Online Certificate Course: 2023 ರಲ್ಲಿನ ಭಾರತದ ಟಾಪ್ 8 ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್‌ಗಳು ಇಲ್ಲಿದೆ ಮಾಹಿತಿ

ನೀವೇನಾದ್ರು ಉದ್ಯೋಗಾವಕಾಶಗಳನ್ನು ಸುಧಾರಿಸಲು ಬಯಸುತ್ತಿದ್ದೀರಾ ಹಾಗಾದ್ರೆ ಭಾರತದಲ್ಲಿ ಈ ಆನ್‌ಲೈನ್ ಪ್ರಮಾಣಪತ್ರ (top 8 certification courses) ಕೋರ್ಸ್‌ಗಳು ನಿಮಗೆ ಸಹಾಯ

ಮಾಡಬಹುದು. ಹೌದು, ಈ ಕೋರ್ಸ್‌ಗಳು​ ನಿಮಗೆ ನಿರ್ದಿಷ್ಟ ಕೌಶಲ್ಯಗಳನ್ನು ಕಲಿಸುತ್ತದೆ. ಇವು ವೃತ್ತಿಯನ್ನು ಬದಲಾಯಿಸಲು ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಹುಡುಕಲು ಮತ್ತು

ಉದ್ಯೋಗದಾತರನ್ನು ಮೆಚ್ಚಿಸಲು ಸುಲಭಗೊಳಿಸುತ್ತದೆ. ಮತ್ತು ಈ ಕೋರ್ಸ್‌ಗಳು ಅವು ನಿಮ್ಮ ವೃತ್ತಿಜೀವನವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಡೇಟಾ ಸೈನ್ಸ್ (Data Science) ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್‌ಗಳು (Machine Learning Course) :
ಮಾಸ್ಟರ್ ಆಫ್ ಸೈನ್ಸ್ (Master Of Science) ಇನ್ ಮೆಷಿನ್ ಲರ್ನಿಂಗ್ ಮತ್ತು AI (18 ತಿಂಗಳ ಕೋರ್ಸ್):
ಈ ಕೋರ್ಸ್ ಕೃತಕ ಬುದ್ದಿಮತ್ತೆ ಮತ್ತು ಮಷೀನ್ ಲರ್ನಿಂಗ್​ನಲ್ಲಿ (Machine Learning) ಆಸಕ್ತಿ ಹೊಂದಿರುವ ವೃತ್ತಿಪರರಿಗಾಗಿ. ಇದು ಡೇಟಾ ಅನಾಲಿಟಿಕ್ಸ್ (Data Analytics), ಮಷೀನ್

ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್​ ನಂತಹ ವಿವಿಧ ವಿಷಯಗಳನ್ನು ಒಳಗೊಂಡಿದೆ. ಇದನ್ನು ಪೂರ್ಣಗೊಳಿಸುವುದರಿಂದ ಸಾಫ್ಟ್‌ವೇರ್ (Software) ಅಭಿವೃದ್ಧಿ ಮತ್ತು AI ನಲ್ಲಿ ಹೆಚ್ಚಿನ ಸಂಬಳ ಸಿಗುವ

ವೃತ್ತಿಯನ್ನು (top 8 certification courses) ಹುಡುಕಬಹುದಾಗಿದೆ.

PG ಡಿಪ್ಲೊಮಾ (PG Deploma) ಇನ್ ಮೆಷಿನ್ ಲರ್ನಿಂಗ್ ಮತ್ತು AI:
ಈ ಕೋರ್ಸ್ ಕೂಡ 12 ತಿಂಗಳ ಕೋರ್ಸ್ ಆಗಿದ್ದು, ಅಗತ್ಯ ಡೇಟಾ ವಿಜ್ಞಾನ ಮತ್ತು ಮೆಷಿನ್ ಲರ್ನಿಂಗ್ ವಿಷಯಗಳನ್ನು ಒಳಗೊಂಡಿದೆ. ಅಲ್ಲದೆ ಇದು ಕೇಸ್ ಸ್ಟಡೀಸ್ ಮತ್ತು ಲೈವ್ ಪ್ರಾಜೆಕ್ಟ್‌ಗಳ

