Japan: ಜಪಾನ್ನಲ್ಲಿ (Japan) ಪ್ರಬಲ ಭೂಕಂಪ ಸಂಭವಿಸಿರುವ ಬೆನ್ನಲ್ಲೇ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಇನ್ನು ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ದಾಖಲಾಗಿದ್ದು, ಭಾರೀ ಸಾವು ನೋವುಗಳ ಆತಂಕ ಎದುರಾಗಿದೆ. ಜಪಾನ್ ಕರಾವಳಿ ಭಾಗದಲ್ಲಿ ಭಾರೀ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಯಾವುದೇ ಜೀವ ಹಾನಿಯಾದ ವರದಿಯಾಗಿಲ್ಲ. ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ನೀಡಿದ ಮಾಹಿತಿ ಪ್ರಕಾರ.. ಭೂಕಂಪವು (Earthquake) ಇಶಿಕಾವಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪ ಆಗಿದೆ. ಅದರ ತೀವ್ರತೆ 7.4 ರಷ್ಟಿದೆ ಎಂದು ತಿಳಿಸಿದೆ. ದೊಡ್ಡ ದೊಡ್ಡ ಬಿಲ್ಡಿಂಗ್ನಿಂದ ಜನರು ಆಚೆ ಬರಬೇಕು ಹಾಗೂ ಕರಾವಳಿ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಬರಬೇಕು.
ರಕ್ಷಣಾ ಪಡೆ ಕೂಡಲೇ ಸಿದ್ಧರಾಗಬೇಕು ಎಂದು ಪ್ರಚಾರ ಮಾಡಲಾಗಿದ್ದು, ಟೋಕಿಯೋ, ಕಾಂಟೋ (Tokyo, Kanto) ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪದ ಅನುಭವ ಆಗಿದೆ. ಪೆಸಿಫಿಕ್ ಸಾಗರದ “ರಿಂಗ್ ಆಫ್ ಫೈರ್” (Ring of Fire) ಎಂದು ಕರೆಯಲ್ಪಡುವ ಜಪಾನ್ ದೇಶವು, ವಿಶ್ವದ ಅತ್ಯಂತ ಭೂಕಂಪನ ಪೀಡಿತ ದೇಶಗಳಲ್ಲಿ ಒಂದಾಗಿದೆ.
ಮಾರ್ಚ್ (March) 11,2011 ರಂದು ಜಪಾನ್ನ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪದಿಂದ ಸುನಾಮಿ ಬಂದಿತ್ತು. ಈ ಅವಘಡದಲ್ಲಿ 18,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು ಪರಮಾಣು ದುರಂತದ ಅಪಾಯ ಉಂಟುಮಾಡಿತ್ತು. 2011ರ ಸುನಾಮಿ ವೇಳೆ ಸಮುದ್ರದಲ್ಲಿ 10 ಮೀಟರ್ ಎತ್ತರದ ಅಲೆಗಳು ಉಂಟಾಗಿತ್ತು.
ಇಂದಿನ ಭೂಕಂಪನದ ತೀವ್ರತೆ ಗಮನಿಸಿದರೆ 5 ಮೀಟರ್ ಎತ್ತರದ ಅಲೆಗಳು ಎಳುವ ಸಾಧ್ಯತೆ ಇದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ ಎಂದು ವರದಿಗಳು ಹೇಳಿವೆ.
1.2 ಮೀಟರ್ಗೂ ಎತ್ತರದ ಅಲೆಗಳು ಏಳುತ್ತಿರುವುದು ಇಶಿಕಾವಾ (Ishikawa) ಜಿಲ್ಲೆಯ ವಾಜಿಮಾದಲ್ಲಿ ಕಾಣಿಸಿದೆ. ಭೂಕಂಪನದ ನಂತರ ಅಪ್ಪಳಿಸಿದ ಮೊದಲ ಸುನಾಮಿ ಅಲೆಗಳು ಇವು. ಭೂಕಂಪನದ ಬಳಿಕ ಇಶಿಕಾವಾ ಜಿಲ್ಲೆಯಲ್ಲಿನ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ಅದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೊಕುರಿಕು ಎಲೆಕ್ಟ್ರಿಕ್ ಪವರ್ (Electric Power) ಸಂಸ್ಥೆ ತಿಳಿಸಿದೆ.
ಭವ್ಯಶ್ರೀ ಆರ್ ಜೆ