ದಂತವೈದ್ಯರನ್ನು ಹುಡುಕಲಾಗದೆ ತನ್ನ 13 ಹಲ್ಲುಗಳನ್ನು ತಾನೇ ಕಿತ್ತುಕೊಂಡ ಮಹಿಳೆ

Teeth

ಡೈಲಿ ಸ್ಟಾರ್‌ನ(Daily Star) ವರದಿಯ ಪ್ರಕಾರ, ಯುನೈಟೆಡ್ ಕಿಂಗ್‌ಡಂನಲ್ಲಿ(United Kingdom) ಮಹಿಳೆಯೊಬ್ಬರು ಸ್ಥಳೀಯ ರಾಷ್ಟ್ರೀಯ ಆರೋಗ್ಯ ಸೇವೆ (NHS) ದಂತವೈದ್ಯರನ್ನು(Dentist) ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ ತನ್ನ 13 ಹಲ್ಲುಗಳನ್ನು ತಾನೇ ಕಿತ್ತುಕೊಂಡಿರುವ ವಿಚಿತ್ರ ಘಟನೆಯೊಂದು ಸಂಭವಿಸಿದೆ.

ಡೇನಿಯಲ್ ವ್ಯಾಟ್ಸ್(Daniel Watt) ಎಂಬ 42 ವರ್ಷದ ಮಹಿಳೆ ದೀರ್ಘಕಾಲದ ವಸಡು ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಸ್ಥಳೀಯ ಎನ್‌ಎಚ್‌ಎಸ್ ದಂತವೈದ್ಯರನ್ನು ಹುಡುಕಲು ಸಾಧ್ಯವಾಗದ ಕಾರಣ, ತೀವ್ರ ಅಸಹಾಯಕರಾದ ಹಿನ್ನಲೆ ತಮ್ಮ ಹಲ್ಲನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಏಳು ವರ್ಷಗಳ ಹಿಂದೆ ಮಹಿಳೆ ನೆಲೆಸಿರುವ ಸ್ಥಳದಲ್ಲಿದ್ದ ದಂತವೈದ್ಯರು, ತಮ್ಮ ಕ್ಲಿನಿಕ್ ಅನ್ನು ಮುಚ್ಚಿ ಬೇರೆಡೆ ಹೋಗಿದ್ದಾರೆ. ಈ ಕಾರಣದಿಂದ ಖಾಸಗಿ ಚಿಕಿತ್ಸೆ ಪಡೆಯಲು ಆಕೆಗೆ ಸಾಧ್ಯವಾಗಲಿಲ್ಲ.

ಸಫೊಲ್ಕ್‌ನ ಬರಿ ಸೇಂಟ್ ಎಡ್ಮಂಡ್ಸ್‌ನ ಸ್ಥಳೀಯರಾದ ವ್ಯಾಟ್ ಸದ್ಯ ಈಗ ಒಟ್ಟು 13 ಹಲ್ಲುಗಳನ್ನು ಹೊಂದಿದ್ದು, ಅವುಗಳಲ್ಲಿ ಎಂಟು ಹಲ್ಲುಗಳನ್ನು ತೆಗೆದುಹಾಕಬೇಕಾಗಿದೆ. ವ್ಯಾಟ್ ಅವರು ತಾವು ನಕ್ಕರೇ ಹಲ್ಲುಗಳು ಕಾಣಿಸಬಹುದು ಎಂದು ಹೆಚ್ಚಾಗಿ ನಗುವುದಿಲ್ಲವಂತೆ. “ನಾನು ಪ್ರತಿದಿನ ಈ ಹಲ್ಲುಗಳಿಲ್ಲದ ಜೀವನವನ್ನು ಸಾಗಿಸುತ್ತಿದ್ದೇನೆ. ಹಲ್ಲು ನೋವಿಗೆ ಆಗಾಗ್ಗೆ ನಾನು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೇನೆ, ನಾನು ಕೆಲಸಕ್ಕೆ ಹೋಗುತ್ತೇನೆ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ. ಈ ಮುಖೇನ ನಾನು ನನ್ನ ಸಮಯವನ್ನು ಕಳೆಯುತ್ತೇನೆ, ನೋವನ್ನು ಮರೆಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Exit mobile version