ್ಲಿ ಶೇ.೯೫% ರಷ್ಟು ಭಾಗ ನೀರಿನಿಂದ ಕೂಡಿದ್ದು ಇನ್ನುಳಿದ ೫% ರಷ್ಟು ಕಾಬೊ೯Ãಹೈಡ್ರೇಟ್ ಪ್ರೊಟೀನ್ & ಕೊಬ್ಬನ್ನು ಒಳಗೊಂಡಿರುತ್ತದೆ.ಮತ್ತು ಹಲವಾರು ಖನಿಜಗಳು,ಪೋಲೇಟ್,ಪೊಟ್ಯಾಶಿಯಂ,ವಿಟಮಿನ್ ಹಾಗೂ ವಿಟಮಿನ್ ಸಿ ಗಳನ್ನು ಹೊಂದಿದೆ.

ಕ್ಯಾನ್ಸರ್ ವಿರೋಧಿ:-

ಇದು ಕ್ಯಾನ್ಸರ್ ವಿರೋಧಿಯಾಗಿದ್ದು ಟೊಮೊಟೋದಲ್ಲಿರುವ ಲಿಕೋಪಿನ್ ಎಂಬ ಅಂಶವು ಕ್ಯಾನ್ಸರ್  ಕೋಶಗಳ ಬೆಳವಣಿಗೆಯನ್ನು ನಿಯಂತ್ರಣ ಮಾಡಿ ಕೋಲಿನ್, ಸ್ತನಗಳು & ನಮ್ಮ ಶ್ವಾಸಕೋಶಗಳಲ್ಲಿ ಆಂಟಿ ಆಕ್ಸಿಡೆಂಟ್ಗಳು ದೇಹದಲ್ಲಿನ ಕ್ಯಾನ್ಸರ್‌ಕಾರಿಯಾದ ಪ್ರತಿಕ್ರಿಯೆಗಳನ್ನು ತಡೆಯುತ್ತದೆ.

ಆರೋಗ್ಯಕಾರಿ ಹೃದಯ:-

ಟೊಮೊಟೋದಲ್ಲಿ ಹಾಗೂ ಅದರ ಬೀಜಗಳಲ್ಲಿ ಕೊಲೆಸ್ಟಾçಲ್‌ನ ಅಂಶವಿರುವುದಿಲ್ಲ, ಹಾಗೂ ದೇಹದಲ್ಲಿರುವ ಅತಿಯಾದ ಕೊಲೆಸ್ಟಾçಲ್‌ನ ಕಡಿಮೆ ಮಾಡುತ್ತದೆ ಮತ್ತು ಇದರಲ್ಲಿರುವ ಪೊಟ್ಯಾಶಿಯಂ ಹೃದಯ ಸಂಬAಧಿ ಕಾಯಿಲೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಬಿಪಿ/ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ಸೇವಿಸಿದರೆ ಲಿಕೋಪಿನ್ & ಕ್ಲೋರೊಜೆನಿಕ್ ಅಸಿಡ್ ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ:-

ಈಗಿನ ಯುಗದಲ್ಲಿ ಅನೇಕ ಮಂದಿ ರಕ್ತ ಹೆಪ್ಪುಗಟ್ಟುವಿಕೆಯ ಪರಿಣಾಮದಿಂದ ಹೃದಯಕ್ಕೆ ಸಂಬAಧಿಸಿದ ತೊಂದರೆಗಳಿAದ ಸಾವನ್ನಪ್ಪಿರುವ ಘಟನೆಗಳನ್ನು ಕೇಳಿದ್ದೇವೆ. ಹಸಿ ಟೊಮೊಟೋವನ್ನು ದಿನನಿತ್ಯ ತಿನ್ನುವುದರಿಂದ ಟಮೋಟೋದ ಬೀಜದ ಸುತ್ತಲಿರುವ ಫ್ಲಟ್ರೋ ಎಂಬ ಲೋಳೆಯು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಸಹಕಾರಿಯಾಗುತ್ತದೆ.

ಉತ್ತಮ ಜೀಣ೯ಕ್ರಿಯೆ:-

ಟೊಮೊಟೋದಲ್ಲಿರುವ ನಾರಿನಾಂಶಗಳು ಸ್ನಾಯುಗಳ ಚಲನವಲನಗಳನ್ನು ಸುಧಾರಿಸುತ್ತದೆ. ಅತಿ ಹೆಚ್ಚು ಜೀಣ೯ಕ್ರಿಯೆ ರಸವನ್ನು ಬಿಡುಗಡೆಮಾಡಿ ಉತ್ತಮ ಜೀಣ೯ಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಂತ್ರಿಸಿ ಮಲಬದ್ಧತೆಯನ್ನು ತಡೆಯುವುದು.

ಸ್ಥೂಲಕಾಯ ನಿಯಂತ್ರಣ:-

ಇAದಿನ ಜನರ ಜೀವನ ಶೈಲಿಯಲ್ಲಿ ಫಾಸ್ಟ್ಫುಡ್ ಯುಗವೇ ಆಗಿಬಿಟ್ಟಿದೆ,ವಿಭಿನ್ನ ರೀತಿಯ ಸ್ಪೆöÊಸಿ ಫುಡ್ ತಿನ್ನುವುದರಿಂದ ಸ್ಥೂಲಕಾಯ ದೇಹವನ್ನು ಹೊಂದಿರುವವರೇ ಹೆಚ್ಚು.

ತಮ್ಮ ಹಸಿ ಟೊಮೊಟೋಗಳನ್ನು ತಮ್ಮ ಊಟದ ಜೊತೆಗೆ ತಿನ್ನಲು ಬಳಕೆ ಮಾಡುವುದರಿಂದ ಅವರ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಚಮ೯ದ ಆರೈಕೆ:-

ಟೊಮೊಟೋದಲ್ಲಿ ಬ್ಲೀಚ್ ಅಂಶವಿದ್ದು ಚಮ೯ದ ಮೇಲಿನ ಸನ್ ಟ್ಯಾನ್ ಕಡಿಮೆ ಮಾಡುವುದಲ್ಲದೆ ಮುಖದ ಮೇಲಿನ ಮೊಡವೆ & ಕಲೆಗಳನ್ನು ತೆಗೆದುಹಾಕಿ ಮುಖವು ಮೃದುವಾಗಿ ಹೊಳೆಯುವಂತೆ ಮಡುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.