ಉಡುಪಿಯ ಹಿಜಾಬ್ ವಿವಾದ ಈಗ ರಾಜ್ಯಕ್ಕೆ ಹರಡಿದೆ.!

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಾದ-ವಿವಾದ ಯಾಕೋ ಅಂತ್ಯ ಕಾಣುವಂತಿಲ್ಲ.! ಹೌದು, ಸರ್ಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ತಮ್ಮ ಧರ್ಮದ ಪ್ರಕಾರವಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಉಪಸ್ಥಿತರಾಗಿ, ತರಗತಿಯಲ್ಲಿ ಪಾಠ ಕೇಳಲು ಬರುವುದಕ್ಕೆಅನುಮತಿ ನೀಡುವುದಿಲ್ಲ ಎಂದು ಕಾಲೇಜು ಮಂಡಳಿ ಪಟ್ಟು ಹಿಡಿದು ಕುಳಿತಿದೆ. ಇದೇ ರೀತಿ ಮುಸ್ಲಿಂ ಹೆಣ್ಣು ಮಕ್ಕಳು ಕೂಡ ತಾವು ಯಾವುದೇ ಕಾರಣಕ್ಕೂ ಹಿಜಾಬ್ ಧರಿಸದೇ ಬರುವುದಿಲ್ಲ ಎಂದು ಹಠ ಹಿಡಿದು ನಿಂತಿದ್ದಾರೆ.

ಸದ್ಯ ಈ ಪ್ರಕರಣ ಈಗ ರಾಜ್ಯ ಸರ್ಕಾರಕ್ಕೆ ಮುಟ್ಟುವಂತೆ ಮಾಡಿದೆ ಎನ್ನಬಹುದು. ಈ ವಿವಾದ ಕುರಿತು ಕಾಲೇಜು ಮಂಡಳಿ ತಾವು ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ತರಗತಿಗಳಿಗೆ ಹೋಗುವಂತಿಲ್ಲ ಎಂದು ತಿಳಿಸಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿರುವ ವಿದ್ಯಾರ್ಥಿನಿಯರು ಕಾಲೇಜು ಮಂಡಳಿ ನಮಗೆ ಹಿಜಾಬ್ ಧರಿಸುವುದಾದರೆ, ನಿಮಗೆ ತರಗತಿಯೊಳಗೆ ಅವಕಾಶವಿಲ್ಲ.! ಬದಲು ಆನ್‍ಲೈನ್ ಕ್ಲಾಸ್ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ.! ಎಲ್ಲರಂತೆ ನಾವು ತರಗತಿಯೊಳಗೆ ಕುಳಿತು ಪಾಠ ಕೇಳಬೇಕು ಅದಕ್ಕೆ ಅಡಿಪಡಿಸಬೇಡಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲೇಜು ಅಭಿವೃದ್ಧಿ ಮಂಡಳಿಯೂ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲು ಮುಂದಾಗಿತ್ತು. ಆದರೆ ಈಗ ತಿರುಗಿರುವ ಕಾರಣ, ವಿದ್ಯಾರ್ಥಿನಿಯರು ಈ ನಿಯಮವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಕಾಲೇಜು ಮಂಡಳಿ ನಡುವಿನ ಜಟಾಪಟಿ ಕುರಿತು ಮಾತನಾಡಿರುವ ಶಾಸಕ ರಘುಪತಿ ಭಟ್, ಮುಸ್ಲಿಂ ಮುಖಂಡರಾದ ಜಿ.ಎ ಭಾವ ಅವರೊಟ್ಟಿಗೆ ಸಂವಾದ ನಡೆಸಿದ್ದರು. ಈ ಮೂಲಕ ಆರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನು ಒಂದು ತಿಂಗಳಷ್ಟೇ ತರಗತಿ ಇದೆ. ಆ ಬಳಿಕ ಪರೀಕ್ಷೆ, ಅಲ್ಲಿಯವರೆಗೆ ಹಿಜಾಬ್ ಹಾಕಿ ಬರಲು ಅವಕಾಶ ಇಲ್ಲ, ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.

ಯಾರದ್ದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಬಾರದು ಎಂದು ಪೋಷಕರಲ್ಲಿ ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡರು. ವಸ್ತ್ರಾಸಂಹಿತೆ ಬೇಕೇ ಬೇಡವೆ ಅನ್ನುವ ಬಗ್ಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸುತ್ತೆ. ಕೋರ್ಟ್ ಆರ್ಡರ್ ಹಾಗೂ ಅನ್ಯ ರಾಜ್ಯದ ವಸ್ತ್ರ ನಿಯಮ ನೋಡಿ ಉನ್ನತ ಸಮಿತಿ ವರದಿ ಕೊಡುತ್ತೆ. ಅಲ್ಲಿಯವರೆಗೆ ವಿದ್ಯಾರ್ಥಿನಿಯರು ಹಿಜಾಬ್ ಹಾಕದೆ ತರಗತಿಯಲ್ಲಿ ಕೂರಬೇಕು. ಎಲ್ಲಾ ಕಾಲೇಜಿನಲ್ಲಿ ಹಿಜಾಬ್ ತರಗತಿ ಯಲ್ಲಿ ಅವಕಾಶ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.

Exit mobile version