ಆಸ್ಪತ್ರೆಯೊಳಗೆ ಕಾರು ಹೊಕ್ಕಿಸಿ ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು.

Rishikesh: ಸಾಮಾನ್ಯವಾಗಿ ಆಸ್ಪತ್ರೆಯೊಳಗೇ ಪೊಲೀಸರು ವಾಹನ ನುಗ್ಗಿಸುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ನಲ್ಲಿಯೂ ಇಂತಹ ಘಟನೆ ನಡೆದರೆ ಹೇಗಿರಬಹುದು? ಉತ್ತರಾಖಂಡದ (Uttarakhand) ಏಮ್ಸ್ ಋಷಿಕೇಶ ಆಸ್ಪತ್ರೆಯು ಇಂತಹ ವಿಚಿತ್ರ ಹಾಗೂ ಹಿಂದೆಂದೂ ನಡೆದಿರುವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ತಮ್ಮ ವಾಹನವನ್ನು ಸೀದಾ ಋಷಿಕೇಶದಲ್ಲಿರುವ ಏಮ್ಸ್‌ನ ಎಮರ್ಜೆನ್ಸಿ ವಾರ್ಡಿಗೆ (AIMS Emergency Ward) ನುಗ್ಗಿಸಿದ್ದಾರೆ.

ಪ್ರತಿಷ್ಠಿತ ಆರೋಗ್ಯ ಸೌಕರ್ಯದ ಆಪರೇಷನ್ ಥಿಯೇಟರ್ (Operation Theatre) ಒಳಗೆ ವೈದ್ಯೆಯೊಬ್ಬರಿಗೆ ನರ್ಸಿಂಗ್ ಅಧಿಕಾರಿ ಭಾನುವಾರ ಸಂಜೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆರೋಪಿ ಸತೀಶ್ ಕುಮಾರ್, ವೈದ್ಯೆಗೆ ಅಶ್ಲೀಲ ಎಸ್‌ಎಂಎಸ್‌ ಕೂಡ ಕಳುಹಿಸಿದ್ದ ಎಂದು ಋಷಿ ಕೇಶ್ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ಬಿಷ್ಟ್ (Shankar Singh Bisht) ತಿಳಿಸಿದ್ದಾರೆ. ಸತೀಶ್ ಕುಮಾರ್‌ನನ್ನು ಅಮಾನತು ಮಾಡಿ ಬಂಧಿಸಲಾಗಿದೆ.ಅವರ ವಿರುದ್ಧ ಸೆಕ್ಷನ್ 354 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯು ರಿಷಿಕೇಷದ (Rishikesha) ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರಲ್ಲಿ ಆಕ್ರೋಶ ಮೂಡಿಸಿತ್ತು. ದುಷ್ಕೃತ್ಯ ಎಸಗಿದ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಮುಷ್ಕರ ಹೂಡಿದ್ದರು. ಡೀನ್ ಕಚೇರಿ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಬೃಹತ್ ಸಂಖ್ಯೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿದ ಪೊಲೀಸರು, ಸತೀಶ್ ಕುಮಾರ್‌ನನ್ನು (Satheesh Kumar) ಬಂಧಿಸಲು ಆಸ್ಪತ್ರೆಯ ಒಳಗೇ ವಾಹನ ನುಗ್ಗಿಸಿ ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

Exit mobile version