Udupi: ಉಡುಪಿಯ ಕಾಲೇಜಿನಲ್ಲಿ (College) ವಿಡಿಯೋ ಚಿತ್ರೀಕರಣವಾಗಿರುವುದಕ್ಕೆ ಬಿಜೆಪಿ ಬಳಿ ಸಾಕ್ಷಿ ಇದ್ರೆ ಆ ವಿಡಿಯೋಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಲಿ. ಪೊಲೀಸ್ ತನಿಖೆಯಲ್ಲಿ ಬಿಜೆಪಿಯ ಸುಳ್ಳುಗಳು ಬಯಲಾಗಿದೆ, ರಹಸ್ಯ ಕ್ಯಾಮರಾ ಅಡಗಿಸಿದಲಾಗಿತ್ತು ಎಂದು ಬಿಜೆಪಿ ಆರೋಪಿಸಿತ್ತು. ವಾಸ್ತವದಲ್ಲಿ ಯಾವುದೇ ರಹಸ್ಯ ಕ್ಯಾಮರಾ ಪತ್ತೆಯಾಗಿಲ್ಲ, ವಿದ್ಯಾರ್ಥಿನಿಯ ಎದುರಲ್ಲೇ ತಮಾಷೆಗಾಗಿ ವಿಡಿಯೋ (Video) ಮಾಡಲಾಗಿತ್ತು, ನಂತರ ಅದನ್ನು ಡಿಲೀಟ್ ಮಾಡಲಾಗಿತ್ತು, ಇದು ಪೊಲೀಸರ ತನಿಖೆಯಲ್ಲಿ ಕಂಡುಬಂದ ಸತ್ಯ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಕಾಂಗ್ರೆಸ್, ಈಗಾಗಲೇ ತಮ್ಮದೇ ಪಕ್ಷದ ಕಾರ್ಯಕರ್ತ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಮಾಡಿದ ಬಗ್ಗೆ ತುಟಿ ಬಿಚ್ಚಲಿ. ಆತನಿಂದ ಸಂತ್ರಸ್ತರಾದ ಯುವತಿಯರು ಹಿಂದೂಗಳಲ್ಲವೇ? ಅವರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವೇ? ಈ ಸವಾಲು ಸ್ವೀಕರಿಸಲು ಸಾಧ್ಯವೇ? ಉಡುಪಿ (Udupi) ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಕೋಮು ಸಾಮರಸ್ಯ ಕಡಡುವ ರೀತಿ ಟ್ವೀಟ್ ಮಾಡಿದ್ದ ಯುವತಿಯನ್ನು ಪೊಲೀಸರು ಘಟನೆಯ ಕುರಿತು ಮಾಹಿತಿ ಪಡೆಯಲು ಸಂಪರ್ಕಿಸಿದ್ದಾರೆ.
ಬಿಜೆಪಿಗರ ಪ್ರಕಾರ ಮಾಹಿತಿ ಪಡೆಯುವುದು ಕಿರುಕುಳವೇ? ಮಾಹಿತಿ ಅಥವಾ ದೂರು ನೀಡಲು ಆ ಯುವತಿ ಮುಂದಾಗದಿರುವುದೇಕೆ? ಸುಳ್ಳು ಸುದ್ದಿ ಹಬ್ಬಿಸುವುದಷ್ಟೇ ಆಕೆಯ ಅಜೆಂಡಾವೇ (Agenda) .ರಹಸ್ಯ ಕ್ಯಾಮರಾ ಇಡಲಾಗಿತ್ತು, ನೂರಾರು ವಿಡಿಯೋ ಮಾಡಿ ವಾಟ್ಸಾಪ್ (Whatsapp) ಗುಂಪುಗಳಿಗೆ ಶೇರ್ ಮಾಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎನ್ನುತ್ತಿರುವ ಬಿಜೆಪಿ ವಿಡಿಯೋವನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಲಿ. ಬಾಯಿ ಬಡಿದುಕೊಳ್ಳುತ್ತಿರುವ ಬಿಜೆಪಿಗೆ ವಿಡಿಯೋ ಸಾಕ್ಷಿ ಒದಗಿಸಲು ಸಾಧ್ಯವಾಗದಿರುವುದೇಕೆ? ಎಂದು ಸವಾಲು ಹಾಕಿದೆ.

ಇನ್ನು ಉಡುಪಿಯ ನೇತ್ರಾವತಿ ಪ್ಯಾರಾಮೆಡಿಕಲ್ (Paramedical) ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿಕೊಂಡು ಮಹಿಳಾ ಶೌಚಾಲಯದಲ್ಲಿ ಮೊಬೈಲ್ (Mobile) ಮೂಲಕ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು ಎನ್ನಲಾಗಿದ್ದು, ಈ ವಿವಾದ ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿಪಕ್ಷ ಬಿಜೆಪಿ ಆಗ್ರಹಿಸಿದೆ.