ಮೂಲಕ ನೈಜತೆಯ ಅನುಭವವನ್ನು ಒದಗಿಸುತ್ತದೆ. ಪದವೀಧರರು AI ಇಂಜಿನಿಯರ್‌ಗಳು (Engineer) ಮತ್ತು ವ್ಯಾಪಾರ ವಿಶ್ಲೇಷಕರಾಗಿ ವೃತ್ತಿಯನ್ನು ಅನ್ವೇಷಿಸಬಹುದು.

ಪಿಜಿ ಡಿಪ್ಲೊಮಾ ಇನ್ ಡೇಟಾ ಸೈನ್ಸ್ (PG Diploma In Data Science) :
ಕೆಲಸ ಮಾಡುವ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾದ ಈ ಕೋರ್ಸ್ 12 ತಿಂಗಳ ಕೋರ್ಸ್ ಆಗಿದ್ದು, ಡೇಟಾ ಸೈನ್ಸ್‌ನಲ್ಲಿ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ. ಆಳವಾದ ಕಲಿಕೆ, ಡೇಟಾ

ಎಂಜಿನಿಯರಿಂಗ್ ಮತ್ತು ಇತರ ವಿಷಯಗಳನ್ನು ನೀವು ಆಯ್ಕೆ ಮಾಡಬಹುದು. ಇದು ಡಾಟಾ ಸೈಂಟಿಸ್ಟ್ (Data Scientist) ಮತ್ತು ಮೆಷಿನ್ ಲರ್ನಿಂಗ್ ಇಂಜಿನಿಯರ್‌ನಂತಹ ಹುದ್ದೆಗಳಿಗೆ ನಿಮ್ಮನ್ನು

ಸಿದ್ಧಪಡಿಸುತ್ತದಲ್ಲದೆ ಇದು ಲಾಭದಾಯಕ ಸಂಬಳದೊಂದಿಗೆ ಇರುತ್ತದೆ.

ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು (Management Course):
ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ:
ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ 2 ವರ್ಷಗಳ ಕೋರ್ಸ್ ಆಗಿದ್ದು, ಈ ಕಾರ್ಯಕ್ರಮವು ವ್ಯಾಪಾರ ನಿರ್ವಹಣೆ ಮತ್ತು ಹಣಕಾಸಿನಂತಹ ಕ್ಷೇತ್ರಗಳಲ್ಲಿ

ವಿಶೇಷತೆಯನ್ನು ನೀಡುತ್ತದೆ.

ಇದು ಮಾರ್ಕೆಟಿಂಗ್, ಹಣಕಾಸು ಮತ್ತು ಕಾರ್ಯತಂತ್ರದ ನಿರ್ವಹಣೆಯಲ್ಲಿ ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಪದವೀಧರರು PGDM ಪ್ರಮಾಣೀಕರಣವನ್ನು ಪಡೆಯಬಹುದು,

ಇದು ಅವರ ವೃತ್ತಿಜೀವನದ ಭವಿಷ್ಯವನ್ನು ಉಜ್ವಲಗೊಳಿಸುವ ಭರವಸೆಯನ್ನು ನೀಡುತ್ತದೆ.

ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಪ್ರೋಗ್ರಾಂ (Management In PG Program):
ಇದು 11 ತಿಂಗಳ ಕೋರ್ಸ್ ಆಗಿದ್ದು, ವಿವಿಧ ವೃತ್ತಿಪರರಿಗೆ ಸೂಕ್ತವಾಗಿದೆ. ಈ ಪ್ರೋಗ್ರಾಂ ಮ್ಯಾನೇಜ್‌ಮೆಂಟ್ ಫಂಡಮೆಂಟಲ್ಸ್, ನಾಯಕತ್ವ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು

ಒಳಗೊಂಡಿದೆ. ಇದು IMT ಘಾಜಿಯಾಬಾದ್‌ನಿಂದ PGPM ಪ್ರಮಾಣೀಕರಣದೊಂದಿಗೆ ಜಾಗತಿಕ ಉದ್ಯೋಗಾವಕಾಶಗಳಿಗೆ ಬಾಗಿಲು ತೆರೆಯುತ್ತದೆ.

