• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅದಾನಿ ಅಕ್ರಮ: ಮಾರಿಷಸ್‌ ಕಂಪನಿಯಿಂದ ಭಾರೀ ಪ್ರಮಾಣದ ರಹಸ್ಯ ಹೂಡಿಕೆ, ಅದಾನಿ ಸಮೂಹದ ವಿರುದ್ಧ ಮತ್ತೊಂದು ಅಕ್ರಮದ ಆರೋಪ

Rashmitha Anish by Rashmitha Anish
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅದಾನಿ ಅಕ್ರಮ: ಮಾರಿಷಸ್‌ ಕಂಪನಿಯಿಂದ ಭಾರೀ ಪ್ರಮಾಣದ ರಹಸ್ಯ ಹೂಡಿಕೆ, ಅದಾನಿ ಸಮೂಹದ ವಿರುದ್ಧ ಮತ್ತೊಂದು ಅಕ್ರಮದ ಆರೋಪ
0
SHARES
502
VIEWS
Share on FacebookShare on Twitter

New Delhi (ಸೆ.1): ತಮ್ಮದೇ ಕಂಪನಿಗಳ ಷೇರುಗಳ ಮೇಲೆ ಗೌತಮ್‌ ಅದಾನಿ (illegality against Adani group) ಕುಟುಂಬವು 2013-18ರ ಅವಧಿಯಲ್ಲಿ ಒಪೆಕ್ಯೂ

ಇನ್ವೆಸ್ಟ್‌ಮೆಂಟ್ ಫಂಡ್‌ (Ope Q Investment Fund) ಹೆಸರಿನ ಮಾರಿಷಸ್‌ (Mauritius) ಮೂಲದ ಸಂಸ್ಥೆಯ ಮೂಲಕ ರಹಸ್ಯವಾಗಿ ಭಾರೀ ಪ್ರಮಾಣದ ಹಣವನ್ನು ಹೂಡಿಕೆ

ಮಾಡಿತ್ತು ಎಂಬ ಗಂಭೀರ ಆರೋಪವೊಂದು ಇದೀಗ ಕೇಳಿ ಬಂದಿದೆ. ವಿಶೇಷವೆಂದರೆ ಅದಾನಿ ಸಮೂಹದ ಷೇರುಗಳ ಮೌಲ್ಯ ಈ ಅವಧಿಯಲ್ಲಿ ಭಾರೀ ಏರಿಕೆ ಕಂಡಿತ್ತು.

ಅದಾನಿ ಸಮೂಹದ ಮೇಲೆ ಈ ಗಂಭೀರ ಆರೋಪವನ್ನು ದ ಆರ್ಗನೈಸ್ಡ್‌ ಕ್ರೈಮ್‌ ಆ್ಯಂಡ್‌ ಕರಪಕ್ಷನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್ (ಒಸಿಸಿಆರ್‌ಪಿ) ಎಂಬ ಸಂಸ್ಥೆ ಮಾಡಿದೆ. ಆದರೆ ಅದಾನಿ ಸಮೂಹ,

ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿ ‘ಇದು ಹಳೆಯ ಆರೋಪವಾಗಿದ್ದ ಹಳೇ ಆಪಾದನೆಯನ್ನೇ ಮರುಬಳಕೆ ಮಾಡಿದಂತಿದೆ’ ಎಂದು ವ್ಯಂಗ್ಯವಾಡಿದೆ. ಜೊತೆಗೆ ಮತ್ತೆ ಹೊಸ ಆರೋಪವನ್ನು

ತನಿಖೆ ನಡೆಸಿ ದಶಕಗಳ ಹಿಂದೆ ಕ್ಲೀನ್‌ಚಿಟ್‌(Clean chit) ನೀಡಲಾದ ಪ್ರಕರಣದ ಅಂಕಿ ಅಂಶಗಳನ್ನು ಇಟ್ಟುಕೊಂಡೇ ಮಾಡಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ : ವಿಶ್ವದಲ್ಲೇ ಮೊದಲ ಎಥೆನಾಲ್ ಕಾರು ಭಾರತದಲ್ಲಿ ಬಿಡುಗಡೆ! ಈ ಕಾರಿನ ವಿಶೇಷತೆ ಏನು ಗೊತ್ತಾ?

ಹೊಸ ಆರೋಪ ಏನು?: ದುಬೈನಲ್ಲಿ(Dubai) ಗೌತಮ್‌ ಅದಾನಿ ಅವರ ಸೋದರ ಮತ್ತು ಅದಾನಿ ಸಮೂಹದ ಸ್ಥಾಪಕ ಆಗಿರುವ ವಿನೋದ್‌ ಅದಾನಿ(Vinod Adani) ಕಂಪನಿಯೊಂದನ್ನು ಹೊಂದಿದ್ದಾರೆ.

