ನೀವು ಚಹಾ ಪ್ರಿಯರಾ? ಹಾಗಿದ್ದರೆ ಈ ಕುತೂಹಲಕಾರಿ ಮಾಹಿತಿಯನ್ನು ನೀವು ತಿಳಿಯಲೇಬೇಕು!

ಚಹಾ(Tea) ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮನೆಗೆ ಅತಿಥಿಗಳು ಬಂದರೂ ನಾವು ಕೇಳುವ ಮೊದಲನೇ ಪ್ರಶ್ನೆ ಟೀ-ಕಾಫಿ ತಗೋಳ್ತೀರಾ ಎಂದು. ನಮ್ಮ ಬೆಳಗಿನ ಅಚ್ಚುಮೆಚ್ಚಿನ ಚಹಾದ ಇತಿಹಾಸವನ್ನು ತಿಳಿದುಕೊಳ್ಳಲೇಬೇಕು.


ಚಹಾವನ್ನು ಮೊದಲು 2737 BC ಯಲ್ಲಿ ಚೀನಾದ(China) ಚಕ್ರವರ್ತಿ ಶೆನ್ ನಾಂಗ್(Shen Nong) ಕಂಡು ಹಿಡಿದನು ಅಂತ ಹೇಳಲಾಗುತ್ತದೆ. ಮಿತವಾಗಿ ಸೇವಿಸಿದರೆ ಚಹಾ ಆರೋಗ್ಯಕ್ಕೆ ಒಳ್ಳೆಯದು. ಚಹಾವು ಪಾಲಿಫಿನಾಲ್‌ ಅಂಶವನ್ನೊಳಗೊಂಡಿದೆ, ಹಾಗೇ ಜೀವಕೋಶಗಳನ್ನು ಸರಿಪಡಿಸುವ ಆ್ಯಂಟಿ ಆಕ್ಸಿಡೆಂಟ್ಗಳನ್ನು(Anti-Oxidents) ಸಹ ಹೊಂದಿದೆ. ಹೃದಯದ ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಡಯಾಬಿಟಿಸ್ ಮೆಲ್ಲಿಟಸ್ ಮತ್ತು ಇತರ ಕಾಯಿಲೆಗಳನ್ನು ತಡೆಯುವಲ್ಲಿ ಚಹಾ ಸಹಾಯ ಮಾಡುತ್ತದೆ.
ಇನ್ನು, ಅತ್ಯಂತ ಉತ್ತಮವಾದ ಚಹಾವು ಎತ್ತರದ ಪ್ರದೇಶಗಳಿಂದ ಬರುತ್ತದೆ ಮತ್ತು ಇದನ್ನು ಕೈಯಿಂದ ಆರಿಸಲಾಗುತ್ತದೆ.

ಪ್ರಸ್ತುತ ಜಗತ್ತಿನಲ್ಲಿ ನಾಲ್ಕು ಮುಖ್ಯ ವಿಧದ ಚಹಾಗಳಿವೆ. ಕಪ್ಪು, ಹಸಿರು, ಬಿಳಿ, ಊಲಾಂಗ್ ಟೀ. ಈ ಎಲ್ಲಾ ಚಹಾಗಳನ್ನು ಒಂದೇ ಸಸ್ಯದಿಂದ ತಯಾರಿಸಲಾಗುತ್ತದೆ, ಆ ಸಸ್ಯದ ಹೆಸರು ಕ್ಯಾಮೆಲಿಯಾ ಸೈನೆನ್ಸಿಸ್. ಇನ್ನು ಎಲೆಗಳನ್ನು ಯಾವ ನಿರ್ಧಿಷ್ಟ ಸಮಯದಲ್ಲಿ ಕತ್ತರಿಸಲಾಗುತ್ತದೆ, ಹೇಗೆ ಕತ್ತರಿಸಲಾಗುತ್ತದೆ, ಹೇಗೆ ಒಣಗಿಸಲಾಗುತ್ತದೆ, ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ವಿವಿಧ ರೀತಿಯ ಚಹಾಗಳು ಲಭಿಸುತ್ತದೆ. ಆಸಕ್ತಿದಾಯಕ ವಿಷಯವೇನೆಂದರೆ, ಊಬರ್ ಈಟ್ಸ್(Uber Eats) ಮೂಲಕ ನಡೆಸಿದ ಅಧ್ಯಯನದ ಪ್ರಕಾರ ಭಾರತೀಯರು ಕೇವಲ ಆಹಾರ ಮಾತ್ರವಲ್ಲದೆ ಪ್ರತಿದಿನ ಚಹಾ,