ಬ್ಲಾಕ್‌ಚೈನ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ನಲ್ಲಿ (Blockchain Technology Management) ಕಾರ್ಯನಿರ್ವಾಹಕ ಕಾರ್ಯಕ್ರಮ:
ಈ ಕೋರ್ಸ್ 5 ತಿಂಗಳ ಕೋರ್ಸ್ ಆಗಿದ್ದು, ಬ್ಲಾಕ್‌ಚೈನ್ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿ ಈ ಕೋರ್ಸ್ ನಿಮ್ಮನ್ನು ಬ್ಲಾಕ್‌ಚೈನ್ ಕನ್ಸಲ್ಟೆಂಟ್‌ನಂತಹ

(Blackchain Consultant) ಪಾತ್ರಗಳಿಗೆ

ಸಿದ್ಧಪಡಿಸುತ್ತದೆ. ಕೇಸ್ ಸ್ಟಡೀಸ್ ಮತ್ತು ಕಾರ್ಯಾಗಾರಗಳ ಮೂಲಕ ನೀವು ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯಬಹುದು.

ಉತ್ಪನ್ನ ನಿರ್ವಹಣೆ ಪ್ರಮಾಣೀಕರಣ ಕಾರ್ಯಕ್ರಮ:
ಈ ಕಾರ್ಯಕ್ರಮವು ಉತ್ಪನ್ನ ನಿರ್ವಹಣೆಯಲ್ಲಿ ಪರಿಣತಿಯನ್ನು ನೀಡುತ್ತದೆ. ಮತ್ತು ಇದು 6 ತಿಂಗಳ ಕೋರ್ಸ್ ಆಗಿದ್ದು, ಇದು ವಿಶ್ಲೇಷಣೆ ಬಳಕೆದಾರ ವಿನ್ಯಾಸ ಮತ್ತು ಡಿಜಿಟಲ್ (Digital)

ರೂಪಾಂತರವನ್ನು ಒಳಗೊಂಡಿದೆ. ಪದವೀಧರರು ಪ್ರಾಡಕ್ಟ್ ಮ್ಯಾನೇಜರ್ (Product Manager) ಮತ್ತು ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್‌ನಂತಹ ಹುದ್ದೆಗಳನ್ನು ಪಡೆಯಬಹುದು.

ಗ್ಲೋಬಲ್ ಮಾಸ್ಟರ್ ಸರ್ಟಿಫಿಕೇಟ್ ಇನ್ ಇಂಟಿಗ್ರೇಟೆಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ (ISCM) :
ಈ ಕೋರ್ಸ್ ಪೂರೈಕೆ ಸರಪಳಿ ಏಕೀಕರಣ ಮತ್ತು ಲಾಜಿಸ್ಟಿಕ್ಸ್ (Logistics) ನಿರ್ವಹಣೆಯನ್ನು ಕಲಿಸುತ್ತದೆ. ಮತ್ತು ಪದವೀಧರರು ಉನ್ನತ ಶ್ರೇಣಿಯ ವಿಶ್ವವಿದ್ಯಾನಿಲಯದಿಂದ ಜಾಗತಿಕ ಸ್ನಾತಕೋತ್ತರ

ಅದಾನಿ ಅಕ್ರಮ: ಮಾರಿಷಸ್‌ ಕಂಪನಿಯಿಂದ ಭಾರೀ ಪ್ರಮಾಣದ ರಹಸ್ಯ ಹೂಡಿಕೆ, ಅದಾನಿ ಸಮೂಹದ ವಿರುದ್ಧ ಮತ್ತೊಂದು ಅಕ್ರಮದ ಆರೋಪ