ಇವರ ಪರವಾಗಿ ಮಾರಿಷಸ್‌ ಮೂಲದ ಎರಡು ಹೂಡಿಕೆ ಸಂಸ್ಥೆಗಳ ಮೂಲಕ ಅದಾನಿ ಸಮೂಹಕ್ಕೆ ಸೇರಿದ ಕೋಟ್ಯಂತರ ರು. ಮೌಲ್ಯದ ಷೇರುಗಳ ವಹಿವಾಟುವನ್ನು ತೈವಾನ್‌(Taiwan) ಮೂಲಕ

ಚಾಂಗ್‌ ಚುಂಗ್‌ ಲಿಂಗ್‌(Chang Chung Ling) ಮತ್ತು ಯುಎಇ(UAE) ಮೂಲದ ನಾಸೆರ್‌ ಅಲಿ ಶಬಾನ್‌ (Nasser Ali Shaban) ಎಂಬಿಬ್ಬರು ಹಲವು ವರ್ಷಗಳ ಕಾಲ ನಡೆಸಿದ್ದಾರೆ.

ಹೀಗೆ ಅದಾನಿ ಸಮೂಹ ರಹಸ್ಯವಾಗಿ ಭಾರೀ ಪ್ರಮಾಣದ ಹಣವನ್ನು ಪರೋಕ್ಷವಾಗಿ ತಮ್ಮದೇ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಇದರಿಂದಾಗಿ ಕಂಪನಿಯ ಷೇರು ಮೌಲ್ಯ ಭಾರೀ

ಏರಿಕೆ ಕಂಡಿದೆ ಎಂಬುದು ಒಸಿಸಿಆರ್‌ಪಿ (illegality against Adani group) ಸಂಸ್ಥೆ ಆರೋಪ.

ಅದಾನಿ ವಿರುದ್ಧ ತನಿಖೆ: ಮತ್ತೆ ರಾಹುಲ್‌ ಗಾಂಧಿ ಆಗ್ರಹ

ಕಾಂಗ್ರೆಸ್‌ (Congress)ಮುಖಂಡ ರಾಹುಲ್‌ ಗಾಂಧಿ(Rahul Gandhi) ಗೌತಮ್‌ ಅದಾನಿ ಸಮೂಹದ ನಡೆಸಿರುವ ವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು ಎಂದು ಮತ್ತೆ ಆಗ್ರಹ ಮಾಡಿದ್ದಾರೆ. ರಹಸ್ಯವಾಗಿ ಅದಾನಿ ಕಂಪನಿಯಲ್ಲಿ ಮಾರಿಷಸ್‌ ಮೂಲದ ಕಂಪನಿಯು ಹೂಡಿಕೆ ಮಾಡಿತ್ತು ಎಂದು ಅಮೆರಿಕದ ಸಂಸ್ಥೆಯೊಂದು ಆರೋಪಿಸಿದ ಬೆನ್ನಲ್ಲೇ ರಾಹುಲ್‌ ಈ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮರೀಚಿಕೆ ಆಗುತ್ತಿರುವ ಮಳೆ : ಮೋಡ ಬಿತ್ತನೆ ಬೇಡವೆಂದ ಸಿಎಂ ಸಿದ್ದರಾಮಯ್ಯ

ಸುದ್ದಿಗೋಷ್ಠಿಯಲ್ಲಿ (news conference) ಗುರುವಾರ (Thursday) ಮಾತನಾಡಿದ ಅವರು, ‘ ಇಂದು ಅದಾನಿ ಸಮೂಹದ ಬಗ್ಗೆ ವಿಶ್ವದ ಅನೇಕ ಕಡೆಗಳಿಂದ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸೆಬಿ

ಕ್ಯಾನ್ಸರ್‌ಗೆ ಚುಚ್ಚುಮದ್ದು: ಕ್ಯಾನ್ಸರ್ ಚಿಕಿತ್ಸೆಗೆ ಚುಚ್ಚುಮದ್ಧು ಕಂಡು ಹಿಡಿದ ಇಂಗ್ಲೆಂಡ್

ವರದಿ ಕೂಡ ಆರೋಪ ಮಾಡಿತ್ತು. ಆದರೆ ಅದನ್ನೆಲ್ಲ ಮುಚ್ಚಿಹಾಕಿ ಸರ್ಕಾರವು ಅದಾನಿಗೆ ಕ್ಲೀನ್‌ಚಿಟ್‌ ಕೊಡುವುದು ಸರಿಯಲ್ಲ. ಅದಾನಿ ಅಕ್ರಮಗಳ ತನಿಖೆಯನ್ನು ಜಂಟಿ ಸದನ ಸಮಿತಿ ರಚಿಸಿ ನಡೆಸಬೇಕು.