ಕಾಫಿಯನ್ನು ಕೂಡ ಡೆಲಿವರಿ ಮೂಲಕ ಪಡೆಯಲು ಬಯಸುತ್ತಾರೆ ಎಂಬುದು ತಿಳಿದು ಬಂದಿದೆ. ಹೆಚ್ಚಿನ ಆಹಾರ ಪ್ರಿಯರು ಊಬರ್ ಆ್ಯಪ್ ಮೂಲಕ ಚಹಾ, ಕಾಫಿ ವಿತರಿಸುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ ಎಂದು ಊಬರ್ ಈಟ್ಸ್ ಮಾಹಿತಿ ಹಂಚಿಕೊಂಡಿದೆ. ಈ ಅಧ್ಯಯನದಲ್ಲಿ(Research) ಬೆಂಗಳೂರು, ಪುಣೆ ಮತ್ತು ದೆಹಲಿ ಭಾಗದ ಜನರು ಅತೀ ಹೆಚ್ಚಾಗಿ ಚಹಾ ಪ್ರಿಯರಾಗಿದ್ದರೆ, ಇಂದೋರ್ ಮತ್ತು ಮುಂಬೈ ಮಂದಿ ಕಾಫಿ ಪ್ರಿಯರು ಎಂಬುದು ತಿಳಿದು ಬಂದಿದೆ. ಇದರಲ್ಲಿ ಮುಂಬೈ ಮಹಾನಗರದ ಜನರು ದಿನಕ್ಕೆ ಎರಡು ಬಾರಿ ಕಾಫಿಯನ್ನು ಆರ್ಡರ್ ಮಾಡುತ್ತಾರೆ ಎಂದು ಈ ಅಧ್ಯಯನದಿಂದ ತಿಳಿದಿದೆ.

‘ಭಾರತೀಯರು ಹೆಚ್ಚಾಗಿ ಕೆಫಿನ್ ತುಂಬಿದ ಪಾನೀಯಗಳನ್ನು ವರ್ಷವಿಡೀ ಕುಡಿಯುತ್ತಾರೆ. ಹಾಗಾಗಿ ಗ್ರಾಹಕರು ಕೂಡ ಬಿಸಿ ಚಹಾ ಮತ್ತು ಕಾಫಿಯನ್ನು ಆರ್ಡರ್ ಮಾಡಲು ಬಯಸುತ್ತಾರೆ’ ಎಂದು ಭಾರತದ ಊಬರ್ ಈಟ್ಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಊಬರ್ ಈಟ್ಸ್ ನಡೆಸಿದ ಈ ಅಧ್ಯಯನದ ಪ್ರಕಾರ, ಟೀ ಗಳಲ್ಲಿ ಶುಂಠಿ ಟೀ ಜನರ ಅತ್ಯಂತ ಅಚ್ಚುಮೆಚ್ಚಿನ ಪಾನೀಯವಾಗಿದ್ದು, ಇದರ ನಂತರದ ಸ್ಥಾನವು ಮಸಾಲ ಟೀಗೆ ಲಭಿಸಿದೆ. ಇದಲ್ಲದೆ ಕೋಲ್ಡ್ ಕಾಫಿಯನ್ನು ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆರ್ಡರ್ ಮಾಡುತ್ತಾರೆ ಎಂಬುದು ತಿಳಿದುಬಂದಿದೆ.

ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಿವಾಸಿಗಳಲ್ಲಿ ಕೂಡ ಶೇ.48ರಷ್ಟು ಮಂದಿ ಟೀ ಆರ್ಡರ್ ಮಾಡಲು ಬಯಸುತ್ತಾರೆ ಎಂದು ಊಬರ್ ಈಟ್ಸ್ ತಿಳಿಸಿದೆ. ಒಟ್ಟಾರೆಯಾಗಿ ಭಾರತದ ಜನಸಂಖ್ಯೆಯ ಸುಮಾರು 64% ನಷ್ಟು ಜನರು ಟೀ ಪ್ರಿಯರಾಗಿ ರುವುದು ವಿಶೇಷವೇ.

Exit mobile version