ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!

India : ನಮ್ಮ ದೇಶ ಭಾರತವು (Unknown Facts Of BhimKund) ಹಲವಾರು ವಿಶೇಷತೆಗಳನ್ನು ಹೊಂದಿರುವ ದೇಶವಾಗಿದ್ದು, ಅದ್ಭುತ ಕಲೆ, ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮ, ಆಚಾರ ವಿಚಾರಗಳಿಂದ ಬಹಳ ಭಿನ್ನವಾಗಿ ನಿಲ್ಲುತ್ತದೆ.

ಅಲ್ಲದೇ, ನಮ್ಮ ದೇಶದ ಇತಿಹಾಸ ತನ್ನೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು, ಇದರಲ್ಲಿ ಒಂದು ಭೀಮ್ ಕುಂಡ್ (Bhim Kund).

ಈ ಭೀಮ್ ಕುಂಡ್‌ನ ವಿಶೇಷತೆ ಏನು ಗೊತ್ತಾ? ಇದುವರೆಗೂ (Unknown Facts Of BhimKund)ಈ ಬಾವಿಯ ಆಳ ಎಷ್ಟಿದೆ ಎಂದು ತಿಳಿಯಲು ಯಾರಿಗೂ ಸಾಧ್ಯವಾಗಿಲ್ಲವಂತೆ.

ಸುಪ್ರಸಿದ್ಧ ಮೇಧಾವಿಗಳು ಹಾಗೂ ವಿಜ್ಞಾನಿಗಳೇ ಈ ಬಗ್ಗೆ ಅಧ್ಯಯನ ನಡೆಸಿ, ವಿದೇಶದ ತಂಡವೇ ಬಂದು ಪರಿಶೀಲನೆ ನಡೆಸಿದರೂ ಈ ಬಾವಿಯ ನೀರಿನ ಆಳ ಕಂಡು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ!


ಈ ಭೀಮ್ ಕುಂಡ್ ಇರುವುದು ಮಧ್ಯಪ್ರದೇಶ (MadhyaPradesh) ರಾಜ್ಯದ ಚತರ್ಪುರ್ ಜಿಲ್ಲೆಯ ಭಜನಾ ಗ್ರಾಮದಲ್ಲಿ. ಬಂಡೆಗಳ ನಡುವಿನ ಗುಹೆಯಂತಹ ಜಾಗದಲ್ಲಿ ಈ ನೀರಿನ ಸೆಲೆಯಿದೆ.

ಪುರಾತನ ಕಾಲದಲ್ಲಿಯೂ ಈ ತಾಣ ಸಾಧು ಸಂತರ, ಋಷಿ ಮುನಿಗಳ ಅಚ್ಚುಮೆಚ್ಚಿನ ಪ್ರದೇಶವಾಗಿತ್ತು.

ಇದನ್ನೂ ಓದಿ : https://youtu.be/F91wdGXU0Ic ಕೆಂಗೇರಿ ಮುಖ್ಯ ರಸ್ತಯೇ ಈಗ ಕಸ ಎಸೆಯೋ ಸ್ಥಳ!

ಇದೀಗ ಈ ಬಾವಿ ಪ್ರವಾಸಿತಾಣ ಹಾಗೂ ಪ್ರಮುಖ ಅಧ್ಯಯನದ ಕೇಂದ್ರವಾಗಿ ಮಾರ್ಪಟ್ಟಿದೆ. ಅದೇ ರೀತಿ, ಈ ಬಾವಿಯ ಕತೆ ಮಹಾಭಾರತದ (Mahabharatha) ಜೊತೆಗೂ ಸಂಬಂಧ ಹೊಂದಿದೆ. ನಂಬಿಕೆಗಳ ಪ್ರಕಾರ, ಮಹಾಭಾರತ ಕಾಲದಲ್ಲಿ ವನವಾಸದ ವೇಳೆಯಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರು.

ಈ ವೇಳೆ ದ್ರೌಪದಿಗೆ ಬಹಳ ಬಾಯಾರಿಕೆಯಾಯಿತು, ಹಾಗಾಗಿ ನೀರನ್ನು ಹುಡುಕಿಕೊಂಡು ಪಾಂಡವರು ಅರಣ್ಯದಲ್ಲಿ ಎಷ್ಟು ಅಲೆದಾಡಿದರೂ ಪುಟ್ಟ ನೀರಿನ ಮೂಲವೂ ಸಿಗಲಿಲ್ಲ.

ದ್ರೌಪದಿ ಹಾಗೂ ಪಾಂಡವರ ದಾಹ ಹೆಚ್ಚಾದ ಕಾರಣ ಭೀಮ ಕೋಪದಿಂದ ತನ್ನ ಗಧೆಯಿಂದ ಜೋರಾಗಿ ಭೂಮಿಯ ಮೇಲೆ ಬಡಿದಾಗ ಈ ಬಾವಿ ನಿರ್ಮಾಣವಾಗಿ ನೀರು ಹೊರಚಿಮ್ಮಿತಂತೆ.