ಗೌತಮ್‌ ಅದಾನಿ ಸೋದರ ವಿನೋದ್‌ ಅದಾನಿ ಮಾರಿಷಸ್‌ ಕಂಪನಿಗಳ ಅಕ್ರಮ ಹೂಡಿಕೆ ಹಿಂದೆ ಇದ್ದಾರೆ. ಮಾರಿಷಸ್‌ ಕಂಪನಿಗಳ ಹಣ ಕೂಡ ಅದಾನಿಯದ್ದೇ ಎನ್ನಲಾಗಿದೆ. ಈ ಬಗ್ಗೆ ಕೂಡಲೇ ಹೆಚ್ಚಿನ

ತನಿಖೆ ಆಗಬೇಕು ’ ಎಂದು ರಾಹುಲ್‌ ಅಗ್ರಹಿಸಿದ್ದಾರೆ.

ಅಮೆರಿಕ (America)ಮೂಲದ ಹಿಂಡೆನ್‌ಬರ್ಗ್ (Hindenburg research)ಸಂಸ್ಥೆ ಕೂಡ ಅದಾನಿ ಸಮೂಹದ ಮೇಲೆ ಕಳೆದ ಜನವರಿ ತಿಂಗಳಲ್ಲಿ ನಾನಾ ರೀತಿಯ ಆರೋಪ ಮಾಡಿತ್ತು. ಅದರ ಬಳಿಕ

150 ಶತಕೋಟಿ ಡಾಲರ್‌ಗೂ (12 ಲಕ್ಷ ಕೋಟಿ ರು.) ಹೆಚ್ಚಿನ ಕುಸಿತವನ್ನು ಅದಾನಿ ಸಮೂಹದ ವಿವಿಧ ಕಂಪನಿಗಳ ಷೇರು ಮೌಲ್ಯ ಕಂಡಿತ್ತು. ಹಾಲಿ ಆರೋಪ ಮಾಡಿರುವ ಸಂಸ್ಥೆಯ ಹಿಂದಿನ ಶಕ್ತಿ

ಹಿಂಡೆನ್‌ಬರ್ಗ್ ಸಂಸ್ಥೆಯ ಜಾಜ್‌ರ್‍ ಸೊರೋಸ್‌ (Jazzer Soros) ಕೂಡಾ ಹೌದು. ಶೀಘ್ರವೇ ಭಾರತದ ಪ್ರಮುಖ ಕಂಪನಿಯೊಂದರ ಅಕ್ರಮ ಬಹಿರಂಗಪಡಿಸುವುದಾಗಿ ಇತ್ತೀಚೆಗಷ್ಟೇ ಜಾಜ್‌ರ್‍

ಸೊರೋಸ್‌ ಹೇಳಿದ್ದರು. ಇದೀಗ ಅದರ ಬೆನ್ನಲ್ಲೇ ವರದಿ ಬಿಡುಗಡೆಯಾಗಿದೆ.

ಆರೋಪಕ್ಕೆ ದಾಖಲೆ: ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರೀ ಏರಿಕೆ ಬಗ್ಗೆ 2014ರಲ್ಲಿ ಸ್ವತಃ ಸೆಬಿಗೆ ಸಾಕ್ಷ್ಯ ನೀಡಲಾಗಿತ್ತು. ಈ ತನಿಖಾ ವರದಿಯನ್ನು ಕಂಪನಿಯ ಆಂತರಿಕ ಇ ಮೇಲ್‌ಗಳನ್ನು

(E Mail) ಆಧರಿಸಿ ಮತ್ತು ಇದನ್ನು ಆಧರಿಸಿ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಜೊತೆಗೆ ಯು.ಕೆ.ಸಿನ್ಹಾ ಆಗ ಸೆಬಿ ಅಧ್ಯಕ್ಷರಾಗಿದ್ದರು ಆದರೆ ಇದೀಗ ಇದೀಗ ಅದಾನಿ ಸಮೂಹದ ಒಡೆತನದ

ಎನ್‌ಡಿಟೀವಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ ಮತ್ತು ನಿರ್ದೇಶಕ ಆಗಿದ್ದಾರೆ ಎಂದು ವರದಿ ಹೇಳಿದೆ.

ರಶ್ಮಿತಾ ಅನೀಶ್

Tags: gautam adaniillegalIndiamauritius

Related News

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ
ಪ್ರಮುಖ ಸುದ್ದಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

October 2, 2023
ಗಾಂಧಿ ಜಯಂತಿ: ರಾಷ್ಟ್ರಪಿತರಾದ ಬಾಪು ರವರ ಜನ್ಮದಿನದ ಕುರಿತಾದ ಮಾಹಿತಿ ಇಲ್ಲಿದೆ.
ದೇಶ-ವಿದೇಶ

ಗಾಂಧಿ ಜಯಂತಿ: ರಾಷ್ಟ್ರಪಿತರಾದ ಬಾಪು ರವರ ಜನ್ಮದಿನದ ಕುರಿತಾದ ಮಾಹಿತಿ ಇಲ್ಲಿದೆ.

October 2, 2023
ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ
ದೇಶ-ವಿದೇಶ

ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.