ಪ್ರಮಾಣಪತ್ರವನ್ನು ಸ್ವೀಕರಿಸಬಹುದು. ಪೂರೈಕೆ ಸರಪಳಿ/ಸಪ್ಲೈ ಚೈನ್ ನಿರ್ವಹಣೆಯಲ್ಲಿ ತಮ್ಮ ವೃತ್ತಿಜೀವನದ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಮತ್ತು ಇದು 6 ತಿಂಗಳ ಕೋರ್ಸ್ ಆಗಿದೆ.

ಆನ್‌ಲೈನ್‌ ಕೋರ್ಸ್‌ಗಳು ವೃತ್ತಿಜೀವನಕ್ಕೆ ಹೇಗೆ ಸಹಾಯ ಮಾಡುತ್ತವೆ:
1. ವೃತ್ತಿ ಬದಲಾವಣೆ: ಈ ಕೋರ್ಸ್‌ಗಳು ವಿಶೇಷ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವುದಲ್ಲದೆ ಹೊಸ ವೃತ್ತಿ ಕ್ಷೇತ್ರಕ್ಕೆ ಪರಿವರ್ತನೆಯನ್ನು ಸುಲಭಗೊಳಿಸುತ್ತದೆ.
2. ಹೆಚ್ಚಿನ ಸಂಬಳ: ಪ್ರಮಾಣೀಕರಣದ ಮೂಲಕ ಪರಿಣತಿಯನ್ನು ಪಡೆದುಕೊಳ್ಳುವುದು ಹೆಚ್ಚಿನ ಸಂಬಳದ ಉದ್ಯೋಗಾವಕಾಶಗಳಿಗೆ ಕಾರಣವಾಗಬಹುದು. ಮತ್ತು ಉದ್ಯೋಗದಾತರು
ಸಾಮಾನ್ಯವಾಗಿ ಉತ್ತಮ ಪರಿಹಾರದೊಂದಿಗೆ ವಿಶೇಷ ಕೌಶಲ್ಯಗಳನ್ನು ನೀಡುತ್ತಾರೆ.
3. ಉದ್ಯೋಗ ಹುಡುಕುವುದು: ಪ್ರಮಾಣೀಕರಣಗಳು ನಿಮ್ಮನ್ನು ಉದ್ಯೋಗದಾತರಿಗೆ ಹೆಚ್ಚು ಆಕರ್ಷಕ ಅಭ್ಯರ್ಥಿಯನ್ನಾಗಿ ಮಾಡುವುದಲ್ಲದೆ ಅಪೇಕ್ಷಿತ ಕ್ಷೇತ್ರದಲ್ಲಿ ಉದ್ಯೋಗವನ್ನು
ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಈ ಪ್ರಮಾಣೀಕರಣ ಕೋರ್ಸ್‌ಗಳು (Course) ಉದ್ಯೋಗದಾತರ ವೃತ್ತಿಜೀವನವನ್ನು ವೃದ್ಧಿಸಲು, ಕ್ಷೇತ್ರಗಳನ್ನು ಬದಲಾಯಿಸಲು ಮತ್ತು ಆದಾಯವನ್ನು ಸಂಭಾವ್ಯವಾಗಿ ಹೆಚ್ಚಿಸಲು ಸಹಾಯ ಮಾಡುವ

ಮೌಲ್ಯಯುತ ಕೌಶಲ್ಯ ಮತ್ತು ರುಜುವಾತುಗಳನ್ನು ನೀಡುತ್ತದೆ. ಇದು ಉತ್ತಮ ವೃತ್ತಿಪರ ಬೆಳವಣಿಗೆಗೆ ಅನುಕೂಲವಾಗಿದೆ.

ಭವ್ಯಶ್ರೀ ಆರ್.ಜೆ

Exit mobile version