ಉಡುಪಿ ನ್ಯಾಯಾಲಯದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ 3 ಲಕ್ಷ ಪಡೆದು ವಂಚಿಸಿದ ಪತ್ರಕರ್ತ!

Udupi

ದಯಾನಂದ್ ಎಂಬ ಪತ್ರಕರ್ತ(Journalist) ಜನರಿಗೆ ಮೋಸ ಮಾಡುವ ಉದ್ದೇಶದಿಂದ ಉಡುಪಿ ನ್ಯಾಯಾಲಯದಲ್ಲಿ(Udupi Magistrate Court) ಕೆಲಸ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ 3 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ.

ಮೊದಲು ದಯಾನಂದ್ ಜನರ ಮಾಹಿತಿಯನ್ನು ಪಡೆದು ನಂತರ ನಾನು ಸಂಗಮ್ ಧ್ವನಿ ಪತ್ರಿಕೆಯ ಸಂಪಾದಕ ಎಂದು ಹೇಳಿಕೊಂಡು ಜನರ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತಾನೆ. ನಂತರ ಉಡುಪಿ ನ್ಯಾಯಾಲಯದಲ್ಲಿ ಜವಾನಿ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವಿಚಾರ ತಿಳಿಯಿತು ಅದಕ್ಕೆ ನಾನು ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ ನನಗೆ ನ್ಯಾಯಾಧೀಶರ ಪರಿಚಯ ತುಂಬಾ ಚೆನ್ನಾಗಿದೆ ಎಂದು ಹೇಳಿ ಕರೆ ಮಾಡಿ ಜನರನ್ನು ನಂಬಿಸಿದ್ದಾನೆ.


ಹೀಗೆ ಜನರ ಜೊತೆ ಸ್ನೇಹ ಬೆಳೆಸಿಕೊಂಡ ದಯಾನಂದ್, ನಿಮಗೆ ಕೆಲ್ಸ ಪಕ್ಕಾ ಆಗ್ಬೇಕಾದ್ರೆ 6 ಲಕ್ಷ ಹಣ ಕೊಡಿ ಎಂದು ಡಿಮ್ಯಾಂಡ್ ಮಾಡ್ತಾನೆ. ನಮ್ಮಲ್ಲೀಗ ಅಷ್ಟು ಹಣ ಇಲ್ಲ ಅಂತ ಹೇಳಿದರೆ ಸದ್ಯಕ್ಕೆ 3 ಲಕ್ಷ ಕೊಡಿ ಇನ್ನುಳಿದ 3 ಲಕ್ಷ ಸ್ವಲ್ಪದಿನ ಬಿಟ್ಟು ನೀಡಿ ಎಂದು ಹೇಳಿ ಡೀಲ್ ಕ್ಲೋಸ್ ಮಾಡುತ್ತಾನೆ. ಈ ರೀತಿ ಎಷ್ಟೋ ಜನರಿಗೆ ಯಾಮಾರಿಸಿರುವ ಉದಾಹರಣೆಗಳೂ ಇವೆ. ಇದೇ ರೀತಿ ದಯಾನಂದ್ ನಿಂದ ಮೋಸ ಹೋದ ಒಬ್ಬ ಅಮಾಯಕ ವ್ಯಕ್ತಿ, ದಯಾನಂದ್ ಮೇಲೆ ಅನುಮಾನದಿಂದ ನೇರವಾಗಿ ಉಡುಪಿ ನ್ಯಾಯಾಲಯಕ್ಕೆ ಬಂದು ಅಲ್ಲಿನ ನ್ಯಾಯಾಲಯದ ಸಿಬ್ಬಂದಿಗಳೊಂದಿಗೆ ವಿಚಾರಿಸಿದಾಗ. ಆ ರೀತಿ ಹಣ ಪಡೆದು ಕೆಲಸ ಮಾಡಿಕೊಡುವುದಿಲ್ಲ ಎಂದು ತಿಳಿದುಬಂದಿದೆ.


ಮೋಸ ಹೋದ ವ್ಯಕ್ತಿ ದಯಾನಂದ್ ಬಗ್ಗೆ ಇನ್ನಷ್ಟು ವಿಚಾರಿಸಿದಾಗ ಅವರಿಗೆ ತಿಳಿದುಬಂದಿದೆ ಏನಂದ್ರೆ. ದಯಾನಂದ್ ಈ ಹಿಂದೆ ಜಿಂಕೆ ಚರ್ಮ ಪ್ರಕರಣದಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದರು ಎಂಬ ಸಂಗತಿ. ಅಷ್ಟೇ ಅಲ್ಲ ದಯಾನಂದ್ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಕೂಡ ಇದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಜೀವ ಬೇದರಿಕೆ ಮತ್ತು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಹೊರಟಿರುವ ವಿಚಾರವನ್ನು ಅಧಿಕಾರಿ ದೂರು ದಾಖಲಿಸಲು ಮುಂದಾಗಿ ಅವರೊಂದಿಗೆ ರಾಜಿ ಮಾಡಿಕೊಂಡಿರುತ್ತಾರೆ.

ಬೈಂದೂರು ರವಿ ಮತ್ತು ಸಂಗ್ರಾಮ್ ಧ್ವನಿಪತ್ರಿಕೆಯ ಸಂಪಾದಕ ಎಂದು ಹೇಳಿ, ಕಲ್ಲು ಕೋರೆ ಮತ್ತು ಮರಳುಗಾರಿಕೆ ಮಾಡುವವರಿಂದ ಹಣ ವಸೂಲು ಮಾಡುತ್ತಿದರು ಎಂಬ ವಿಚ್ಚರ ಕೂಡ ತಿಳಿದು ಬಂತು. ದಯಾನಂದ್ ಮುಗ್ಧ ಜನರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಈ ಜನರಿಗೆ ಮೋಸ ಮಾಡಿ ಹಣ ಪಡೆದು ಜೀವನ ನಡೆಸುತ್ತಿದ್ದಾನೆ. ಇಂತಹ ವ್ಯಕ್ತಿಯ ಮೋಸದಾಟದಿಂದ ಮುಂದೆ ಬೇರೆ ಯಾರೂ ಮೋಸ ಹೋಗಬಾರದು.

ಆದ್ದರಿಂದಾಗಿ ದಯಾನಂದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಯಾಗಬೇಕು ಮತ್ತು ಮೋಸ ಮೋಸ ಹೋದವರಿಗೆ ನ್ಯಾಯ ದೊರಕಬೇಕು ಎಂಬ ಆಗ್ರಹ ಕೇಳಿಬಂದಿದೆ.

Exit mobile version