ಈ ಕಾರಣದಿಂದಲೇ, ಈ ಕೆರೆಗೆ ಭೀಮ್ ಕುಂಡ್ ಎನ್ನುವ ಹೆಸರು ಬಂದಿದೆ ಎನ್ನುತ್ತದೆ ಇತಿಹಾಸ. ಇಲ್ಲಿನ ಗುಹೆಯಲ್ಲಿ ಸ್ವಲ್ಪ ಕಾಲ ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದಿದ್ದರಂತೆ.

ಅದೇ ರೀತಿ, ಈ ಕೆರೆಯನ್ನು ನಾರದ್ ಕುಂಡ್ ಅಥವಾ ನೀಲ ಕುಂಡ್ ಎಂದೂ ಕರೆಯಲಾಗುತ್ತದೆ. ಆದರೆ ಈ ಕೆರೆ ಭೀಮ ಕುಂಡ್ ಎನ್ನುವ ಹೆಸರಿನಿಂದಲೇ ಬಹು ಜನಪ್ರಿಯವಾಗಿದೆ.

ಇದನ್ನೂ ಓದಿ : https://vijayatimes.com/sc-verdict-opposed/


ಇನ್ನು, ಸಾಮಾನ್ಯವಾಗಿ ಕೆರೆ ಬಾವಿ ಅಥವಾ ಸಮುದ್ರದಲ್ಲಿ ಈಜಲು ಹೋದಾಗ ಕೆಲವರು ಮುಳುಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಕೆಲವು ದಿನಗಳಲ್ಲಿ ಅವರ ಮೃತದೇಹ ಮೇಲೆ ತೇಲುತ್ತದೆ.

ಆದರೆ, ಭೀಮ ಕುಂಡದ ವಿಷಯದಲ್ಲಿ ಮಾತ್ರ ಇದು ಪೂರ್ತಿ ಉಲ್ಟಾ. ಹೌದು, ಇಲ್ಲಿ ಮುಳುಗಿದವರ ಮೃತದೇಹ ಮೇಲೆ ಬಂದ ಉದಾಹರಣೆಯೇ ಇಲ್ಲವಂತೆ!


ಈ ಭೀಮ ಕುಂಡದ ಆಳವನ್ನು ಅರಿಯುವ ಪ್ರಯತ್ನ ಆಗಾಗ ನಡೆಯುತ್ತಲೇ ಇದ್ದರೂ ಯಶಸ್ವಿಯಾಗಿಲ್ಲ. ಪ್ರಸಿದ್ಧ ಮುಳುಗು ತಜ್ಞರಿಂದಲೂ ಈ ರಹಸ್ಯ ಭೇದಿಸಲು ಸಾಧ್ಯವಾಗದೇ ಹೋದಾಗ,

ಪಂಪ್ ಮೂಲಕ ನೀರನ್ನು ಹೊರ ತೆಗೆದು ಆಳ ನೋಡುವ ಪ್ರಯತ್ನ ಮಾಡಲಾಗಿದೆ. ಆದರೆ, ಎಷ್ಟು ನೀರು ತೆಗೆಯುವ ಪ್ರಯತ್ನ ಮಾಡಿದರೂ ಅಷ್ಟೇ ನೀರು ಮತ್ತೆ ಮತ್ತೆ ತುಂಬುತ್ತಿತ್ತು!


ಈ ಬಾವಿ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಯನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ಸುನಾಮಿ, ಭೂಕಂಪದಂತಹ ವಿಕೋಪಗಳು ಸಂಭವಿಸುವ ಸಂದರ್ಭದಲ್ಲಿ,

ಈ ಭೀಮ ಕುಂಡದ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರುತ್ತದೆ. ಸಾಧಾರಣವಾಗಿ, ಈ ಕೆರೆಯ ನೀರಿನ ಮಟ್ಟ ಎಲ್ಲಾ ಸಂದರ್ಭದಲ್ಲೂ ಒಂದೇ ರೀತಿ ಇರುತ್ತದೆ.

https://fb.watch/h1MNPzgKYw/ S T ಸೋಮಶೇಖರ್ ಕ್ಷೇತ್ರ : 4 ವರ್ಷಗಳಾದ್ರೂ ಇಲ್ಲಿನ ಮನೆಗಳಿಗೆ ಸಿಕ್ಕಿಲ್ಲ ಮುಕ್ತಿ!

ಆದರೆ, ಕೆಲವು ಪ್ರಾಕೃತಿಕ ವಿಪತ್ತುಗಳ ಮುನ್ಸೂಚನೆ ನೀಡುವ ಸಂದರ್ಭದಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಮೇಲಕ್ಕೆ ಬರುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.

ಜಪಾನ್, ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ, ಸುನಾಮಿಯ ಸಂದರ್ಭದಲ್ಲಿಯೂ ಇಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತಂತೆ.
Exit mobile version