ಉಡುಪಿಯ ನಾಲ್ವರ ಹತ್ಯೆ ಪ್ರಕರಣ: ಒಬ್ಬಳ ಮೇಲಿನ ದ್ವೇಷ ನಾಲ್ವರ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್

Udupi: ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ (Udupi murder case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿ ಪ್ರವೀಣ್ ಚೌಗಲೆ ಈ ಹಿಂದೆ​

ಪೊಲೀಸ್ ಇಲಾಖೆಯಲ್ಲಿದ್ದು, ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಕೆಲಸಕ್ಕೆ ಸೇರಿದ್ದ ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ (Air India)

ಕಂಪನಿಯಲ್ಲಿ (Udupi murder case) ಕೆಲಸ ಮಾಡುತ್ತಿದ್ದ.

ಕೊಲೆ ಮಾಡಿ ಉಡುಪಿಯಿಂದ ಪರಾರಿಯಾಗಿದ್ದ ಆರೋಪಿ ಬೆಳಗಾವಿಯ ಕುಡಚಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದ. ಮೊಬೈಲ್​​ ಟವರ್ಲೊಕೇಶನ್​​​ (Mobile Tower Location)

ಆಧರಿಸಿ ಉಡುಪಿ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಕಡಲ ಕಿನಾರೆಯಲ್ಲಿ ರಕ್ತದ ಕೊಡಿ ಹರಿಸಿದ ಹಂತಕನನ್ನ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಅಜ್ಞಾತ ಸ್ಥಳದಲ್ಲಿ ಆರೋಪಿಯ ವಿಚಾರಣೆ


ನಿನ್ನೆಯೇ ಹಂತಕ ಪ್ರವೀಣ್ ಚೌಗಲೆಯನ್ನ ಬಂಧಿಸಿದ್ದ ಪೊಲೀಸರು, ಇವತ್ತು ಬೆಳಗ್ಗೆ 4 ಗಂಟೆಗೆ ಉಡುಪಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಆರೋಪಿ ಪ್ರವೀಣ್​​ನನ್ನ ವಿಚಾರಣೆ ನಡೆಸುತ್ತಿದ್ದು,

ಮಧ್ಯಾಹ್ನದ ಬಳಿಕ ಹಂತಕನನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಹಂತಕ ಮಾಜಿ ಪೊಲೀಸ್
ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಆಗಿದ್ದ ಪ್ರವೀಣ್ ಕೆಲಸಕ್ಕೆ ಸೇರಿದ್ದ ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. 10 ವರ್ಷದಿಂದ ಏರ್​ ಇಂಡಿಯಾ

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಒಬ್ಬಳ ಮೇಲಿನ ದ್ವೇಷ – ನಾಲ್ವರ ಬಲಿ
ಮಂಗಳೂರು ಏರ್ ಪೋರ್ಟ್ ನಲ್ಲಿ ಏರ್ ಇಂಡಿಯಾ ಸಿಬ್ಬಂದಿಯಾಗಿದ್ದ ಹಂತಕ ಪ್ರವೀಣ್ ಹತ್ಯೆಯಾದ ಅಯ್ನಾಜ್ ಸಹೋದ್ಯೋಗಿಯಾಗಿದ್ದ. ಅಯ್ನಾಜ್ ಮತ್ತು ಪ್ರವೀಣ್ ಗೆ ಹಲವು ವರ್ಷಗಳ ಪರಿಚಯವಿತ್ತು.

ಭಾನುವಾರ ಮುಂಜಾನೆ ಮಂಗಳೂರಿನಿಂದ ಉಡುಪಿಗೆ ಬಂದು. ಅಯ್ನಾಜ್ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ.

ಅಯ್ನಾಜ್ ಮೃತ ಹಸೀನಾಳ ಎರಡನೇ ಮಗಳು. ಮೊದಲಿಗೆ ಹಂತಕ ಅಯ್ನಾಜ್ ಕೊಲೆ ಮಾಡಿ ಬಳಿಕ ಉಳಿದ ಮೂವರ ಹತ್ಯೆ ಮಾಡಿದ್ದಾನೆ. ಆ ಕ್ಷಣದಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಇತ್ತ ತನಿಖೆ ಆರಂಭಿಸಿದ್ದ ಉಡುಪಿ ಪೊಲೀಸರು ಅಯ್ನಾಜ್ ಸಹೋದ್ಯೋಗಿಗಳ ಪೈಕಿ ಪ್ರವೀಣ್ ಮೊಬೈಲ್ ಮಾತ್ರ ಸ್ವಿಚ್ ಆಫ್ ಆಗಿದ್ದನ್ನು ಗಮನಿಸಿ ಪ್ರವೀಣ್ ಬಗ್ಗೆಯೇ ಜಾಸ್ತಿ ಗಮನ ಹರಿಸಿದ್ರು.

ಪ್ರವೀಣ್ ಮೊಬೈಲ್ ಮಂಗಳವಾರ ಮಧ್ಯಾಹ್ನ ಆನ್ ಮಾಡುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆಗೆ ಸಹಾಯವಾಗಿದ್ದು ಬೆಳಗಾವಿ (Belagavi) ಮತ್ತು ಉಡುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ

ನರಹಂತಕ ಪ್ರವೀಣ್ ಸಿಕ್ಕಿಬಿದ್ದಿದ್ದಾನೆ.

ಇದನ್ನು ಓದಿ: ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 60ಕ್ಕೂ ಅಧಿಕ ಮಂದಿಗೆ ಗಾಯ

Exit mobile version