UAEಯಲ್ಲಿ ಹೊಸ ವಲಸೆ ಕಾನೂನು ಜಾರಿ ; ಪ್ರವಾಸಿಗರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಹೊಸ ವೀಸಾ ನಿಯಮಗಳು!

UAE : ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಹೊಸ ವಲಸೆ ಕಾನೂನುಗಳನ್ನು (Law) ಜಾರಿಗೊಳಿಸಿದ್ದು, ಪ್ರವಾಸಿಗರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಹೊಸ ವೀಸಾ (Visa) ನಿಯಮಗಳು ಸೇರಿದಂತೆ ಅನೇಕ ಹೊಸ ನಿಯಮಗಳನ್ನು ರೂಪಿಸಿದೆ.

ಈ ಹೊಸ ಕಾನೂನುಗಳು ಗಲ್ಪ್‌ ದೇಶದಲ್ಲಿ ವಾಸಿಸಲು ಆಸಕ್ತಿ ಹೊಂದಿರುವವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸುಧಾರಿತ ವೀಸಾ ವ್ಯವಸ್ಥೆಯ ಅಡಿಯಲ್ಲಿ ರೂಪಿಸಲಾದ ಹೊಸ ನಿಯಮಗಳು ಅಕ್ಟೋಬರ್ 3 ರಂದು (UAE Enlists new Visa for travellers) ಜಾರಿಗೆ ಬಂದಿವೆ. ಹೊಸ ವೀಸಾ ಯೋಜನೆ ಪ್ರವಾಸಿಗರಿಗೆ ದೀರ್ಘಾವಧಿಯ ವೀಸಾಗಳು,

ಗ್ರೀನ್ ವೀಸಾ ಅಡಿಯಲ್ಲಿ ವೃತ್ತಿಪರರಿಗೆ ವಿಸ್ತೃತ ರೆಸಿಡೆನ್ಸಿ ಮತ್ತು ವಿಸ್ತರಿತ 10 ವರ್ಷದ ಗೋಲ್ಡನ್ ವೀಸಾ(Golden Visa) ಯೋಜನೆಯಂತಹ ಬದಲಾವಣೆಗಳನ್ನು ಪರಿಚಯಿಸುತ್ತಿದೆ.

https://youtu.be/q0WcMtWO6bo

ಹೊಸ ವೀಸಾ ನಿಯಮಗಳ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.

ಯುಎಇ ಹೊಸ ವೀಸಾ ನಿಯಮಗಳು ಯಾವುವು? : ಪ್ರವಾಸಿ ವೀಸಾಗಳು ಸಂದರ್ಶಕರಿಗೆ ಯುಎಇಯಲ್ಲಿ 60 ದಿನಗಳವರೆಗೆ ಇರಲು ಅನುವು ಮಾಡಿಕೊಡುತ್ತದೆ. ಈ ಹಿಂದೆ ಕೇವಲ 30 ದಿನಗಳು ಮಾತ್ರ ಇರಲು (UAE Enlists new Visa for travellers) ಅವಕಾಶ ನೀಡಲಾಗಿತ್ತು.

ಐದು ವರ್ಷಗಳ ಬಹು ಪ್ರವೇಶ ಪ್ರವಾಸಿ ವೀಸಾವು ಸಂದರ್ಶಕರಿಗೆ ಸತತವಾಗಿ 90 ದಿನಗಳವರೆಗೆ ಯುಎಇಯಲ್ಲಿ ಉಳಿಯಲು ಅನುವು ಮಾಡಿಕೊಡುತ್ತದೆ.

ಉದ್ಯೋಗ ಅನ್ವೇಷಣೆ ವೀಸಾವು ಪ್ರಾಯೋಜಕರು ಅಥವಾ ಹೋಸ್ಟ್ ಇಲ್ಲದೆ ಯುಎಇಯಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ವೃತ್ತಿಪರರಿಗೆ ಅವಕಾಶ ನೀಡುತ್ತದೆ. ಸ್ವತಂತ್ರೋದ್ಯೋಗಿಗಳು,

ನುರಿತ ಕೆಲಸಗಾರರು ಮತ್ತು ಹೂಡಿಕೆದಾರರು ಗ್ರೀನ್ ವೀಸಾಕ್ಕೆ ಅರ್ಹರಾಗಿರುತ್ತಾರೆ. ಯಾವುದೇ ಸಹಾಯವಿಲ್ಲದೆ ತಮ್ಮನ್ನು ಪ್ರಾಯೋಜಿಸಲು ವಿದೇಶಿಯರಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ : https://vijayatimes.com/no-door-no-lock/

ಗ್ರೀನ್ ವೀಸಾ (Green Visa) ಹೊಂದಿರುವವರು ಈಗ ತಮ್ಮ ಕುಟುಂಬದ ಸದಸ್ಯರನ್ನು (ಸಂಗಾತಿ, ಮಕ್ಕಳು ಮತ್ತು ಮೊದಲ ಹಂತದ ಸಂಬಂಧಿಗಳು) ತಮ್ಮ ವಾಸ್ತವ್ಯದ ಅವಧಿಗೆ ಪ್ರಾಯೋಜಿಸಬಹುದು.

ಗ್ರೀನ್ ವೀಸಾ ಹೊಂದಿರುವವರ ಪರವಾನಗಿ ಅವಧಿ ಮುಗಿದರೆ, ಅದನ್ನು ನವೀಕರಿಸಲು ಅವರಿಗೆ ಆರು ತಿಂಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ.

ಗೋಲ್ಡನ್ ವೀಸಾ ಅಡಿಯಲ್ಲಿ 10 ವರ್ಷಗಳ ವಿಸ್ತರಿತ ರೆಸಿಡೆನ್ಸಿಯನ್ನು ನೀಡಲಾಗುತ್ತದೆ. ಹೂಡಿಕೆದಾರರು, ಉದ್ಯಮಿಗಳು ಮತ್ತು ಅಸಾಧಾರಣ ಪ್ರತಿಭೆ ಹೊಂದಿರುವ ವ್ಯಕ್ತಿಗಳು ಗೋಲ್ಡನ್ ವೀಸಾಗೆ ಅರ್ಹರಾಗಿರುತ್ತಾರೆ.

ಗೋಲ್ಡನ್ ವೀಸಾ (Golden Visa)ಹೊಂದಿರುವವರು ತಮ್ಮ ಕುಟುಂಬ ಸದಸ್ಯರು ಮತ್ತು ಮಕ್ಕಳನ್ನು ಸಹ ಪ್ರಾಯೋಜಿಸಬಹುದು. ಗೋಲ್ಡನ್ ವೀಸಾ ಹೊಂದಿರುವವರ ಕುಟುಂಬದ ಸದಸ್ಯರು ವೀಸಾ ಮಾನ್ಯವಾಗಿರುವವರೆಗೆ ಯುಎಇಯಲ್ಲಿ ಉಳಿಯಬಹುದು.

Exit mobile version