ವರುಣಾದಿಂದಲೇ ಕಣಕ್ಕಿಳಿಯಲು ವಿಜಯೇಂದ್ರ ಸಿದ್ದತೆ ; ಸಿದ್ದರಾಮಯ್ಯಗೆ ಸಂಕಷ್ಟ..?!

Mysore : ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಮಾಡಲು ನಿರ್ಧರಿಸಿರುವ ಅವರ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಯಡಿಯೂರಪ್ಪನವರ (Yediyurappa) ಪುತ್ರ ವಿಜಯೇಂದ್ರ ಕೂಡಾ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ ಎಂಬ ಮಾತು (Trouble for Siddaramaiah) ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ, ವಿಜಯೇಂದ್ರ ಶಿಕಾರಿಪುರದ ಜೊತೆಗೆ ವರುಣಾದಿಂದಲೂ ಸ್ಪರ್ಧೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಇದಕ್ಕೆ ಬಿಜೆಪಿ ಹೈಕಮಾಂಡ್‌ಕೂಡಾ ಒಪ್ಪಿಗೆ ನೀಡಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪನವರು ಕೂಡಾ ಕೇವಲ ವರುಣಾದಿಂದ ಸ್ಪರ್ಧೆ ಮಾಡುವುದು ಬೇಡ, ಶಿಕಾರಿಪುರದ ಜೊತೆಗೆ ವರುಣಾ ನೀಡಿದರೆ, ವಿಜಯೇಂದ್ರ ಸ್ಪರ್ಧೆ ಮಾಡಲಿ ಎಂದು ಹೇಳಿದ್ಧಾರೆ ಎನ್ನಲಾಗಿದೆ.

ವಿಜಯೇಂದ್ರ (Vijayendra) ವರುಣಾದಿಂದ ಸ್ಪರ್ಧೆ ಮಾಡಿದರೆ, ಸಿದ್ದರಾಮಯ್ಯನವರಿಗೆ ಗೆಲುವು ಸುಲಭವಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದು,

ಇನ್ನುಳಿದಂತೆ ಒಕ್ಕಲಿಗ ಸಮುದಾಯದ ಬೆಂಬಲ ಸಿಕ್ಕರೆ ಸಿದ್ದರಾಮಯ್ಯನವರನ್ನು ವರುಣಾದಲ್ಲೇ ಕಟ್ಟಿಹಾಕಬಹುದು ಎಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ (BJP).

ಇದನ್ನೂ ಓದಿ : https://vijayatimes.com/bjp-strategy-in-mysore/

ಇದರ ಸುಳಿವು ಅರಿತಿರುವ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದ ಜೊತೆಗೆ ಇನ್ನೊಂದು ಕ್ಷೇತ್ರವನ್ನು ಕೊಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರು ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡಲು ಒಲವು ತೋರಿದ್ದಾರೆ.

ಆದರೆ ಕೋಲಾರದಲ್ಲಿಯೂ ಸಿದ್ದರಾಮಯ್ಯನವರ ಪರವಾದ ವಾತಾವರಣವಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಹೈಕಮಾಂಡ್‌ (High Command) ಕೂಡಾ ಈ ಬಗ್ಗೆ ಸಿದ್ದರಾಮಯ್ಯನವರ ಗಮನ ಸೆಳೆದಿದ್ದು, ಕೋಲಾರ ಸೇಫ್‌ಅಲ್ಲ ಎಂಬ ಕಿವಿ ಮಾತನ್ನು ರಾಹುಲ್‌ಗಾಂಧಿ ಮತ್ತು ಮಲ್ಲಿಕಾರ್ಜುನ್‌ಖರ್ಗೆ ಸಿದ್ದುಗೆ ಹೇಳಿದ್ಧಾರೆ ಎನ್ನಲಾಗಿದೆ.

ಇನ್ನು ವಿಜಯೇಂದ್ರ ಶಿಕಾರಿಪುರ ಜೊತೆಗೆ ವರುಣಾದಿಂದ ಸ್ಪರ್ಧೆ ಮಾಡಿದರೆ, ಅವರಿಗೆ ಅನುಕೂಲಕರ ವಾತಾರವಣ ನಿರ್ಮಾಣವಾಗಲಿದೆ.

ಇದನ್ನೂ ಓದಿ : https://vijayatimes.com/siddaramaiah-vs-vijayendra/

ಶಿಕಾರಿಪುರದಲ್ಲಿ ಕೇವಲ ನಾಮಪತ್ರ ಸಲ್ಲಿಸಿದರೆ ಸಾಕು, ಅಣ್ಣ ರಾಘವೇಂದ್ರ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ತಂದೆ ಯಡಿಯೂರಪ್ಪನವರು ಎರಡು ದಿನ ಪ್ರಚಾರ ಮಾಡಿದರೆ,

ಸುಲಭವಾಗಿ ಶಿಕಾರಿಪುರದಲ್ಲಿ ಗೆಲುವು ವಿಜಯೇಂದ್ರ ಪಾಲಾಗಲಿದೆ. ಆದರೆ ಸಿದ್ದರಾಯ್ಯನವರಿಗೆ ವರುಣಾ ಮತ್ತು ಕೋಲಾರ ಎರಡು ಕಡೆಗಳಲ್ಲೂ ಗೆಲುವು ಸುಲಭವಲ್ಲ.

ವರುಣಾದಲ್ಲಿ ಯತೀಂದ್ರಗೆ ಚುನಾವಣೆಯ ಉಸ್ತುವಾರಿ ನೀಡಿದರೆ, ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಎದುರಿಸುವ ಚಾಣಾಕ್ಷತೆ ಯತೀಂದ್ರರಲ್ಲಿ ಕಾಣುತ್ತಿಲ್ಲ.

ಸಿದ್ದರಾಮಯ್ಯನವರು ಸ್ವತಃ ಕ್ಷೇತ್ರದಲ್ಲೇ ನೆಲಯೂರಿ ಚುನಾವಣೆ ನಡೆಸಿದರೆ, ಗೆಲುವು ಸಿದ್ದರಾಮಯ್ಯನವರಿಗೆ ದಕ್ಕುವ ಸಾಧ್ಯತೆಯಿದೆ.

ಸಿದ್ದರಾಮಯ್ಯನವರು ಮಗನಿಗೆ ಉಸ್ತುವಾರಿ ನೀಡಿ, ಬೇರೆ ಕ್ಷೇತ್ರಗಳಿಗೆ ಪ್ರಚಾರಕ್ಕೆಹೋದರೆ ಅದರ ಲಾಭವನ್ನು ವಿಜಯೇಂದ್ರ ಪಡೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ವಿಜಯೇಂದ್ರ ವರುಣಾಕ್ಕೆ ಕಾಲಿಟ್ಟರೆ ಸಿದ್ದು ಹೊಸ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

Exit mobile version